![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 18, 2021, 6:16 PM IST
ಮಂಗಳೂರು: ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾದ ಇಬ್ಬರನ್ನು ಫಾತಿಮಾ(47) ಹಾಗೂ ಮೊಹಮ್ಮದ್ ಮೊಹಿದ್ದಿನ್ (50) ಎಂದು ಗುರುತಿಸಲಾಗಿದೆ.
ದುಬೈನಿಂದ ಮಂಗಳೂರಿನಲ್ಲಿ ಬಂದಿಳಿದ ಫಾತಿಮಾ ಸ್ಯಾನಿಟರಿ ನ್ಯಾಪ್ ಕಿನ್ ನಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದರು. ಚಿನ್ನವು ಪೌಡರ್ ರೂಪದಲ್ಲಿದ್ದು 38,88,150 ರೂ. ಬೆಲೆಯುಳ್ಳದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್ತಿನವರದ್ದು ಗೂಂಡಾ ಸಂಸ್ಕೃತಿಯಲ್ಲ : ಕಟೀಲ್
ಮತ್ತೊಂದು ಪ್ರಕರಣದಲ್ಲಿ ಭಟ್ಕಳ ಮೂಲದ ಮೊಹಮ್ಮದ್ ಮೊಹಿದ್ದೀನ್ ಕೂಡ 14,63,490 ರೂ ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಐಪಿಎಲ್ ಹರಾಜು: ದುಬಾರಿ ಮೊತ್ತಕ್ಕೆ ಆರ್ ಸಿಬಿಗೆ ಮಾರಾಟವಾದ ಮ್ಯಾಕ್ಸ್ ವೆಲ್
You seem to have an Ad Blocker on.
To continue reading, please turn it off or whitelist Udayavani.