ಮಂಗಳೂರು: ನಗರದ ರಸ್ತೆಗಳಿಗೆ ಸಿಗುತ್ತಿದೆ ಹೊಸ ರೂಪ
ಡಿವೈಡರ್, ಫುಟ್‌ಪಾತ್ ಅಂಚಿಗೆ ಹೊಸ ಬಣ್ಣ
Team Udayavani, Oct 11, 2022, 4:29 PM IST
ಮಹಾನಗರ: ಬಣ್ಣವಿಲ್ಲದೆ ಹಲವು ವರ್ಷಗಳಿಂದ ಕಳೆಗುಂದಿದ್ದ ನಗರದ ರಸ್ತೆ ವಿಭಜಕಗಳಿಗೆ ಇದೀಗ ಬಣ್ಣ ಭಾಗ್ಯ ಲಭಿಸಿದೆ.
ಮುಖ್ಯ ರಸ್ತೆಗಳಲ್ಲಿ ಡಿವೈಡರ್‌ಗಳಿಗೆ ಫುಟ್‌ಪಾತ್ ಅಂಚಿಗೆ ಪೈಂಟ್ ಬಳಿಯುವ ಕೆಲಸ ಆರಂಭಗೊಂಡಿದ್ದು, ರಸ್ತೆಗಳಿಗೆ ಹೊಸ ರೂಪ ಬಂದಿದೆ.
ನಗರದಲ್ಲಿ ಪ್ರತಿ ವರ್ಷ ದಸರಾ ಸಂದರ್ಭ ವಿದ್ಯುತ್ ಅಲಂಕಾರದ ಜತೆಗೆ ಕುದ್ರೋಳಿಯ ಮೆರವ ಣಿಗೆ ಸಾಗುವ ಹಾದಿಯಲ್ಲಿ ಮಾತ್ರ ಡಿವೈಡರ್‌ಗಳಿಗೆ ಬಣ್ಣ ಬಳಿಯ ಲಾಗುತ್ತಿತ್ತು. ಇತರ ಮುಖ್ಯ ರಸ್ತೆಗಳು ಹಾಗೇ ಉಳಿದು ಬಿಡುತ್ತಿತ್ತು. ಈ ಬಾರಿಯೂ ಅದೇ ರೀತಿ ಬಣ್ಣ ಬಳಿಯುವ ಕೆಲಸ ನಡೆದಿತ್ತು. ಇದೀಗ ಅದರ ಮುಂದುವರಿದ ಭಾಗ ವಾಗಿ ಇತರ ರಸ್ತೆಗಳ ಮೀಡಿಯನ್‌ಗಳಿಗೂ ಬಣ್ಣ ಬಳಿಯುವ ಕೆಲಸ ಭರದಿಂದ ನಡೆಯುತ್ತಿದೆ.
ಕೆಲವೆಡೆ ರಸ್ತೆಗೆ ಬಣ್ಣ ಬಳಿದು ಹಲವು ವರ್ಷಗಳೇ ಕಳೆದಿದ್ದು, ಮಳೆ- ಬಿಸಿಲಿಗೆ ಅದು ಮಾಸಿ ಹೋಗಿತ್ತು. ಇನ್ನು ಕೆಲವು ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸಿರುವುದು ಹೊರತು ಪಡಿಸಿದರೆ, ಅದು ಇಲ್ಲಿಯ ವರೆಗೆ ಬಣ್ಣವನ್ನೇ ಕಂಡಿರಲಿಲ್ಲ. ರಸ್ತೆ ನಿಯ ಮಾವಳಿಯ ಪ್ರಕಾರ ಮಧ್ಯದಲ್ಲಿ ಡಿವೈಡರ್ ಇದ್ದರೆ, ಅದಕ್ಕೆ ಅಗತ್ಯವಾಗಿ ಕಪ್ಪು ಮತ್ತು ಪ್ರತಿಫಲನ (ರಿಫ್ಲೆಕ್ಷನ್) ಇರುವ ಹಳದಿ ಬಣ್ಣ ಬಳಿಯಬೇಕು. ಬಣ್ಣವಿಲ್ಲದಿರುವುದು ರಾತ್ರಿ ವೇಳೆ ವಾಹನಗಳ ಅಪಘಾತಗಳಿಗೂ ಕಾರಣವಾಗಬಹುದು.
