ಮೂಲ್ಕಿ ಅಗ್ನಿಶಾಮಕ ಠಾಣೆಗೆ ಜಮೀನು ಮಂಜೂರು

Team Udayavani, Aug 27, 2019, 5:29 AM IST

n-25

ಹಳೆಯಂಗಡಿ: ಮೂರು ದಶಕಗಳ ಬೇಡಿಕೆಯ ಮೂಲ್ಕಿ ಅಗ್ನಿ ಶಾಮಕ ಠಾಣೆಗೆ ಕೊನೆಗೂ ಜಮೀನು ಮಂಜೂರಾಗಿದ್ದು, ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರ ಮೂಲಕ ಮೂಲ್ಕಿ ನಾಗರಿಕ ಸಮಿತಿಯು ಮನವಿ ಫಲಿಸಿದೆ. ಇನ್ನು ರಾಜ್ಯ ಸರಕಾರದ ಮಟ್ಟದಲ್ಲಿ ಠಾಣೆಯ ಯೋಜನೆಯ ನೀಲನಕ್ಷೆ ತಯಾರಿಸಬೇಕಿದೆ.

ಜಿಲ್ಲೆಯಲ್ಲಿ ಪಾಂಡೇಶ್ವರ, ಕದ್ರಿ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಅಗ್ನಿಶಾಮಕ ಠಾಣೆಯ ತುರ್ತು ಸೇವೆಗಳ ಮೂಲಕ ತಾಲೂಕು ಮಟ್ಟದಲ್ಲಿ ಕಾರ್ಯಾ ಚರಿಸುತ್ತಿದ್ದು, ಇದೀಗ ಮೂಲ್ಕಿ ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿರುವುದರಿಂದ ಉಡುಪಿ ಮತ್ತು  ದ.ಕ. ಜಿಲ್ಲೆಯ ಮಧ್ಯಭಾಗದಲ್ಲಿ ಕಾರ್ಯಗತಗೊಳ್ಳಲಿದೆ.

ಕೊಲಾ°ಡು ಕೈಗಾರಿಕೆ ಪ್ರಾಂಗಣ, ಮುಕ್ಕದ ಕೈಗಾರಿಕೆ ಘಟಕಗಳು ತಗ್ಗು ಪ್ರದೇಶಗಳಾದ ಮಟ್ಟು, ಮಾನಂಪಾಡಿ, ಕರ್ನಿರೆ, ಪಂಜ- ಕೂಕುಡೆ, ಉಲ್ಯ, ಸಸಿಹಿತ್ಲುವಿನಂತಹ ಪ್ರದೇಶದಲ್ಲಿ ನೆರೆ ಹಾವಳಿ, ಪಕ್ಕದ ಚೇಳಾರು, ಪೆರ್ಮುದೆ, ಎಕ್ಕಾರು, ಬಜಪೆ ಪ್ರದೇಶಗಳಿಗೂ ಅನುಕೂಲವಾಗ ಲಿದೆ. ಪ್ರಸ್ತುತವಾಗಿ ಮಂಗಳೂರು, ಕದ್ರಿ, ಮೂಡಬಿದಿರೆ ಅಗ್ನಿ ಶಾಮಕ ದಳವನ್ನೇ ನಂಬಿರಬೇಕಾಗಿದೆ.

ಜಮೀನಿನ ಲಭ್ಯತೆ
ಕೊಲ್ನಾಡು ಕೈಗಾರಿಕೆ ಪ್ರದೇಶದ ಹೆದ್ದಾರಿ ಬಳಿಯ ಪೆಟ್ರೋಲ್‌ ಪಂಪ್‌ನ ಬಳಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಒಂದು ಎಕ್ರೆ ಪ್ರದೇಶವನ್ನು ಸರಕಾರ ಮೀಸಲಿರಿಸಿತ್ತು. ಈ ಜಮೀನಿನಲ್ಲಿ ಪಂಚಾಯತ್‌ನ ನೀರು ಶೇಖರಣೆಯ ಸಂಪು ಇದೆ. ಇದಕ್ಕೆ 6.25 ಸೆಂಟ್ಸ್‌ ಮೀಸಲಾಗಿದ್ದು ಉಳಿದ ಜಮೀನನ್ನು ಅಗ್ನಿಶಾಮಕ ಠಾಣೆಗೆ ನೀಡಲು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸಹಿತ ಕಂದಾಯ ಇಲಾಖೆಯು ಶಿಫಾರಸ್ಸು ಮಾಡಿದೆ. ಈಗ ಜಮೀನನ್ನು ಮಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ರಿಜಿಸ್ಟ್ರಿ ಮಾಡಲಾಗಿದೆ. ನಗರ ಪಂಚಾಯತ್‌ಸಹ ತನ್ನ ಶುಲ್ಕವನ್ನು ಪಡೆಯದೇ ಸಹಕಾರ ನೀಡಿದೆ, ಕೆಐಎಡಿಬಿ ಸಹ ಅಧಿಕೃತ ಜಮೀನಿನ ಶುಲ್ಕವನ್ನು ಸಹ ಪಡೆಯದೇ ಉಚಿತ ವಾಗಿ ಹಂಚಿಕೆ ಮಾಡಲು ಅನುಮೋದಿಸಿದೆ.

