ಹೊಸ ತಾಲೂಕು ರಚನೆ ಮಂಗಳೂರು ಎಪಿಎಂಸಿಗೆ ಹೊಡೆತ?
ಚುನಾವಣೆ ವಿಳಂಬ: ಆಕಾಂಕ್ಷಿಗಳಲ್ಲಿ ನಿರಾಸೆ
Team Udayavani, Jul 24, 2022, 11:39 AM IST
ಸುರತ್ಕಲ್: ಮೂಲ್ಕಿ, ಮೂಡುಬಿದಿರೆ ಹೊಸ ತಾಲೂಕು ರಚನೆಯಾಗಿದ್ದು, ಇದೀಗ ಮಂಗಳೂರು ಕೃಷಿ ಉತ್ಪನ್ನ ಮಾರಾಟ ಕೇಂದ್ರ ದುರ್ಬಲವಾಗುವ ಸಾಧ್ಯತೆ ತಲೆ ದೋರಿದೆ.
ಇದುವರೆಗೆ ಮೂಲ್ಕಿ ಮೂಡುಬಿದಿರೆ ಮಂಗಳೂರಿಗೆ ಸೇರಿದ್ದರಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮುನ್ನ ಉತ್ತಮ ಆದಾಯವನ್ನೂ ಹೊಂದಿತ್ತು. ಆದರೆ ಇದೀಗ ಬಹುತೇಕ ಕೃಷಿ ಪ್ರದೇಶ ಮೂಲ್ಕಿ, ಮೂಡುಬಿದಿ ರೆ ವ್ಯಾಪ್ತಿಯಲ್ಲಿದೆ. ಮಂಗಳೂರು ನಗರವಾಗಿ ಬೆಳೆದಿ ರುವುದರಿಂದ ಸ್ವಲ್ಪ ಮಟ್ಟಿಗೆ ನೀರುಮಾರ್ಗ, ಗುರು ಹೋಬಳಿ, ಬಜಪೆ ಪ್ರದೇಶದಲ್ಲಿ ಕೆಲವು ಭಾಗ ಮಾತ್ರ ಮಂಗ ಳೂರು ತಾಲೂ ಕಿ ನಲ್ಲಿ ಉಳಿಯುತ್ತದೆ. ಹೊಸ ತಾಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ನೂತನ ಎಪಿಎಂಸಿ ರಚನೆ ಪ್ರಕ್ರಿಯೆಯೂ ನಡೆದಿಲ್ಲ.
ಚುನಾವಣೆ ವಿಳಂಬ
ಕೃಷಿ ಉತ್ಪನ್ನ ಸಹಕಾರ ಸಮಿತಿಗಳ ಚುನಾವಣೆಗೆ ಅಧಿಸೂಚನೆ ಶೀಘ್ರವೇ ಪ್ರಕಟಿಸುವ ನಿರೀಕ್ಷೆಯಿತ್ತಾದರೂ ಇದೀಗ ಹುಸಿಯಾಗಿದ್ದು, ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಪೈಪೋಟಿಯಿದ್ದು, ಇದಕ್ಕೆ ಪೂರಕವಾಗಿ ಎಪಿಎಂಸಿಯಲ್ಲಿ ತನ್ನ ಸ್ಥಾನಗಳನ್ನು ಬಲಪಡಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ, ಸ್ಥಳೀಯ ಮಟ್ಟದಲ್ಲಿ ಭರ್ಜರಿ ತಯಾರಿ ನಡೆಸಿತ್ತು.
ಜಿಲ್ಲಾಧಿಕಾರಿಗಳು ಮೀಸಲು ನಿಗದಿ ಪಡಿಸಿದ ಬಳಿಕ ಸರಕಾರಕ್ಕೆ ಕಳುಹಿಸಿದ ಬಳಿಕವೇ ಅಧಿಸೂಚನೆ ಹೊರಬಿದ್ದು ಚುನಾವಣೆ ಘೋಷಣೆಯಾಗುತ್ತದೆ. ಬಹುತೇಕ ಜಿಲ್ಲೆಗಳ ಮತದಾರರ ಪಟ್ಟಿ ಸಹಿತ ಎಲ್ಲ ಚುನಾವಣಾ ಪೂರ್ವ ತಯಾರಿ ಮುಗಿದಿದ್ದರೂ ಚುನಾವಣೆ ನಡೆಯದ ಬಗ್ಗೆ ಮತ್ತೆ ಚುನಾವಣೆ ಎದುರಿಸಲು ಸಜ್ಜಾಗಿದ್ದ ನಿಕಟಪೂರ್ವ ಎಪಿಎಂಸಿ ಸದಸ್ಯರಲ್ಲಿ, ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ.
ಆಡಳಿತ ಯಾವಾಗ ಕೊನೆಗೊಂಡಿತ್ತು?
ಎಪಿಎಂಸಿಯ ಅಧಿಕಾರಾವಧಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಂಡಿತ್ತು. ಆದರೆ ಸರಕಾರವು ಅವರ ಚಟುವಟಿಕೆಗಳ ಮೇಲ್ವಿಚಾರಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಇದೀಗ 6 ತಿಂಗಳುಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲ.
ಒಟ್ಟು 18 ಮಂದಿ ಸದಸ್ಯರು ಮಂಗಳೂರು ಎಪಿಎಂಸಿಯ ಆಡಳಿತ ಮಂಡಳಿಯಲ್ಲಿರುತ್ತಾರೆ. 11 ಸದಸ್ಯರು ರೈತರಿಂದ ಚುನಾಯಿತರಾಗಲು ಸರಕಾರ ಮೀಸಲಾತಿಯನ್ನು ಘೋಷಿಸಬೇಕಿದೆ. ತೋಟಗಾರಿಕೆ, ವ್ಯಾಪಾರಿಗಳು ಮತ್ತು ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳಿಂದ ತಲಾ ಒಬ್ಬರು ಆಯ್ಕೆಯಾಗುತ್ತಾರೆ. ಸರಕಾರವು ಮೂರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಎಪಿಎಂಸಿಯ ಒಬ್ಬರು ಅಧಿಕಾರಿ ಸದಸ್ಯರಾಗಿ ಇರುತ್ತಾರೆ.
ಸೂಕ್ತ ಕ್ರಮ ಕೈಗೊಳ್ಳಲಿದೆ: ರಾಜ್ಯದಲ್ಲಿ ಹೊಸ ತಾಲೂಕು ರಚನೆಯಾಗಿದ್ದು, ಆಯಾ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ರಚನೆಯಾಗಬೇಕಿದೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡ ಬಳಿಕ ನಿರ್ಧಾರವಾಗಲಿದೆ. – ಡಾ| ಭರತ್ ಶೆಟ್ಟಿ ವೈ., ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.