Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

ಏರಿಕೆಯಾದ ಆಸ್ತಿ ತೆರಿಗೆಗೆ 'ಶೇ.20'ರ ಕಡಿವಾಣ; ಖಾಲಿ ಭೂಮಿ ತೆರಿಗೆ ಶೇ.1ಕ್ಕೆ ಇಳಿಸಲು ಸರಕಾರಕ್ಕೆ ಪತ್ರ

Team Udayavani, Dec 20, 2024, 1:16 PM IST

7(1

ಲಾಲ್‌ಬಾಗ್‌: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏರಿಕೆ ಯಾಗಿರುವ ‘ಸ್ವಯಂಘೋಷಿತ ಆಸ್ತಿ ತೆರಿಗೆ’ಯ ‘ಸ್ವರೂಪ’ದಲ್ಲಿ ಎರಡು ಮಹತ್ವದ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆಗಳನ್ನು ಸರಕಾರ ಒಪ್ಪಿದರೆ ನಗರವಾಸಿಗಳು ಸ್ವಲ್ಪ ಮಟ್ಟಿಗೆ ನಿರಾಳರಾಗಬಹುದು.

2024-25ನೇ ಸಾಲಿಗೆ ಈಗಾಗಲೇ ನಿಗದಿಯಾದ ಸ್ವತ್ತಿನ ತೆರಿಗೆ ದರದಲ್ಲಿ ಶೇ.20 ಕ್ಕಿಂತಲೂ ಹೆಚ್ಚು ತೆರಿಗೆ ಹೆಚ್ಚಳ ಹೊಂದಿರುವ ವಾಸ್ತವ್ಯದ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಶೇ.20ಕ್ಕೆ ಸೀಮಿತಗೊಳಿಸುವುದು. ಈಗಾಗಲೇ ತೆರಿಗೆ ಪಾವತಿಯಾದ ಪ್ರಕರಣಗಳಲ್ಲಿ ಮುಂದಿನ 2025- 26ನೇ ತೆರಿಗೆಯನ್ನು ಮುಂದಿನ ಸಾಲಿಗೆ ಹೊಂದಾಣಿಕೆ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಜತೆಗೆ, ಖಾಲಿ ಭೂಮಿಯನ್ನು ಹೊಂದಿರುವ ಕಟ್ಟಡಗಳನ್ನು ಒಳಗೊಂಡಿರುವ ವಸತಿ ಕಟ್ಟಡಗಳಿಗೆ ಪ್ರಸ್ತುತ ದರ ಶೇ.2 ಇರುವುದನ್ನು ಶೇ.1ಕ್ಕೆ ಇಳಿಸುವುದು ಹಾಗೂ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ಮಂಗಳೂರು ಪಾಲಿಕೆ ತೀರ್ಮಾನಿಸಿದೆ.

ಈ ಮೊದಲು ಖಾಲಿ ನಿವೇಶನಕ್ಕೆ ತೆರಿಗೆ ಇರಲಿಲ್ಲ. ಹೀಗಾಗಿ 10 ಸೆಂಟ್ಸ್‌ ಜಾಗ ಇರುವವರಿಗೆ 1 ಸಾವಿರ ಚದರ ಅಡಿಯ ಮನೆ ಇದ್ದರೆ ಅದಕ್ಕೆ ಮಾತ್ರ ತೆರಿಗೆ ಇತ್ತು. ಆದರೆ ಈಗ ಒಟ್ಟು 10 ಸೆಂಟ್ಸ್‌ ಜಾಗಕ್ಕೂ ತೆರಿಗೆ ಕ್ರಮ ಜಾರಿಯಾಗಿರುವುದು ನಗರವಾಸಿಗಳನ್ನು ಕಂಗೆಡಿಸಿತ್ತು. ಹೊಸ ಮಾರ್ಗಸೂಚಿ ಪ್ರಕಾರ ಭೂಪರಿವರ್ತನೆ ಆಗಿರುವ ಖಾಲಿ ಜಾಗಕ್ಕೂ ಶೇ.2ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು ನಗರದ ಜನರಿಗೆ ದುಬಾರಿಯಾಗುತ್ತಿದೆ ಎಂಬುದು ನಗರವಾಸಿಗಳ ಆಕ್ಷೇಪವಾಗಿತ್ತು. ಇದೀಗ ಇದನ್ನು ಶೇ.2ರಿಂದ ಶೇ.1ಕ್ಕೆ ಇಳಿಕೆ ಮಾಡಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲಾಗಿದ್ದು ಚೆಂಡು ಸರಕಾರದ ಅಂಗಳದಲ್ಲಿದೆ.

