ರಸ್ತೆ ಹಂಪ್ ಗಳಿಗೆ ಬಣ್ಣ ಬರಲಿ; ಅಪಾಯ ಕಳೆಯಲಿ ಅವಘಡ ಅಳಿಯಲಿ
Team Udayavani, Dec 14, 2021, 5:34 PM IST
ಮಹಾನಗರ: ವಾಹನಗಳ ವೇಗ ನಿಯಂತ್ರಣಕ್ಕಾಗಿ ನಗರದ ವಿವಿಧ ರಸ್ತೆಗಳಲ್ಲಿ ಹಂಪ್ಸ್ ಅಳವಡಿಸಲಾಗಿದೆ; ಆದರೆ ಬಹುತೇಕ ರಸ್ತೆಗಳ ಹಂಪ್ಸ್‌ಗಳ ಬಣ್ಣ ಮಾಸಿ ಹೋಗಿ ಅದಾಗಲೇ ಹಲವು ಸಮಯವಾಗಿದೆ. ಅಪಘಾತ ನಿಯಂತ್ರಣಕ್ಕಾಗಿ ಅಳವಡಿಸಿದ್ದ ಹಂಪ್ಸ್‌ಗಳೇ ಈಗ ಅಪಘಾತಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸವಾಗಿದೆ!
ಹಂಪ್ಸ್‌ಗಳ ಬಣ್ಣ ಮಾಸಿದ ಪರಿಣಾಮ ನಗರದ ಬಹುತೇಕ ಭಾಗಗಳಲ್ಲಿ ಅಪಘಾತ ವಲಯ ಸೃಷ್ಟಿ ಯಾಗಿದೆ. ಹಂಪ್ಸ್ ಬಗ್ಗೆ ತಿಳಿಯದೆ ವೇಗವಾಗಿ ಬಂದರೆ ಆಪತ್ತು ಕಟ್ಟಿಟ್ಟಬುತ್ತಿ. ಅದರಲ್ಲೂ ರಾತ್ರಿ ಸಂಚರಿಸುವವರು ಹೆಚ್ಚು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಲೇಡಿಹಿಲ್‌ನಿಂದ ಕೊಟ್ಟಾರ, ಕಾಪಿಕಾಡ್, ಬಲ್ಲಾಳ್‌ಬಾಗ್, ಉರ್ವಸ್ಟೋರ್, ಪಂಪ್‌ವೆಲ್, ಬೆಂದೂರ್‌ವೆಲ್, ಬಂಟ್ಸ್‌ಹಾಸ್ಟೆಲ್ ಬಳಿ, ಕರಾವಳಿ ಉತ್ಸವ ಮೈದಾನ ಬಳಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹಾಕಿರುವ ಹಂಪ್ಸ್‌ಗಳಲ್ಲಿ ಈಗ ಬಣ್ಣವೇ ಇಲ್ಲ. ಆದುದರಿಂದ ಇಲ್ಲಿ ಹಂಪ್ಸ್ ಇದೆ ಎಂದು ದೂರಕ್ಕೆ ಗೊತ್ತಾಗುವುದೇ ಇಲ್ಲ.
ನಗರದ ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ಹಂಪ್ಸ್ ಕಾರಣದಿಂದಾಗಿ ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಈ ಕಾರಣದಿಂದ “ರಬ್ಬರ್ ಹಂಪ್ಸ್’ಗಳನ್ನು ತೆರವು ಮಾಡಲಾಗಿತ್ತು. ಹೊಸ ಹಂಪ್ಸ್‌ಗಳನ್ನು ನಿರ್ಮಿಸಿದ ಕೂಡಲೇ ಬಣ್ಣ ಬಳಿದಿದ್ದು, ಅದು ನಿತ್ಯ ವಾಹನ ಸಂಚಾರದಿಂದ ಮಾಸಿ ಹೋಗಿದೆ. ಮತ್ತೊಮ್ಮೆ ಬಣ್ಣ ಬಳಿಯುವ ಕಾರ್ಯ ನಡೆದೇ ಇಲ್ಲ.
