18 ರಸ್ತೆಗೆ ಕಾಯಕಲ್ಪ; ಭೂಸ್ವಾಧೀನಕ್ಕೆ ಮುಂದಾದ ಪಾಲಿಕೆ

ಫುಟ್‌ಪಾತ್‌-ಚರಂಡಿ ಕಾಮಗಾರಿಗೆ ಭೂಮಿ ಅಗತ್ಯ

Team Udayavani, Jun 2, 2022, 11:21 AM IST

ira

ಮಹಾನಗರ: ಮಂಗಳೂರಿನ ಹೃದಯಭಾಗದ 18 ಪ್ರಮುಖ ರಸ್ತೆಗಳನ್ನು ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸಲು ಉದ್ದೇ ಶಿಸಲಾಗಿದ್ದು, ಇದರಂತೆ, ರಸ್ತೆ ವಿಸ್ತರಣೆಗೆ ಅಗತ್ಯದ ಜಾಗವನ್ನು ಖಾಸಗಿ ಭೂ ಮಾಲಕರಿಂದ ಭೂಸ್ವಾಧೀನಪಡಿಸಿಕೊಳ್ಳುವ ಮಹತ್ವದ ತೀರ್ಮಾನ ವನ್ನು ಮಂಗಳೂರು ಪಾಲಿಕೆ ಕೈಗೊಂಡಿದೆ.

ಈಗಾಗಲೇ ನಗರದ 18 ಕಡೆ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ಸ್ಮಾರ್ಟ್‌ ಸಿಟಿ ನಿರ್ಧರಿಸಿತ್ತು. ಆದರೆ ಬಹುತೇಕ ರಸ್ತೆಗಳ ಭೂಸ್ವಾಧೀನ ಸಂಬಂಧಿತ ವಿಚಾರ ಪೂರ್ಣ ವಾಗದೆ ಪಾಲಿಕೆಯಲ್ಲಿ ಬಾಕಿಯಾಗಿತ್ತು. ಭೂಸ್ವಾಧೀನ ಆಗದೆ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿರಲಿಲ್ಲ. ಈ ಮಧ್ಯೆ, ಕೆಲವೆಡೆ ರಸ್ತೆ ವಿಸ್ತ ರಣೆಗೊಂಡು ಅಭಿವೃದ್ಧಿಯಾಗಿದ್ದರೂ ಅಲ್ಲಿ ಫುಟ್‌ಪಾತ್‌-ಚರಂಡಿ ಕಾಮಗಾರಿ ನಡೆಸಲು ಭೂಮಿ ಅಗತ್ಯವಿದೆ. ಈ ಕಾರಣದಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲು ಪಾಲಿಕೆ ಮುಂದಡಿ ಇಟ್ಟಿದೆ.

18 ಆಯ್ದ ರಸ್ತೆಗಳ ಅಗಲವನ್ನು ಆರ್‌ಒಡಬ್ಲ್ಯು (ರೈಟ್‌ ಆಫ್‌ ವೇ) ನಿಗದಿಪಡಿಸುವಂತೆ ಕೋರಿ ಸ್ಮಾರ್ಟ್‌ಸಿಟಿಯಿಂದ ಮಂಗಳೂರು ಪಾಲಿಕೆಗೆ ಇತ್ತೀಚೆಗೆ ಪತ್ರ ಬರೆಯಲಾಗಿತ್ತು. ಇದರಂತೆ, ನಗರದ ಕೆಲವು ರಸ್ತೆಗಳ ಅಗಲ ನಿಗದಿಪಡಿಸಿ ಪಾಲಿಕೆ ಇದೀಗ ನಿರ್ಧಾರ ಪ್ರಕಟಿಸಿದೆ.

ಯಾವೆಲ್ಲ ರಸ್ತೆಗಳು?