ಆಸ್ತಿ ತೆರಿಗೆ ಏರಿಕೆ; ಆಗಿದ್ದೇನು?
ಪ್ರತೀ ಹಣಕಾಸು ವರ್ಷದಲ್ಲಿ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಿ ಅಥವಾ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗದಿದ್ದಲ್ಲಿ ಪ್ರತೀ ವರ್ಷ ಶೇ.3ರಷ್ಟು ಹೆಚ್ಚಳ ಮಾಡಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು ಎಂಬ ನಿಯಮವಿದೆ. ಆಸ್ತಿ ತೆರಿಗೆಯು ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಬಹುಮುಖ್ಯ ಆದಾಯದ ಮೂಲವೂ ಹೌದು. ಹೀಗಾಗಿ ಕಾಯ್ದೆಗಳಲ್ಲಿ ತಿದ್ದುಪಡಿ ಆಗಿರುವ ಅಂಶಗಳನ್ನು ಪರಿಗಣಿಸಿ ‘ಪ್ರಸಕ್ತ ಸಾಲಿನಲ್ಲಿ ಇರುವ ಆಸ್ತಿ ತೆರಿಗೆಯ ಬೇಡಿಕೆಗಿಂತ ಕಡಿಮೆಯಾಗದ ರೀತಿಯಲ್ಲಿ’ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲು ಸರಕಾರದ ಆದೇಶವಿದೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ 1-10-2023ರಿಂದ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳನ್ನು ಜಾರಿಗೆ ತರಲಾಗಿದೆ. ಈ ಮಾರುಕಟ್ಟೆ ದರಗಳನ್ನು ಅಳವಡಿಸಿ 2024-25ನೇ ಸಾಲಿಗೆ ಆಸ್ತಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಾರ್ಗಸೂಚಿ ದರವನ್ನು ಈ ಬಾರಿಗೆ ಅಳವಡಿಸಿದ ಕಾರಣದಿಂದ ವಾಸ್ತವ್ಯ, ವಾಣಿಜ್ಯ, ವಾಸ್ತವ್ಯೇತರ, ಖಾಲಿ ನಿವೇಶನದ ತೆರಿಗೆ ದರಗಳ ಶ್ರೇಣಿ ಕಳೆದ ಬಾರಿಗಿಂತ ದುಪ್ಪಟ್ಟಾಗಿದೆ. ಇದು ಸಾರ್ವಜನಿಕರಿಗೆ ತೆರಿಗೆ ಹೊರೆ ಸೃಷ್ಟಿಸಿತ್ತು.

36 ಸಾವಿರ ಆಸ್ತಿಗಳಿಗೆ ತೆರಿಗೆ ಲಾಭ!
‘ತೆರಿಗೆ ಸ್ವರೂಪದಲ್ಲಿ ಬದಲಾವಣೆ ಮಾಡಿದ ಕಾರಣದಿಂದ ಸರಿಸುಮಾರು 36 ಸಾವಿರ ಸ್ವತ್ತುಗಳ ತೆರಿಗೆ ಕ್ರಮದಲ್ಲಿ ಬದಲಾವಣೆ ಆಗಲಿದೆ. ಇಷ್ಟೂ ಸ್ವತ್ತುಗಳಿಗೆ ಶೇ.20ಕ್ಕಿಂತ ಅಧಿಕ ತೆರಿಗೆ ಪಾವತಿ ಮಾಡುವವರಿದ್ದರೆ ಅಥವಾ ಮಾಡಿದ್ದರೆ ಅವರ ತೆರಿಗೆ ಶ್ರೇಣಿ ಶೇ.20ರೊಳಗೆ ಇರಲಿದೆ’ ಎನ್ನುತ್ತಾರೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ.

