ಸಾಹಿತ್ಯಾಭಿಮಾನಿಗಳನ್ನು ಆಕರ್ಷಿಸುವ ಮಳಿಗೆಗಳು
Team Udayavani, Jan 31, 2019, 5:25 AM IST
ಮಹಾನಗರ: ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 80ಕ್ಕೂ ಹೆಚ್ಚು ಮಳಿಗೆಗಳಿದ್ದು, ಸಾಹಿತ್ಯಾಭಿಮಾನಿಗಳು ಆಕರ್ಷಿಸುತ್ತಿವೆ. ವಿವಿಧ ಪುಸ್ತಕ ಮಳಿಗೆಗಳು, ಆಟಿಕೆ, ಬಟ್ಟೆ ಅಂಗಡಿಗಳು, ಕರಕುಶಲ ವಸ್ತುಗಳ ಮಳಿಗೆ, ಸಾವಯವ ಪದಾರ್ಥ, ಖಾದಿ ಕೈಮಗ್ಗ ಬಟ್ಟೆಗಳ ಮಾರಾಟ ಮಳಿಗೆಗಳು ಪುರಭವನದ ಹೊರ ಆವರಣದಲ್ಲಿವೆ.
ಮಳಿಗೆಗಳಿಗೆ ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಣೆ, ಪುಸ್ತಕ ಖರೀದಿಯಲ್ಲಿ ನಿರತರಾಗಿದ್ದರು. ಸಾವಯವ ಆಹಾರಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಯಿತು. ಕಮ್ಮಾರನ ದುಡಿಮೆಯನ್ನು ಬಿಂಬಿಸುವ ಸಣ್ಣ ಕುಲುಮೆಯೊಂದು ಪುರಭ ವನದ ಆವರಣದಲ್ಲಿ ಜನರ ಗಮನ ಸೆಳೆಯುತ್ತಿದೆ.
ಕಾರ್ಕಳ ಬೈಲೂರಿನ ದಾಮೋದರ ಆಚಾರ್ಯ ಅವರು ಸಮ್ಮೇಳನದಲ್ಲಿ ಮಳಿಗೆ ತೆರೆದಿದ್ದು, ತಮ್ಮ ಕುಲಕಸುಬು ಕಮ್ಮಾರಿಕೆಯ ಮೂಲಕವೇ ಕತ್ತಿ, ಹಾರೆ, ಗುದ್ದಲಿ ಮುಂತಾದ ಕೃಷಿ ಉಪಕರಣಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.