ಬಂದರು ಪೊಲೀಸ್‌ ಸ್ಟೇಶನ್‌ನಿಂದ ಹೊಗೆಬಜಾರ್‌ ರೈಲ್ವೇ ಕ್ರಾಸಿಂಗ್‌ವರೆಗೆ 12 ಮೀ. ಅಗಲ ನಿಗದಿಪಡಿಸಲಾಗಿದೆ. ಪಾಂಡೇಶ್ವರ ನ್ಯೂ ರೋಡ್‌ನ‌ ಓಲ್ಡ್‌ ಕೇಂಟ್‌ ರಸ್ತೆಯಿಂದ ಎನ್‌.ಸಿ.ಸಿ. ಕ್ಯಾಂಟೀನ್‌ವರೆಗೆ 9 ಮೀ. ಅಗಲ, ವಯಾ ಐಎಂಎ ಮೂಲಕ ಹಂಪನಕಟ್ಟೆ ರಸ್ತೆಯಿಂದ ನಂದಿಗುಡ್ಡೆ ರಸ್ತೆಯವರೆಗೆ 12 ಮೀ. ಅಗಲ, ಮಿಲಾಗ್ರಿಸ್‌ ಅಡ್ಡ ರಸ್ತೆಯ ಕೆಎಂಸಿ ಮರ್ಕರಾ ಟ್ರಂಕ್‌ ರಸ್ತೆಯಿಂದ ಫಳ್ನೀರ್‌ ರಸ್ತೆ 12 ಮೀ. ಅಗಲ, ಕೆನರಾ ಛೇಂಬರ್‌ ವ್ಯಾಪ್ತಿಯ (ಮೊಹಮ್ಮದ್‌ ಆಲಿ ಅಡ್ಡ ರಸ್ತೆ) ಬಾಂಬೆ ಲಕ್ಕಿ ರಸ್ತೆಯಿಂದ ಬದ್ರಿಯಾ ಶಾಲೆ/ಹಳೆ ಬಂದರು ರಸ್ತೆ 9 ಮೀ. ಅಗಲದಲ್ಲಿ ಅಭಿವೃದ್ಧಿಗೊಳ್ಳಲಿದೆ.

ಜಪ್ಪು ಮಾರ್ಕೆಟ್‌ ವ್ಯಾಪ್ತಿಯ ಕಾಸ್ಸಿಯಾ ಜಂಕ್ಷನ್‌ನಿಂದ ಬೋಳಾರ ಮುಖ್ಯರಸ್ತೆಯವರೆಗೆ 18 ಮೀ. ಅಗಲ, ಸೆಂಟ್ರಲ್‌ ಮಾರ್ಕೆಟ್‌ ವ್ಯಾಪ್ತಿಯ ಕಲ್ಪನಾ ಸ್ವೀಟ್ಸ್‌ನಿಂದ ಮಾಡರ್ನ್ ಬೆಡ್‌ಹೌಸ್‌ವರೆಗೆ 15 ಮೀ. ಅಗಲ, ರೂಪವಾಣಿ ಥಿಯೇಟರ್‌ ವ್ಯಾಪ್ತಿಯ ಭವಂತಿ ಸ್ಟ್ರೀಟ್‌ ಜಂಕ್ಷನ್‌ ನಿಂದ ಫೆಲಿಕ್ಸ್‌ ಪೈ ಬಝಾರ್‌ವರೆಗೆ 12 ಮೀ. ಅಗಲ, ಅಜಿಜುದ್ಧೀನ್‌ 2ನೇ ಅಡ್ಡ ರಸ್ತೆ ವ್ಯಾಪ್ತಿಯ ಎಂಪಿಟಿ ರಸ್ತೆಯಿಂದ ಅಜಿಜುದ್ದೀನ್‌ ರಸ್ತೆಯವರೆಗೆ 9 ಮೀ. ಅಗಲ, ಎಂಪಿಟಿ 3ನೇ ಅಡ್ಡ ರಸ್ತೆ ವ್ಯಾಪ್ತಿಯ (ಜಲರಾಮ ದೇವಸ್ಥಾನದ ಹತ್ತಿರ ರಸ್ತೆ) ಎಂಪಿಟಿ ರಸ್ತೆಯಿಂದ ಅಜಿಜುದ್ಧೀನ್‌ ರಸ್ತೆ 9 ಮೀ. ಅಗಲ, ಅನ್ಸಾರಿ ರಸ್ತೆ ವ್ಯಾಪ್ತಿಯ ಹಳೆ ಬಂದರು ರಸ್ತೆಯಿಂದ ಕಂಡತಪಳ್ಳಿ ವೆಟ್‌ವೆಲ್‌ವರೆಗೆ 9 ಮೀ. ಅಗಲದಲ್ಲಿ ಅಭಿವೃದ್ಧಿಯಾಗಲಿದೆ.