ತೆರಿಗೆ ಬದಲಾದರೂ ಸಾಫ್ಟ್ವೇರ್‌ನಲ್ಲಿ ಬದಲಾಗಿಲ್ಲ!
ಸ್ವಯಂಘೋಷಿತ ಆಸ್ತಿ ತೆರಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆಯಾದರೂ ಪಾಲಿಕೆ ಸಾಫ್ಟ್ವೇರ್‌ನಲ್ಲಿ ಮಾತ್ರ ಬದಲಾಗಿಲ್ಲ. ಪಾಲಿಕೆ ನಿರ್ಣಯ ಮಾಡಿದೆಯಾದರೂ ಸಾಫ್ಟ್ ವೇರ್‌ನಲ್ಲಿ ಇದು ಅನ್ವಯವಾಗದಿದ್ದರೆ ಹಾಲಿ ತೆರಿಗೆ ಪಾವತಿ ಮಾಡುವವರಿಗೆ ಸದ್ಯಕ್ಕೆ ಲಾಭ ದೊರೆಯದು. ಈ ಮಧ್ಯೆ, ‘ಎರಡು ಪ್ರಸ್ತಾವನೆಗಳಿಗೆ ಸರಕಾರ ಒಪ್ಪಿಗೆ ನೀಡಿದರಷ್ಟೇ ಅಂತಿಮವಾಗಲಿದೆ. ಒಂದು ವೇಳೆ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಅವರಿಗೆ ಮುಂದಿನ ವರ್ಷದ ತೆರಿಗೆಯಲ್ಲಿ ಹೊಂದಾಣಿಕೆಗೆ ಅವಕಾಶ ಸಿಗಲಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಮೇಯರ್‌ ಅವರಿಗೆ ಅಧಿಕಾರ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರವು ಜಾರಿಗೆ ತಂದಿರುವ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧಿನಿಯಮ 2021ರ ಪ್ರಕಾರ ಹೊಸ ತಿದ್ದುಪಡಿ ಅಧಿನಿಯಮದಂತೆ ವಸೂಲಿ ಮಾಡಲಾಗುತ್ತಿರುವ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಪ್ರಸ್ತುತ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕರಿಗೆ ಹೊರೆಯಾಗ ದಂತೆ ದರಗಳ ಶ್ರೇಣಿಯನ್ನು ನಿಗದಿಗೊಳಿಸಿ ಮರುಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ಯೊಂದಿಗೆ ಚರ್ಚಿಸುವ ಕುರಿತು ಮೇಯರ್‌ಗೆ ಅಧಿಕಾರ ನೀಡಲಾಗಿತ್ತು. ಅದರಂತೆ ಮೇಯರ್‌ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು ಎರಡು ನಿರ್ಧಾರಗಳನ್ನು ಇದೀಗ ಕೈಗೊಳ್ಳಲಾಗಿದೆ.

ಎರಡು ಮಹತ್ವದ ತೀರ್ಮಾನ
ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಸದ್ಯ ಸಾರ್ವಜನಿಕರಿಗೆ ಆಗುತ್ತಿರುವ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಆ ತೆರಿಗೆ ಸ್ವರೂಪವನ್ನೇ ಬದಲಾಯಿಸಲಾಗಿದೆ. ಶೇ.20ರಷ್ಟು ತೆರಿಗೆ ನಿಗದಿ ಮಾಡುವ ನಿರ್ಣಯವನ್ನು ಪಾಲಿಕೆ ಕೈಗೊಂಡಿದೆ. ಖಾಲಿ ಆಸ್ತಿಯ ತೆರಿಗೆ ಕಡಿಮೆ ಮಾಡಲು ಸರಕಾರಕ್ಕೆ ಪತ್ರ ಬರೆಯುವ ತೀರ್ಮಾನ ಕೈಗೊಳ್ಳಲಾಗಿದೆ.
– ಮನೋಜ್‌ ಕುಮಾರ್‌ ಮೇಯರ್‌, ಮಂಗಳೂರು ಪಾಲಿಕೆ

ಸರಕಾರದ ಗಮನಕ್ಕೆ
ಮಂಗಳೂರು ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಗೆ ಸಂಬಂಧಿಸಿ ಕೈಗೊಂಡ ನಿರ್ಣಯಗಳನ್ನು ಸರಕಾರದ ಗಮನಕ್ಕೆ ತರಬೇಕಿದೆ. ಸರಕಾರ ಒಪ್ಪಿಗೆ ನೀಡಿದ ಬಳಿಕ ಇದರ ಅನುಷ್ಠಾನ ನಡೆಸಲಾಗುತ್ತದೆ.
– ಆನಂದ್‌ ಸಿ.ಎಲ್‌. ಆಯುಕ್ತರು, ಮಂಗಳೂರು

-ದಿನೇಶ್‌ ಇರಾ

ಟಾಪ್ ನ್ಯೂಸ್

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

3

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.