Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ
Team Udayavani, Apr 17, 2024, 4:32 PM IST
ಮಹಾನಗರ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ದಿನದಿಂದ ದಿನ ಮೀನುಗಾರಿಕೆಗೂ ಎದುರಾದಕ್ಕೆ ಕಡಿಮೆಯಾಗುತ್ತಿದ್ದಂತೆ ನೀರನ್ನು ಆಶ್ರಯಿಸುತ್ತಿರುವ ವಿವಿಧ ಭಾಗಗಳಿಗೆ ಸಂಕಷ್ಟ ಎದುರಾಗುವ ಸೂಚನೆ ಲಭ್ಯವಾಗುತ್ತಿದೆ. ಈ ಪೈಕಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುವ ಮಂಜುಗಡ್ಡೆ ಘಟಕಗಳು ನೀರಿನ ಲಭ್ಯತೆಯ ನಿರೀಕ್ಷೆಯಲ್ಲಿದ್ದು ಸದ್ಯ ಟ್ಯಾಂಕರ್‌ಗೆ ಮೊರೆ ಇಡಲಾಗುತ್ತಿದೆ.
ಮೀನುಗಾರಿಕೆ ಬಂದರು ವ್ಯಾಪ್ತಿಗೆ ಪಾಲಿಕೆ ವತಿಯಿಂದ ನೀರು ಈ ಹಿಂದೆ ನಿರಂತರವಾಗಿ ಬರುತ್ತಿತ್ತು. ಪ್ರತೀ ಡೀಸೆಲ್ ಬಂಕ್‌ನಲ್ಲಿ
ಬೋಟ್‌ಗಳಿಗೆ ಬೇಕಾಗುವ ನೀರು ಕೂಡ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಇದೂ ಸ್ಥಗಿತವಾಗಿ, ಟ್ಯಾಂಕರ್ ಮೂಲಕವೇ ನೀರಿಗೆ
ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಟ್ಯಾಂಕರ್ ನೀರಿನ ಬೆಲೆಯಲ್ಲಿಯೂ ಏರಿಕೆ ಆಗುತ್ತಿರುವ ಕಾರಣದಿಂದ ಇದು
ಮೀನುಗಾರರಿಗೆ ಹೊರೆಯಾಗುತ್ತಿದೆ.
ಈ ಮಧ್ಯೆ ತೆರೆದ ಬಾವಿಗಳು ಬತ್ತಿರುವುದರಿಂ ಮಂಜುಗಡ್ಡೆ ಘಟಕಗಳು (ಐಸ್ ಪ್ಲಾಂಟ್) ನೀರಿಗಾಗಿ ಹಣ ಕೊಡುವ
ಪರಿಸ್ಥಿತಿಯಲ್ಲಿದೆ. ಮಂಗಳೂರಿನಲ್ಲಿ 65ಮಂಜುಗಡ್ಡೆ ಘಟಕಗಳಿವೆ. ಪಾಲಿಕೆ ನೀರು ನಿರಂತರವಾಗಿ ಸಿಗದ ಕಾರಣದಿಂದ
ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಘಟಕಗಳ ಮಾಲಕರು ಈಗ ನಷ್ಟದ ಭೀತಿಯಿಂದ ತಾತ್ಕಾಲಿಕವಾಗಿ ಘಟಕ
ಬಂದ್ ಮಾಡುವ ಯೋಚನೆಯನ್ನೂ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಮೀನಿನ ಬರ ಎದುರಾಗಿತ್ತು. ಶೇ.70ರಷ್ಟು ಬೊಟ್‌ಗಳು ಕಡಲಿಗಿಳಿ ದೆ ಲಂಗರು ಹಾಕಿದ್ದವು. ಆಗ
ಮಂಜುಗಡ್ಡೆ ಘಟಕಗಳಿಗೆ ಕೆಲಸ ಇರಲಿಲ್ಲ. ಈಗ ಬೋಟ್‌ಗಳು ಮೀನುಗಾರಿಕೆಗೆ ತೆ ಳುತ್ತಿವೆ. ಆಳ ಸಮುದ್ರ ಮೀನುಗಾರಿಕೆಗೆ
ಹೋಗುವಾಗ ಬೋಟ್‌ಗಳು 10-15 ಟನ್ ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮಸ್ಯೆ ಎದುರಿಸಿದ್ದ ಮಂಜುಗಡ್ಡೆ ಘಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ.
ಟ್ಯಾಂಕರ್ ನೀರೇ ಆಶ್ರಯ
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಕೆ ಬೋಟ್ ಗಳಿಗೆ 6 ಸಾವಿರ ಲೀ. ನೀರು ಬೇಕು. ಮೊದಲು ಪಾಲಿಕೆ ನೀರು ಸಿಗುತ್ತಿದ್ದರೂ ಈಗ ಅದು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಟ್ಯಾಂ ರ್ ಮೂಲಕವೇ ನೀರು ಪಡೆಯಲಾಗುತ್ತಿದೆ. ಇದು ಮೀನುಗಾರರಿಗೆ ದೊಡ್ಡ ಹೊರೆ. – ಮೋಹನ್ ಬೆಂಗ್ರೆ, ಮೀನುಗಾರ ಮುಖಂಡರುಟ್ಯಾಂಕರ್ ನೀರು-ಐಸ್ ಘಟಕಕ್ಕೆ ಹೊರೆ!
ಸಮುದ್ರ ಮೀನುಗಾರಿಕೆಗೆ ಹೋಗುವಾಗ ಬೋಟ್‌ಗಳು 10-15 ಟನ್ ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮ ಸ್ಯೆ ಎದುರಿಸಿದ್ದ ಮಂಜುಗಡ್ಡೆ ಘಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.