ಎಂಡೋ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ಕೊರತೆ


Team Udayavani, May 15, 2020, 5:58 AM IST

ಎಂಡೋ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ಕೊರತೆ

ಸಾಂದರ್ಭಿಕ ಚಿತ್ರ.

ವಿಶೇಷ ವರದಿ-ಬೆಳ್ತಂಗಡಿ: ಸವಲತ್ತು ದಕ್ಕುವ ಭರವಸೆಯಲ್ಲೇ ದಿನದೂಡುತ್ತಿರುವ ರಾಜ್ಯದ 8,500 ಮಂದಿ ಎಂಡೋ ಸಂತ್ರಸ್ತರನ್ನು ಕೋವಿಡ್ 19 ಮಹಾಮಾರಿ ಮತ್ತಷ್ಟು ಯಾತನೆಗೆ ತಳ್ಳಿದೆ.

ಈ ಹಿಂದೆ ಸತತ ಹೋರಾಟ ನಡೆಸಿದರ ಫಲವಾಗಿ ಮಾಸಿಕ ಪಿಂಚಣಿ ಇನ್ನೇನು ಸಂತ್ರಸ್ತ ಕೈಸೇರುವ ಹಂತದಲ್ಲಿ ಕೋವಿಡ್ 19 ಕಸಿದುಕೊಂಡಂತಾಗಿದೆ. ಅತ್ತ ಮಾಸಾ ಶನವೂ ಇಲ್ಲ ಇತ್ತ ಸವಲತ್ತುಗಳು ಇಲ್ಲ ಎಂಬಂತಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 3,550 ಮಂದಿ ಮಾಸಾಶನ‌ ಪಡೆಯಲು ಅರ್ಹರಾಗಿದ್ದು, ದ.ಕ. ಉಡುಪಿ ಸಹಿತ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಗುರುತಿಸಿದ್ದರೂ ಪಿ2ಕೆ ತಂತ್ರಾಂಶ ಕೊರತೆಯಿಂದ ಮಾಸಿಕ ಪಿಂಚಣಿ ಕೈಸೇರಿರಲಿಲ್ಲ. ಇದೀಗ ಕೋವಿಡ್ 19 ಮಹಾಮಾರಿಯು ಸರಕಾರದ ಬೊಕ್ಕಸವನ್ನೇ ಬರಿದಾಗಿಸಿದ್ದರಿಂದ ಆಶ್ವಾಸನೆ ಗಳು ಮತ್ತಷ್ಟು ಜಟಿಲವಾಗುತ್ತಿವೆ.

ಪೌಷ್ಟಿಕ ಆಹಾರ ಕೊರತೆ
ಜಿಲ್ಲೆಯಲ್ಲಿ ಶೇ. 70ರಷ್ಟು ಸಂತ್ರಸ್ತರು ಬಿಪಿಎಲ್‌ ಕಾರ್ಡುದಾರರಿದ್ದು, ಸರಕಾರದಿಂದ ಪಡಿತರ, ಔಷಧ ಹೊರತು ಪಡಿಸಿ ಬೇರಾವ ಸೌಲತ್ತು ಲಭ್ಯವಿಲ್ಲ. ಕೋವಿಡ್ 19ದಿಂದ ಆಸ್ಪತ್ರೆ ಭೇಟಿ, ಔಷಧ ಸಹಿತ ಪೌಷ್ಟಿಕ ಆಹಾರದ ಕೊರತೆ ಮತ್ತಷ್ಟು ಕಾಡಿದೆ. ದ.ಕ. ಜಿಲ್ಲೆಯಲ್ಲಿ 3,550, ಉಡುಪಿಯಲ್ಲಿ 1900ಕ್ಕೂ ಅಧಿಕ ಮಂದಿ ಸಂತ್ರಸ್ತರಿದ್ದಾರೆ. ಬೆಳ್ತಂಗಡಿ ತಾಲೂಕಿನ 19 ಗ್ರಾಮಗಳಲ್ಲಿ 1,112 ಮಂದಿ ಎಂಡೋ ಸಂತ್ರಸ್ತರ ಪೈಕಿ 974 ಮಂದಿ ಅಧಿಕೃತ ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿದ್ದಾರೆ. 360 ಮಂದಿ (ಬೆಡ್‌ರಿಡನ್‌) ಮಲಗಿದಲ್ಲೇ ಇರುವವರಿದ್ದಾರೆ. ಕೋವಿಡ್ 19 ದಿಂದಾಗಿ ಪ್ಯಾಂಪರ್, ಔಷಧ ಕೊರತೆ ಕಾಡುತ್ತಿದೆ.

