ಮಂಗಳೂರು: ಆನ್ಲೈನ್ನಲ್ಲಿ ಹೂಡಿಕೆ ಮಾಡಿಸಿ ವಂಚನೆ
Team Udayavani, May 17, 2023, 6:35 AM IST
ಮಂಗಳೂರು: ಆನ್ಲೈನ್ ಮೂಲಕ ಹೂಡಿಕೆ ಮಾಡಿಸಿ ವ್ಯಕ್ತಿಯೋರ್ವರಿಗೆ 85,000 ರೂ. ವಂಚಿಸಲಾಗಿದೆ. ದೂರುದಾರರಿಗೆ ಅಪರಿಚಿತ ವ್ಯಕ್ತಿಯೋರ್ವ ಮೇ 5ರಂದು ಇನ್ಸ್ಟಾಗ್ರಾಂ ಖಾತೆ ಮೂಲಕ ಇನ್ವೆಸ್ಟ್ಮೆಂಟ್ ಪ್ಲ್ರಾನ್ ಬಗ್ಗೆ ಪೋಸ್ಟ್ ಮಾಡಿದ್ದ. ಅನಂತರ ಅಪರಿಚಿತ ವ್ಯಕ್ತಿ ಆತನನ್ನು ದರ್ಶೆಲಾ ಎಂದು ಪರಿಚಯಿಸಿಕೊಂಡು ಇನ್ವೆಸ್ಟ್ಮೆಂಟ್ ಪ್ಯಾÉನ್ ಬಗ್ಗೆ ವಿವರಿಸಿದ್ದ.
10,000 ರೂ. ಗಳಿಂದ 10 ಲ.ರೂ. ಗಳವರೆಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಹೇಳಿದ್ದ. ದೂರುದಾರರು ಅದನ್ನು ನಿಜವೆಂದು ನಂಬಿ ಹಣ ಹೂಡಿಕೆ ಮಾಡಲು ಮುಂದಾದರು.
ಹಂತ ಹಂತವಾಗಿ 55,000 ರೂ., 20,000 ರೂ. ಮತ್ತು 10,000 ರೂ. ಹೀಗೆ ಒಟ್ಟು 85,000 ರೂ.ಗಳನ್ನು ಅಪರಿಚಿತನ 8980055313 ಸಂಖ್ಯೆಗೆ ಯುಪಿಐ ಮುಖಾಂತರ ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ಯಾವುದೇ ಹಣ ವಾಪಸ್ ನೀಡಲಿಲ್ಲ. ಅಪರಿಚಿತ ಇನ್ನಷ್ಟು ಹೂಡಿಕೆ ಮಾಡಲು ತಿಳಿಸಿದಾಗ ದೂರುದಾರರು ನಿರಾಕರಿಸಿದರು. ಅನಂತರ ಅಪರಿಚಿತ ವ್ಯಕ್ತಿ ದೂರುದಾರರನ್ನು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.