ಪ್ರಸ್ತುತ ಬಂಟ್ಸ್ ಹಾಸ್ಟೆಲ್- ಕದ್ರಿ – ಮಲ್ಲಿಕಟ್ಟೆ ರಸ್ತೆಯಲ್ಲಿ, ನಾರಾಯಣ ಗುರು ವೃತ್ತದಿಂದ ಉರ್ವ ಮಾರುಕಟ್ಟೆ ರಸ್ತೆಯಲ್ಲಿ ಪೈಂಟಿಂಗ್ ಮಾಡಲಾ ಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಕುದ್ರೋಳಿ ರಸ್ತೆ, ಕೆ.ಎಸ್. ರಾವ್ ರಸ್ತೆ, ಸಹಿತ ವಿವಿಧ ರಸ್ತೆಗಳಿಗೆ ಈಗಾಗಲೇ ಬಣ್ಣ ಬಳಿಯಲಾಗಿದೆ.
ಕೊಟ್ಟಾರ ಚೌಕಿ ವರೆಗಿನ ಉಳಿದ ಭಾಗದ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ. ಅನಂತರದಲ್ಲಿ ಕೆಎಸ್ ಆರ್‌ಟಿಸಿಯಿಂದ ಬಿಜೈಯಾಗಿ ಸರ್ಕೀಟ್ ಹೌಸ್ ವರೆಗೆ, ಕೆಎಸ್‌ಆರ್‌ಟಿಸಿಯಿಂದ ಕುಂಟಿಕಾನ ವಾಗಿ ಮುಂದಕ್ಕೆ ಹೀಗೆ ವಿವಿಧ ರಸ್ತೆಗಳು ಹೊಸ ರೂಪ ಪಡೆಯಲಿವೆ.
ನಗರದ ಏರ್‌ಪೋರ್ಟ್ ರಸ್ತೆಯ ಕೆಪಿಟಿ ಜಂಕ್ಷನ್‌ನಿಂದ ಮರಕಡ ವರೆಗೆ ರಸ್ತೆಯ ಮೀಡಿಯನ್‌ಗೆ ಬಣ್ಣ ಬಳಿಯಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ 70 ಲಕ್ಷ ರೂ. ಮೀಸಲಿರಿಸಲಾಗಿದೆ. ಇದರ ಟೆಂಡರ್ ಕೂಡ ಶೀಘ್ರ ಅಂತಿಮಗೊಳ್ಳಲಿದೆ. ಉಳಿದಂತೆ ಇತರ ಮುಖ್ಯ ರಸ್ತೆಗಳ ಡಿವೈಡರ್, ರಸ್ತೆಯ ಫುಟ್‌ಪಾತ್ ಅಂಚಿಗೆ ಬಣ್ಣ ಬಳಿಯುವ ಕುರಿತು ಪಾಲಿಕೆಯ ಹಿಂದಿನ ಮೇಯರ್ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ಕೆಲಸ ನಡೆಯುತ್ತಿದೆ.
ಶೀಘ್ರ ಟೆಂಡರ್: ನಗರದ ವಿವಿಧ ರಸ್ತೆಗಳ ಡಿವೈಡರ್‌ಗಳಿಗೆ ಈ ಹಿಂದಿನ ಮೇಯರ್ ಅವಧಿಯಲ್ಲಿ ಆದ ಟೆಂಡರ್‌ನಂತೆ ಪೈಂಟಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಕೆಪಿಟಿಯಿಂದ ಮರಕಡ ವರೆಗಿನ ರಸ್ತೆಯ ಡಿವೈಡರ್‌ಗೂ ಬಣ್ಣ ಬಳಿಯಲು ಉದ್ದೇಶಿಸಿದ್ದು, ಶೀಘ್ರ ಇದರ ಟೆಂಡರನ್ನೂ ಅಂತಿಮಗೊಳಿಸಲಾಗುವುದು. -ಜಯಾನಂದ ಅಂಚನ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.