ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಸೆರೆ; ಸೊತ್ತು ವಶ
Team Udayavani, Oct 31, 2017, 10:12 AM IST
ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕಿನ್ನಿಕಂಬಳದ ಮಹಮ್ಮದ್ ಶಾಕೀರ್ (23) ನನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹದಳದ ಮತ್ತು ಉರ್ವ ಠಾಣೆಯ ಪೊಲೀಸರು ಸೋಮವಾರ ನಗರದ ಕೋಡಿಕಲ್ 10ಬಿ ಕ್ರಾಸ್‌ನಲ್ಲಿ ಬಂಧಿಸಿ 1.80 ಕೆ.ಜಿ ಗಾಂಜಾ, 2 ಮೊಬೈಲ್ ಫೋನ್, ಬಜಾಜ್ ಪಲ್ಸರ್ ಬೈಕ್ ಮತ್ತು ನಗದು ಸೇರಿದಂತೆ ಒಟ್ಟು 1,19,450 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿ ಮಹಮದ್ ಶಾಕಿರ್ ಗಾಂಜಾ ಮಾರಾಟ ಮಾಡಲು ಸೋಮವಾರ ಮಂಗಳೂರಿಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಅನ್ವಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಈತ ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿಗಳಾದ ಹನುಮಂತ ರಾಯ ಮತ್ತು ಉಮಾ ಪ್ರಶಾಂತ್ ಹಾಗೂ ಎಸಿಪಿ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ಎಸ್.ನಾಯಕ್, ಪಿಎಸ್‌ಐ ಕೃಷ್ಣ ಬಿ., ಎಎಸ್‌ಐಗಳಾದ ಬಾಲಕೃಷ್ಣ, ದಾಮೋದರ್, ಹೆಡ್‌ಕಾನ್ಸ್‌ಟೆಬಲ್‌ಗಳಾದ ಸಂತೋಷ್ ಕುಮಾರ್ ಸಸಿಹಿತ್ಲು, ಸಿದ್ದಾರ್ಥ್, ದಯಾನಂದ, ಲೋಕೇಶ್, ಕಾನ್ಸ್‌ಟೆಬಲ್‌ಗಳಾದ ಪ್ರಮೋದ್, ವಿನೋದ್, ಯೋಗೀಶ್, ಕಾಂತರಾಜು, ಹೇಮಂತ್ ಕುಮಾರ್, ಶಂಕರಪ್ಪ ಲಮಾಣಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.