ತಾತ್ಕಾಲಿಕವಾಗಿ ಆರಂಭವಾಗಲಿ
ನಿರ್ಧರಿಸಿದ ಜಮೀನಿನಲ್ಲಿ ಅಗ್ನಿಶಾಮಕ ಠಾಣೆ ಆರಂಭವಾಗು ವವರೆಗೂ ಖಾಲಿ ಇರುವ ನಗರ ಪಂಚಾ ಯತ್‌ ಹತ್ತಿರದ ಸರಕಾರಿ ಕಟ್ಟಡದಲ್ಲಿ ಠಾಣೆಯನ್ನು ತೆರೆದು ಕಾರ್ನಾಡು ಗಾಂಧಿಧೀ ಮೈದಾನದಲ್ಲಿ ಘಟಕದ ಕವಾಯತ್ತನ್ನು ಮಾಡಬಹುದು. ಮಡಿವಾಳ ಕೆರೆಯಲ್ಲಿನ ನೀರನ್ನು ಘಟಕಕ್ಕೆ ಉಪಯೋಗಿಸುವ ಅವಕಾಶ ಇದೆ ಎಂದು ಮೂಲ್ಕಿ ನಾಗರಿಕ ಸಮಿತಿಯ ಮನ್ಸೂರ್‌ ಅವರು ಹೇಳುತ್ತಾರೆ.

ಸಮೀಕ್ಷೆ ನಡೆಯಲಿದೆ
ಮೂಲ್ಕಿ ಸುತ್ತಮುತ್ತ ಪ್ರದೇಶಕ್ಕೆ ಅನುಗುಣವಾಗಿ ಅಗ್ನಿಶಾಮಕ ದಳ ಆರಂಭಿ ಸ ಲು ಸರಕಾರದ ನಿರ್ದೇಶನದಂತೆ ಗ್ರಾಮ, ಗ್ರಾಮಸ್ಥರ ಹಾಗೂ ಪರಿಸರದ ಬಗ್ಗೆ ಸಂಪೂರ್ಣ ಮಾಹಿತಿ ಯೊಂದಿಗೆ ಜಮೀನು ಲಭ್ಯತೆ ಪತ್ರ ವನ್ನು ಕಂದಾಯ ಇಲಾಖೆಯ ಮೂಲಕ ಕ್ರೂಡಿಕರಿಸಿಕೊಂಡು ಮೇಲ ಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಜತೆಗೆ ಪ್ರತಿಗಳನ್ನು ರಾಜ್ಯದ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ, ಕೇಂದ್ರದಿಂದ ಸಮೀಕ್ಷೆ ನಡೆಸಿ, ಠಾಣೆಗೆ ಬೇಕಾದ ಕಟ್ಟಡ, ವಾಹನ, ಸಿಬಂದಿ ಬಗ್ಗೆ ಯೋಜನೆ ರೂಪಿಸುವ ಕಾರ್ಯ ಇಲಾಖೆ ಮಟ್ಟದಲ್ಲಿ ನಡೆಯಲಿದೆ.
 - ಟಿ.ಎನ್‌. ಶಿವಂಶಕರ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಅಗತ್ಯವಿದ್ದೆಡೆ ಠಾಣೆ
ಮೂಲ್ಕಿಯಲ್ಲಿ ಅಗ್ನಿಶಾಮಕ ಠಾಣೆಯು ಬಹು ವರ್ಷದ ಬೇಡಿಕೆಯಾಗಿದೆ. ಮೂಲ್ಕಿ ಪ್ರದೇಶ ಜಿಲ್ಲೆಯ ಗಡಿಭಾಗದಲ್ಲಿದೆ ಮತ್ತು ಪಕ್ಕದ ಉಡುಪಿ ಜಿಲ್ಲೆಗೂ ಇದರ ಅನುಕೂಲತೆ ಇದೆ ಜನ ಸಂಖ್ಯೆ ಸಹಿತ, ಅಭಿವೃದ್ಧಿ ಹೊಂದುತ್ತಿರುವ ಮೂಲ್ಕಿಯ ಠಾಣೆಯನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಪ್ರಯತ್ನಿಸಲಿದ್ದೇನೆ.
 - ಉಮಾನಾಥ ಕೋಟ್ಯಾನ್‌, ಶಾಸಕರು, ಮೂಲ್ಕಿ-ಮೂಡಬಿದಿರೆ ಕ್ಷೇತ್ರ

 ಮೂರು ದಶಕದ ಹೋರಾಟ
ಮೂಲ್ಕಿಗೆ ಒಂದು ಅಗ್ನಿಶಾಮಕ ದಳದ ಅವಶ್ಯಕತೆಯನ್ನು ಕಳೆದ ಮೂರು ದಶಕದಿಂದ ಮೂಲ್ಕಿ ಪುರಸಭೆಯ ಅಧ್ಯಕ್ಷರಾಗಿದ್ದ ಶೇಖರ ಕೋಟ್ಯಾನ್‌ ಅವರ ಮೂಲಕ ಸರಕಾರಕ್ಕೆ ಬೇಡಿಗೆ ಸಲ್ಲಿಸಿದ್ದೆವು, ಅನಂತರ ನಿರಂತರವಾಗಿ ವಿವಿಧ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸುತ್ತಲೇ ಇದ್ದೆವು.
 -ಹರಿಕೃಷ್ಣ ಪುನರೂರು, ಅಧ್ಯಕ್ಷರು,ನಾಗರಿಕ ಸಮಿತಿ ಮೂಲ್ಕಿ

- ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

BGV-CM

UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Nuclear-Plant

Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

BGV-CM

UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.