ಡೇ ಕೇರ್‌ ಸೆಂಟರ್‌
ಡೇ ಕೇರ್‌ ಸೆಂಟರ್‌ ಮುಚ್ಚಿದ್ದರಿಂದ ಅದನ್ನು ಅವಲಂಬಿಸಿದ್ದ ಹೆಚ್ಚಿನ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಾನಸಿಕ ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲು ಔಷಧ, ಆರೈಕೆಗೆ ಮಂಗಳೂರು ಆಸ್ಪತ್ರೆಗೆ ತೆರಳಬೇಕಿರುವ ಅನಿವಾರ್ಯ. ಅದು ಸಾಧ್ಯವಾಗದೇ ಇರುವುದರಿಂದ ಸ್ಥಳೀಯ ಆರೋಗ್ಯ ಕೇಂದ್ರದ ಆಶ್ರಯ ಪಡೆದರೂ ಸೂಕ್ತ ಔಷಧ ಲಭ್ಯವಾಗುತ್ತಿಲ್ಲ. ಶೇ. 60 ದೇಹಾರೋಗ್ಯ ತೊಂದರೆ ಇದ್ದವರಿಗೆ 3,000, ಶೇ. 25ರಿಂದ 60 ರೊಳಗಿರುವ ಮಂದಿಗೆ 1,500, ಬ್ಲೂ ಸ್ಮಾರ್ಟ್‌ ಹೊಂದಿರುವ ಸಂತ್ರಸ್ತರಾಗಿದ್ದು, ಮಕ್ಕಳಿಲ್ಲದವರು, ಕ್ಯಾನ್ಸರ್‌, ಹೃದ್ರೋಗ ಸಮಸ್ಯೆ ಇರುವ ಮಂದಿಗೆ ಬಸ್‌ ಪಾಸ್‌ ವ್ಯವಸ್ಥೆಯಷ್ಟೇ ನೀಡಲಾಗಿದೆ. ಇದು ಸದ್ಯ ಔಷಧಕ್ಕೂ ಸಾಲದಂತಾಗಿದೆ. ಸರಕಾರ ನೀಡಿದ 8 ಖಾಸಗಿ ಆಸ್ಪತ್ರೆಯಲ್ಲಿ ಒಪ್ಪಂದ ಮಾಡಿ ಸ್ಮಾರ್ಟ್‌ ಕಾರ್ಡ್‌ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳು ಒಳ ರೋಗಿಗಳಾಗಿ ದಾಖಲಿಸುತ್ತಿಲ್ಲ ಎಂಬುದು ಸಂತ್ರಸ್ತರ ಆರೋಪ.

 ಚರ್ಚಿಸಿ ಕ್ರಮ
ಎಂಡೋಸಂತ್ರಸ್ತರ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ಕೋವಿಡ್ 19 ಮುಂಜಾಗ್ರತೆಯಾಗಿ ಡೇ ಕೇರ್‌ ಸೆಂಟರ್‌ ಅನಿವಾರ್ಯವಾಗಿ ಮುಚ್ಚಲಾಗಿದೆ. ಪ್ಯಾಂಪರ್ ವ್ಯವಸ್ಥೆ ಕಲ್ಪಿಸಲು ಇಲಾಖೆಯಲ್ಲಿ ಬಜೆಟ್‌ ಹೊಂದಾಣಿಕೆಯಾಗಬೇಕಿದೆ. ಈ ಕುರಿತು ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಔಷಧ ಪೂರೈಸುವ ಸಲುವಾಗಿ ಸ್ಥಳೀಯ ಮೆಡಿಕಲ್‌ ಅವಲಂಬಿಸುವಂತೆ ಆಶಾಕಾರ್ಯಕರ್ತೆಯರು, ಎಎನ್‌ಎಂಗಳಿಗೆ ಈಗಾಗಲೆ ಸೂಚಿಸಲಾಗಿದೆ. ಅದನ್ನು ಸರಕಾರವೇ ಭರಸಿಲಿದೆ.
 -ಡಾ| ನವೀನ್‌ಚಂದ್ರ
ನೋಡಲ್‌ ಅಧಿಕಾರಿ, ದ.ಕ.

ಟಾಪ್ ನ್ಯೂಸ್

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್‌; ಸುಗಮ ಸಂಚಾರಕ್ಕೆ ಅಡ್ಡಿ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

6

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

5

Kundapura: ಜಿಲ್ಲೆಯ ರೈತರಿಗೆ ಭಾರೀ ಆಸಕ್ತಿ!

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.