ಬದುಕು ರೂಪಿಸುವ ಶಿಕ್ಷಕ: ಪುನರೂರು
Team Udayavani, Sep 7, 2017, 9:11 AM IST
ಮೂಲ್ಕಿ: ಶಿಕ್ಷಣದಲ್ಲಿ ಭಯ ಮತ್ತು ಭಕ್ತಿ ಅಗತ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷೆ ಕೊಡುವುದು ಸಹಜ. ಇದು ವಿದ್ಯಾರ್ಥಿಯ ಬದುಕನ್ನು ರೂಪಿಸುವ ಮೂಲಕ ಆತನನ್ನು ಸತ್ಪ್ರಜೆಯಾಗಿ ರೂಪಿಸಲು ಸಹಕಾರಿ ಎಂಬ ಸತ್ಯ ಹೆತ್ತವರಿಗೆ ಮತ್ತು ಸರಕಾರಕ್ಕೆ ಗೊತ್ತಿರಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕಷ್ಣ ಪುನರೂರು ಹೇಳಿದರು.
ಅವರು ಮಂಗಳವಾರ ಪುನರೂರು ಪ್ರತಿಷ್ಠಾನ ಮತ್ತು ಮೂಲ್ಕಿಯ ಜನವಿಕಾಸ ಸಮಿತಿ ಆಶ್ರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮೂಲ್ಕಿ ಹೋಬಳಿಯ 32 ಗ್ರಾಮಗಳ 25 ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವರ ಸಮಾನ: ಕಾರ್ಯಕ್ರಮ ಉದ್ಘಾಟಿ ಸಿದ ಅಗರಿ ಎಂಟರ್‌ಪ್ರçಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ, ಬಾಲ್ಯದಿಂದ ಹೆತ್ತವರಿಗಿಂತ ಹೆಚ್ಚಿನ ಜವಾಬ್ದಾರಿ ಹೊತ್ತು ವಿದ್ಯಾರ್ಥಿಗಳ ಒಳಿತನ್ನೇ ಬಯಸಿ ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುವ ಶಿಕ್ಷಕರು ದೇವರಿಗೆ ಸಮಾನರು ಎಂದು ಹೇಳಿದರು.
ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಶಿಕ್ಷಕನಾಗಿ ಒಮ್ಮೆ ಸೇವೆ ಆರಂಭಿಸಿದರೆ ಆತ ತನ್ನ ಕೊನೆಯ ದಿನಗಳ ವರೆಗೂ ಶಿಕ್ಷಕನಾಗಿಯೇ ಇರುತ್ತಾನೆ. ಸಮಾಜದಲ್ಲಿ ಅತ್ಯಂತ ಗೌರವ ಇರುವ ಓರ್ವ ಶಕ್ತಿ ಶಿಕ್ಷಕ ಎಂದು ಹೇಳಿದರು.
ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಕುಡ್ವಾ ಶುಭ ಹಾರೈಸಿದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ಗೌರವಾಧ್ಯಕ್ಷೆ ಉಷಾರಾಣಿ ಪುನರೂರು ಹಾಗೂ ಜನವಿಕಾಸ ಸಮಿತಿ ಅಧ್ಯಕ್ಷ ಪಿ.ಎಸ್. ಸುರೇಶ್ ರಾವ್ ವೇದಿಕೆ ಯಲ್ಲಿದ್ದರು. ಸಿ| ಲೀರಾ ಮರಿಯ, ನಾಗಭೂಷಣ ರಾವ್ ಅವರು ಸಮ್ಮಾನಕ್ಕೆ ಉತ್ತರಿಸಿದರು. ಜೀತೆಂದ್ರ ವಿ. ರಾವ್ ಕಾರ್ಯಕ್ರಮ ನಿರೂಪಿಸಿದರು. ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಗ್ಯ ರಾಜೇಶ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.