ಬೇಡ ಬೇಡವೆಂದರೂ ಗಿಫ್ಟ್ ಕಳುಹಿಸಿ ಮಹಿಳೆಗೆ 14.91 ಲ.ರೂ. ವಂಚನೆ!
Team Udayavani, Nov 22, 2020, 8:48 AM IST
ಮಂಗಳೂರು: ಮಹಿಳೆಯೋರ್ವರನ್ನು ಫೇಸ್‌ಬುಕ್ ನಲ್ಲಿ ಫ್ರೆಂಡ್ ಆಗಿ ಮಾಡಿಕೊಂಡು ಅನಂತರ ಅವರಿಗೆ ಗಿಫ್ಟ್ ಒಂದನ್ನು ಕಳುಹಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು ಪಾಂಡೇಶ್ವರದ ಮಹಿಳೆಯೋರ್ವರಿಗೆ 2020ರ ಆ. 5ರಂದು ರಿಯಾನಾರ್ಡೋ ನೀಲ್ ಎನ್ನುವಾತ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಮಹಿಳೆ ಒಕೆ ಮಾಡಿದ್ದರು. ಅನಂತರ ಆರೋಪಿಯು ಮಹಿಳೆಯ ಮೊಬೈಲ್ ನಂಬರ್ ಪಡೆದು ಆಗಾಗ್ಗೆ ಇಂಟರ್ ನೆಟ್ ಮೂಲಕ ಕಾಲ್ ಮಾಡುತ್ತಿದ್ದ. ಬಳಿಕ ಗಿಫ್ಟ್ ನೀಡುವುದಾಗಿ ಹೇಳಿದ್ದ. ಇದನ್ನು ಮಹಿಳೆ ನಿರಾಕರಿಸಿದರೂ ಗಿಫ್ಟ್ ಕಳುಹಿಸಿದ್ದ.
ಮಹಿಳೆಯರಿಂದಲೇ ಕರೆ
ಆ. 25ರಂದು ಓರ್ವ ಮಹಿಳೆಯು ದೂರುದಾರ ಮಹಿಳೆಗೆ ಕರೆ ಮಾಡಿ ಕೊರಿಯರ್ ಕಚೇರಿಯಿಂದ ಮಾತನಾಡುವುದಾಗಿ ಹೇಳಿದ್ದರು. ನಿಮಗೆ ಗಿಫ್ಟ್ ಪಾರ್ಸೆಲ್ ಬಂದಿದೆ. ಅದಕ್ಕೆ 32,800 ರೂ. ಪಾವತಿಸಬೇಕು ಎಂದು ಹೇಳಿದ್ದಳು.
ಇದನ್ನೂ ಓದಿ:ಇನ್ನು ಮುಂದೆ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಅವಕಾಶ! ಕೇಂದ್ರ ಸರಕಾರದ ಮಹತ್ವದ ಸೂಚನೆ
ಆ ಬಳಿಕ ಇನ್ನೋರ್ವ ಮಹಿಳೆ ಕೂಡ ದೂರುದಾರರಿಗೆ ಕರೆ ಮಾಡಿ ಹೊಸದಿಲ್ಲಿಯ ಕಸ್ಟಮ್ ಅಧಿಕಾರಿ ಎಂದು ಹೇಳಿ ಗಿಫ್ಟ್ನ ಕಸ್ಟಮ್ಸ್ ಫೀಸ್, ಅಕೌಂಟ್ ಅಪ್‌ಡೇಟ್, ಜಿಎಸ್‌ಟಿ ಇತ್ಯಾದಿ ಖರ್ಚು ನೀಡಬೇಕೆಂದು ಹೇಳಿದ್ದರು. ಅನಂತರ ಬೇರೆ ಬೇರೆ ದಿನಾಂಕಗಳಂದು ದೂರುದಾರರ ವಿವಿಧ ಖಾತೆಗಳಿಂದ 14,91,840 ರೂ. ಪಡೆದು ವಂಚನೆ ಮಾಡಿದ್ದಾಳೆ. ಈ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.