ಹಳೆಬಂದರು ವ್ಯಾಪ್ತಿಯ ಬದ್ರಿಯಾ ಶಾಲೆ ರಸ್ತೆಯಿಂದ ಬಂದರ್‌ ಗೇಟ್‌ವರೆಗೆ 9 ಮೀ., ನಿರೇಶ್ವಾಲ್ಯದ ರೊಸಾರಿಯೋ ಚರ್ಚ್‌ ರಸ್ತೆಯಿಂದ ಗೂಡ್‌ಶೆಡ್‌ ರಸ್ತೆಯವರೆಗೆ 9 ಮೀ., ಸಂಜೆವಾಣಿ ವ್ಯಾಪ್ತಿಯ ನಿರೇಶ್ವಾಲ್ಯ ರಸ್ತೆಯಿಂದ ಗೂಡ್‌ಶೆಡ್‌ ವರೆಗೆ 9 ಮೀ. ಅಗಲ, ಪೋರ್ಟ್‌ರೋಡ್‌ನ‌ ಹ್ಯಾಮಿಲ್ಟನ್‌ ಜಂಕ್ಷನ್‌ನಿಂದ ಬದ್ರಿಯಾ ಶಾಲೆ ಜಂಕ್ಷನ್‌ 18 ಮೀ., ವಿಆರ್‌ಎಲ್‌ ಉತ್ತರ ರಸ್ತೆಯ ಜುಮ್ಮಾ ಮಸೀದಿ ರಸ್ತೆಯಿಂದ ಹಳೆಬಂದರುವಿನ 2 ಪ್ರತ್ಯೇಕ ರಸ್ತೆಗಳು 12 ಮೀ., ರೈಲು ನಿಲ್ದಾಣ ವ್ಯಾಪ್ತಿಯ ಯು.ಪಿ. ಮಲ್ಯ ರಸ್ತೆಯಿಂದ ಕೇಂದ್ರ ರೈಲು ನಿಲ್ದಾಣ ರಸ್ತೆ 12 ಮೀ. ವಿಸ್ತರಣೆಗೆ ನಿರ್ಧರಿಸಲಾಗಿದೆ.

ಖಾಸಗಿ ಭೂ ಮಾಲಕರಿಗೆ ನೋಟಿಸ್‌

ಸಂಬಂಧಪಟ್ಟ ರಸ್ತೆಯ ವಿಸ್ತರಣೆ ನೆಲೆಯಿಂದ ಭೂಸ್ವಾಧೀನ ಪ್ರಕ್ರಿಯೆಗೆ ಪಾಲಿಕೆ ಒಪ್ಪಿಗೆ ನೀಡಿದೆ. ಈ ಮೂಲಕ ಮುಂದೆ ಸಂಬಂಧಪಟ್ಟ 18 ರಸ್ತೆಗಳ ನಕ್ಷೆ ಸಿದ್ಧಪಡಿಸಿ ಮಾರ್ಕಿಂಗ್‌ ಮಾಡಲಾಗುತ್ತದೆ. ಖಾಸಗಿ ಭೂಮಿ ಯಾರಿಂದ ಪಡೆಯಬೇಕಾಗುತ್ತದೆ ಎಂಬ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತದೆ. ಅದರಂತೆ ಸಂಬಂಧಪಟ್ಟ ಭೂಮಾಲಕರಿಗೆ ಪಾಲಿಕೆಯಿಂದ ನೋಟಿಸ್‌ ನೀಡಲಾಗುತ್ತದೆ. ಅದರಂತೆ ಭೂಪರಿಹಾರಕ್ಕಾಗಿ ಟಿ.ಡಿ.ಆರ್. ನೀಡುವ ಪ್ರಕ್ರಿಯೆ ನಡೆಯುತ್ತದೆ. ಇದು ಪೂರ್ಣವಾದ ಬಳಿಕ ಸಂಬಂಧಪಟ್ಟ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿ ಕಾಮಗಾರಿ ನಡೆಸಲು ಪಾಲಿಕೆಯು ಅನುಮತಿ ನೀಡಲಿದೆ. ಸದ್ಯ ಮಳೆಗಾಲ ಆರಂಭವಾಗುತ್ತಿರುವ ಕಾರಣದಿಂದ ಈ ರಸ್ತೆಗಳ ವಿಸ್ತರಣೆ ಕಾಮಗಾರಿ ಮಳೆಗಾಲದ ಅನಂತರವಷ್ಟೇ ಆಗುವ ಸಾಧ್ಯತೆಯಿದೆ.

ಸ್ಮಾರ್ಟ್‌ಸಿಟಿ ಮುಖೇನ ರಸ್ತೆ ಅಭಿವೃದ್ಧಿ

ನಗರದ 18 ರಸ್ತೆಯ ವಿಸ್ತರಣೆ ಅಥವಾ ಚರಂಡಿ, ಫುಟ್‌ಪಾತ್‌ ಕಾಮಗಾರಿ ಕೈಗೊಳ್ಳಲು ಅಗತ್ಯ ವಿರುವ ಜಾಗವನ್ನು ಖಾಸಗಿ ಭೂಮಾಲೀಕರಿಂದ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಈಗಾಗಲೇ ಪಾಲಿಕೆ ತೀರ್ಮಾನಿಸಿದೆ. ಬಳಿಕ ಸ್ಮಾರ್ಟ್‌ಸಿಟಿ ಮುಖೇನ ಈ ರಸ್ತೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. – ಪ್ರೇಮಾನಂದ ಶೆಟ್ಟಿ, ಮೇಯರ್‌, ಪಾಲಿಕೆ

-ದಿನೇಶ್ ಇರಾ

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.