Mangalore: ಎದೆ ಹಾಲು ಉಣಿಸುವ ತಾಯಂದಿರಲ್ಲಿ ಸೌಂದರ್ಯ ಹೆಚ್ಚುತ್ತದೆ: ರಶ್ಮಿ
ಉತ್ತಮ ಪ್ರಜೆಯಾಗಿ ಆರೋಗ್ಯವಂತ ಮನಃ ಸ್ಥಿತಿಯಿಂದ ಬೆಳೆಯಲು ಸಾಧ್ಯ
Team Udayavani, Aug 9, 2023, 6:33 PM IST
ಬಜಾಲ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗ ದೊಂದಿಗೆ ಕಣ್ಣೂರು ವಲಯ ಅಂಗನವಾಡಿ ಕಾರ್ಯಕರ್ತೆಯಾರಿಂದ ಆಟಿಡೊಂಜಿ ದಿನ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಗರದ ಬಜಾಲ್ ಪಕಲಡ್ಕ ಯುವಕ ಮಂಡಲ ಅಂಗನವಾಡಿಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ರಶ್ಮಿ ಉದ್ಘಾಟಿಸಿ, ಎದೆಹಾಲು ಕುಡಿಸುವಂತ
ತಾಯಿಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ತುಂಬಾ ಕಡಿಮೆಯಾಗಿರುತ್ತದೆ. ತಾಯಿ ಮಗುವಿನ ಬಾಂಧವ್ಯ ಜಾಸ್ತಿಯಾಗುತ್ತದೆ. ಈಗಿನವರು
ಒಂದು ಕೈಯಲ್ಲಿ ಮೊಬೈಲ್‌ನಲ್ಲಿ ಮಗ್ನರಾಗಿ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೋ ಇಲ್ಲ ಎನ್ನುವುದರ ಗಮನ ಇಲ್ಲದೆ, ಮಗುವಿಗೆ ತಾಯಿಯ ಸ್ಪರ್ಶ ಕಡಿಮೆಯಾಗುತ್ತಿದೆ ಎಂದರು.
ಕಾರ್ಪೋರೆಟರ್ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ ನಮ್ಮಲ್ಲಿ ಹಳೆಯ ಕಾಲದ
ಆಹಾರ ಪದ್ಧತಿ ವಿರಳವಾಗಿದೆ. ಸರಕಾರದ ಎಲ್ಲ ಯೋಜನೆಗಳನ್ನು ತಾಯಿಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಾಯಿ ಹಾಲು ಉಣಿಸುವಾಗ ಆದಷ್ಟು ಮೊಬೈಲ್ ನಿಂದ ದೂರ ಇದ್ದು ಪುಸ್ತಕಗಳ ಪ್ರೀತಿ ಬೆಳೆಸಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಆರೋಗ್ಯವಂತ ಮನಃ ಸ್ಥಿತಿಯಿಂದ ಬೆಳೆಯಲು ಸಾಧ್ಯ ಎಂದರು.
ಎಕ್ಕೂರು ಪ್ರಾಥಮಿಕ ಕೇಂದ್ರದ ವೈದ್ಯೆ ಡಾ| ರೆಹನಾ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಒ. ಶ್ವೇತಾ,
ಕಣ್ಣೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಅನುಪಮಾ, ಬಜಾಲ್ ಪಕಲಡ್ಕ ಯುವಕ ಮಂಡಲ ಶಿಕ್ಷಕಿ ಆಶಾ, ಸಹಾ
ಯಕಿ ತುಳಸಿ, ಜಪ್ಪಿನಮೊಗರು ಯುವಕ ಮಂಡಲ ಅಂಗನವಾಡಿ ಶಿಕ್ಷಕಿ ಪವಿತ್ರಾ, ಇತರ ಅಂಗನವಾಡಿ ಶಿಕ್ಷಕರು ಮೊದ ಲಾ ದವರು ಉಪಸ್ಥಿತರಿದ್ದರು. ವಿವಿಧ ಆಟಿಯ ಖಾದ್ಯ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.