MahaKalipadpu: ನಿರ್ಲಕ್ಷ್ಯಕ್ಕೆ ಒಳಗಾಗಿದೆ ಶೆಟ್ಟಿಬೆಟ್ಟು ಮೊಲಿ ಕೆರೆ
ಕೆರೆ ಒಡಲು ಸೇರುತ್ತಿದೆ ಒಳಚರಂಡಿ ನೀರು; ಧಾರ್ಮಿಕ ಮಹತ್ವದ ಕೆರೆಯ ರಕ್ಷಣೆಗಿಲ್ಲ ಆಸಕ್ತಿ
Team Udayavani, Sep 11, 2024, 7:06 PM IST
ಮಹಾಕಾಳಿಪಡ್ಪು: ಜಪ್ಪಿನಮೊಗರು ಮಹಾಕಾಳಿಪಡ್ಪುವಿನ ಪುರಾತನ ಶೆಟ್ಟಿ ಬೆಟ್ಟಿನ ಮೊಲಿ ಕೆರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನವೀಕರಣಗೊಂಡರೂ ಕೆರೆಯ ಪರಿಸರದ ಸಂರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸದ ಕಾರಣ ಪಾಚಿಗಟ್ಟಿದೆ. ಕೆರೆಯ ನೀರೂ ಪೂರ್ಣ ಕಲುಷಿತಗೊಂಡಿದೆ.
ಕೆರೆಯ ವ್ಯಾಪ್ತಿಯ ಸ್ಥಳೀಯ ಪ್ರದೇಶಗಳಲ್ಲಿ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸದೆ ಕೆರೆಯ ಅಭಿವೃದ್ಧಿ ಮಾಡಿರುವ ಕಾರಣ ಕೆರೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಸ್ಮಾರ್ಟ್‌ಸಿಟಿ ವತಿಯಿಂದ ಈ ಪ್ರದೇಶದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯ ಕಾಮಗಾರಿ ಸ್ಥಳೀಯವಾಗಿ ನಡೆಯುತ್ತಿದ್ದರೂ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯಾವುದೇ ಆದ್ಯತೆ ಈ ವರೆಗೆ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಧಾರ್ಮಿಕ ಮಹತ್ವವನ್ನು ಪರಿಗಣಿಸಿಲ್ಲ
ಈ ಹಿಂದಿನ ಕಾಲದಲ್ಲಿ ಸ್ಥಳೀಯ ಪ್ರದೇಶಕ್ಕೆ ಜಲಮೂಲವಾಗಿತ್ತು. ಪುರಾತನ ರಾಜಮನೆತನದವರು ಕೆರೆಯ ಪರಿಸರದಲ್ಲಿರುವ ದೈವಿಕ ಶಕ್ತಿ ಸಾನ್ನಿಧ್ಯಗಳನ್ನು ಆರಾ ಧಿಸಿಕೊಂಡು ಬಂದಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೆರೆಯ ಸಂರಕ್ಷಣೆಗೆ ಮತ್ತು ವಿಶೇಷವಾಗಿ ಪರಿಸರದ ಧಾರ್ಮಿಕ ಮಹತ್ವಕ್ಕೆ ಆದ್ಯತೆ ನೀಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎನ್ನುವುದು ಸ್ಥಳೀಯರ ಆರೋಪ.
ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಶೆಟ್ಟಿಬೆಟ್ಟು ಪ್ರದೇಶದಲ್ಲಿ ವ್ಯವಸ್ಥಿತವಾದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ. ಹಲವಾರು ಬಾರಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀ ಬಾರಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಮನವಿ ವರ್ಗಾವಣೆಯಾಗಿರುವ ವಿಚಾರಗಳ ಪ್ರತಿ ಕೈ ಸೇರಿರುವುದು ಬಿಟ್ಟರೆ ಯಾವುದೇ ರೀತಿ ಕಾರ್ಯಗಳು ಜಾರಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.
ಕೆರೆಯ ರಕ್ಷಣೆಗೆ ಆದ್ಯತೆ ನೀಡಿ
ಸುಮಾರು 92 ಸೆಂಟ್ಸ್ ವಿಸ್ತೀರ್ಣ ಹೊಂದಿದ್ದ ಕೆರೆಯು ಒತ್ತುವರಿ ಹಾಗೂ ಆಡಳಿತದ ನಿರ್ಲಕ್ಷ್ಯದಿಂದ ತನ್ನ ಬಹುತೇಕ ಭೂಭಾಗಗಳನ್ನು ಕಳೆದುಕೊಂಡಿದೆ. ಈ ಬಗ್ಗೆ ಕಠಿನ ಕ್ರಮಗಳನ್ನು ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ಸುತ್ತಲೂ ಸುರಕ್ಷತಾ ಬೇಲಿ ಅಳವಡಿಸಬೇಕು. ಕೆರೆಯ ಭೂ ಪ್ರದೇಶದ ವ್ಯಾಪ್ತಿಗೆ ಗಡಿ ಕಲ್ಲನ್ನು ಹಾಕುವುದರ ಜತೆಗೆ ಭವಿಷ್ಯದ ಹಿತದೃಷ್ಟಿಯಿಂದ ಕೆರೆಗಳ ಸಂರಕ್ಷಣೆಗೆ ಹೈಕೋರ್ಟ್ ಸೂಚಿತ 30 ಮೀ. ಬಫರ್ ಜೋನ್ ನಿಗದಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.