ಎಡಪದವು ಲಾವಂಚಕ್ಕೆ ಮಡಿಕೇರಿಯಲ್ಲಿ ಭಾರೀ ಬೇಡಿಕೆ
ಮಣ್ಣು ಕುಸಿತ, ಕೊರೆತಕ್ಕೆ ಲಾವಂಚ ಗಿಡ ಪರಿಹಾರ
Team Udayavani, Aug 5, 2019, 12:04 AM IST
ಕೈಕಂಬ: ಕಳೆದ ವರ್ಷ ಮಡಿಕೇರಿಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಗುಡ್ಡ ಕುಸಿತಗೊಂಡು ಜೀವ ಹಾನಿ ಸಂಭವಿಸಿತ್ತು. ಮಣ್ಣು ಕುಸಿತಕ್ಕೆ ಲಾವಂಚ ಗಿಡವೂ ಪರಿಹಾರವಾಗಿದ್ದು ಎಡಪದವಿನ ರೈತರೊಬ್ಬರು ಬೆಳೆದ ಲಾವಂಚ ಗಿಡಕ್ಕೆ ಭಾರೀ ಬೇಡಿಕೆ ಬಂದಿದೆ.
ಮಂಗಳೂರು ಮೂಲದ ಕೃಷಿಕ ಮಂಜುನಾಥ ಭಟ್ ಅವರು ಎಡಪದವಿನ ಪದರಂಗಿಯಲ್ಲಿನ ಸುಮಾರು 3 ಎಕ್ರೆಜಮೀನಿನಲ್ಲಿ ಪೊಳಲಿ ಪದ್ಮನಾಭ ಭಟ್, ಕಾಜಿಲ ಪದ್ಮನಾಭ ದಾಸ್ ಇಬ್ಬರೂ ಸೇರಿ ಲಾವಂಚ ಗಿಡವನ್ನು ಬೆಳೆದಿದ್ದಾರೆ.
ಹುಲ್ಲಿನಂತೆ ಇರುವ ಲಾವಂಚ ಗಿಡವೂ 9 ತಿಂಗಳಲ್ಲಿ ಸುಮಾರು 4 ಅಡಿಗಳಷ್ಟು ಎತ್ತರ ಬೆಳೆದು, ಇದರ ಬೇರು ಆಳಕ್ಕೆ ಇಳಿಯುತ್ತದೆ. ಸುಮಾರು 4 ಅಡಿಗಳಷ್ಟು ಇಳಿಯುವ ಈ ಬೇರು ಬಲೆಯಂತೆ ಹರಡಿಕೊಳ್ಳುತ್ತದೆ.
ಈ ಬೆಳೆಯು ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣಿನ ಕೊರೆತ ಅಥವಾ ಕುಸಿತಕ್ಕೆ ತಡೆಯಾಗಲಿದೆ. 3 ವರ್ಷಗಳಲ್ಲಿ ಕಾಂಡ ಒಂದು ಆಡಿ ಅಗಲ ಬೆಳೆಯಲಿದ್ದು ಇದರಲ್ಲಿ ಸುಮಾರು 60ರಿಂದ 75 ಸಸಿಗಳು ಇರುತ್ತದೆ.
ಮಡಿಕೇರಿಯಲ್ಲಿ ಭಾರೀ ಬೇಡಿಕೆ
ಕಳೆದ ವರ್ಷ ಸಂಭವಿಸಿದ ಗುಡ್ಡ ಕುಸಿತದಿಂದ ತತ್ತರಗೊಂಡ ಮಡಿಕೇರಿ, ಈ ಬಾರಿ ಇದಕ್ಕೆ ಪರಿಹಾರವಾಗಿ ಲಾವಂಚ ಗಿಡವನ್ನು ನೆಡಲಾಗುತ್ತಿದೆ. ಈ ಒಂದು ತಿಂಗಳಲ್ಲಿ ಎಡಪದವಿನಿಂದ 1. 60 ಲಕ್ಷ ಗಿಡಗಳು ಕೊಂಡ್ಯೊಯಲಾಗಿದೆ. ಅದರಲ್ಲಿ ಜೋಡುಪಾಲ ಪ್ರದೇಶಕ್ಕೆ ಕೂಡ ಹೆಚ್ಚು ತೆಗೆದುಕೊಂಡು ಹೋಗಲಾಗಿದೆ. ಇನ್ನೂ 50 ಸಾವಿರ ಗಿಡಗಳಿಗೆ ಬೇಡಿಕೆ ಇದೆ. ಮಣ್ಣು ತುಂಬಿಸಿದ್ದಲ್ಲಿಯೂ ಕೂಡ ಈ ಗಿಡಗಳನ್ನು ನೆಡುವ ಯೋಜನೆ ಅಲ್ಲಿನವರು ಹಾಕಿಕೊಂಡಿದ್ದಾರೆ.
ಕಡಲ್ಕೊರೆತೆಕ್ಕೆ ಪರಿಹಾರ
ಸೋಮೇಶ್ವರ ಕಡಲ ಕೊರತೆದ ಶಾಶ್ವತ ಪರಿಹಾರಕ್ಕೆ ಪ್ರಾಯೋಗಿಕವಾಗಿ ಒಂದು ಸಾವಿರ ಗಿಡಗಳನ್ನು ನೆಡಲು ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯೂ ಆಸಕ್ತಿ ವಹಿಸಿದೆ. ಸರಕಾರ ಅನುಮತಿ ಸಿಕ್ಕರೆ ಶಾಶ್ವತ ಪರಿಹಾರ ದೊರೆಯಲಿದೆ. ಫ್ರಾನ್ಸ್, ಬ್ರೆಜಿಲ್ನ ಸಮುದ್ರ ತೀರದಲ್ಲಿ ಈ ಗಿಡಗಳನ್ನು ನೆಡಲಾಗುತ್ತದೆ.
ಬಂಡೆಗಳನ್ನು ಹಾಕಿ ಖರ್ಚು ಮಾಡುವುದಕ್ಕಿಂತ ಈ ಗಿಡಗಳನ್ನು 4 ಪದರಿನಲ್ಲಿ ನೆಟ್ಟು ಸಮುದ್ರಕೊರೆತಕ್ಕೆ ಶಾಶ್ವತ ಪರಿಹಾರ ಸಿಗಬಹುದು. ಅಲ್ಲದೇ ಕೃಷಿಗೂ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳುತ್ತಾರೆ ಪದ್ಮನಾಭ ದಾಸ್ ಕಾಜಿಲ.
ಲಾವಂಚ ಗಿಡವೂ ಕೇವಲ ಮಣ್ಣಿನ ಕೊರೆತೆಕ್ಕೆ ಪರಿಹಾರವಾಗಿ ಉಪಯೋಗಿಸುವ ಜತೆಗೆ ದೇವರ ಅಭಿಷೇಕಕ್ಕೆ ಹಾಗೂ ಆಯುರ್ವೇದ ಗಿಡಮೂಲಿಕೆಯಾಗಿ ಉಪಯೋಗಿಸಲಾಗುತ್ತದೆ. ಕಳೆದ ಬಾರಿ ಕೋಟೇಶ್ವರಕ್ಕೆ ದೇಗುಲಕ್ಕೆ ಅಭಿಷೇಕಕ್ಕೆ ಎಣ್ಣೆ ತಯಾರಿಸಲು 502 ಕೆ.ಜಿ. ಬೇರನ್ನು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.