ಬಣ್ಣದ ಜತೆಗೆ ಹಂಪ್ಸ್ ಮಾಯ!
ಕೊಟ್ಟಾರಚೌಕಿ ಫ್ಲೈಓವರ್ ಕೆಳಗಡೆ, ಚಿಲಿಂಬಿ, ಬೆಂದೂರ್ ಸೇರಿದಂತೆ ನಗರದ ಕೆಲವು ಹಂಪ್ಸ್‌ಗಳಲ್ಲಿ ಬಣ್ಣ ಮಾಸಿದ್ದು ಮಾತ್ರವಲ್ಲ; ಹಂಪ್ಸ್ ಕೂಡ ಮಾಯವಾಗಿದೆ. ಈ ಪೈಕಿ ಕೆಲವೆಡೆ ಹಂಪ್ಸ್‌ನ ಕೆಲವು ಭಾಗದ ಡಾಮರು ಕಿತ್ತು ಹೋಗಿದೆ. ಇಲ್ಲಿ ವಾಹನ ಸವಾರರು ಸರ್ಕಸ್ ಮಾಡಬೇಕಿದೆ.
ಝೀಬ್ರಾ ಕ್ರಾಸ್‌ನಲ್ಲೂ ಬಣ್ಣವಿಲ್ಲ!
ನಗರದ ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ “ಝೀಬ್ರಾ ಕ್ರಾಸ್’ ಅನ್ನು ಅಳವಡಿಸಲಾಗಿದೆ. ವಿಶೆಷವೆಂದರೆ ಇದರ ಬಣ್ಣ ಕೂಡ ಈಗ ಮಾಸಿದೆ. ಜತೆಗೆ ಲಾಲ್‌ಬಾಗ್, ಪಿವಿಎಸ್ ಸಹಿತ ವಿವಿಧ ಸಿಗ್ನಲ್‌ಗಳಲ್ಲಿ ವಾಹ ನಗಳ ನಿಲುಗಡೆ ಗೊತ್ತುಪಡಿಸುವ ಬಣ್ಣವೂ ಮಾಸಿದೆ. ಹೀಗಾಗಿ ವಾಹನ ನಿಲ್ಲಿಸಲು ಕೂಡ ಇಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ರಸ್ತೆ; ಕಾಮಗಾರಿ ಆರಂಭ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕ್ಲಾಕ್‌ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗೆ ರಸ್ತೆ ಮೇಲ್ದರ್ಜೆ ಗೇರಿದ್ದು, ಇಲ್ಲಿ ಹಂಪ್ಸ್ ಹಾಗೂ ಅದಕ್ಕೆ ಬಣ್ಣ ಬಳಿಯುವ ಕಾಮಗಾರಿ ಶುರುವಾಗಿದೆ. ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ನಿತ್ಯ ಸಾವಿರಾರು ಮಂದಿ ಸಂಚರಿಸುವ ಕಾರಣದಿಂದ ಪಾದಚಾರಿಗಳಿಗೆ ನೆರವಾಗಲು ಝೀಬ್ರಾ ಕ್ರಾಸ್ ಕೂಡ ಹಾಕಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಕ್ರಮ
ನಗರದ ಕೆಲವು ಹಂಪ್ಸ್‌ಗಳ ಬಣ್ಣ ಮಾಸಿದೆ. ಆದರೆ ಇತ್ತೀಚಿನವರೆಗೂ ಮಳೆ ಇದ್ದ ಕಾರಣದಿಂದ ಹಂಪ್ಸ್‌ಗಳಿಗೆ ಬಣ್ಣ ಬಳಿಯಲು ಸಾಧ್ಯವಾಗಿರಲಿಲ್ಲ. ಈಗ ಮಳೆ ನಿಂತಿರುವುದರಿಂದ ಕೆಲವೇ ದಿನಗಳಲ್ಲಿ ಹಂಪ್ಸ್‌ಗಳಿಗೆ ಬಣ್ಣ ಬಳಿಯಲು ಹಾಗೂ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಪ್ರೇಮಾನಂದ ಶೆಟ್ಟಿ, ಮೇಯರ್,
ಮಹಾನಗರ ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.