ಚರಿತ್ರೆ ಹೇಳುವ ಚಿತ್ರಗಳ ಪ್ರದರ್ಶನ
Team Udayavani, Dec 23, 2018, 11:57 AM IST
ಮಹಾನಗರ : ಕರಾವಳಿ ಉತ್ಸವದ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಸಹಕಾರದೊಂದಿಗೆ ನಗದರ ಕದ್ರಿ ಉದ್ಯಾನವನದಲ್ಲಿ ಶನಿವಾರದಿಂದ ಮೂರುದಿನಗಳ ಕಾಲ ‘ಚರಿತ್ರೆ ಹೇಳುವ ಚಿತ್ರಗಳು’ ಚಿತ್ರಕಲಾ ಪ್ರದರ್ಶನ ಆರಂಭಗೊಂಡಿದೆ.
ಈ ಚಿತ್ರಕಲಾ ಪ್ರದರ್ಶನದಲ್ಲಿನ ಸ್ವಾತಂತ್ರ್ಯ ಪೂರ್ವ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದ್ದು, ಸ್ವಾತಂತ್ರ್ಯ ಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳನ್ನು ಬಿಂಬಿಸುವ ಚಿತ್ರಗಳು ಇರಲಿವೆ. ವಿವಿಧ ಛಾಯಾಗ್ರಾಹಕರು ಕ್ಲಿಕ್ಕಿಸಿದ ಉತ್ತಮ ಫೋಟೊಗಳನ್ನು ಪ್ರದರ್ಶನಕ್ಕಿಡಲಾಗಿವೆ.
1861-1890ರ ಅವಧಿಯ ಲಾಲ್‌ಬಾಗ್, ಹೂವಿನ ಮಾರುಕಟ್ಟೆ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ಮಂಗಳೂರು ನಗರದ ಬೀದಿ, ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮಂಗಳೂರು ವಿ.ವಿ. ಕಾಲೇಜು, ಮಂಗಳೂರು ಜೆಟ್ಟಿ, 1901-1920 ಅವಧಿಯ ಸುಲ್ತಾನ್ ಬತ್ತೇರಿ, 1927-1944ರ ಅವಧಿಯ ಮಂಗಳೂರಿನ ಮೊದಲ ಬಸ್, ಕೂಳೂರು ಕಟ್ಟೆ ಚೆಕ್‌ಪೋಸ್ಟ್, 1858-1890ರ ಅವಧಿಯಲ್ಲಿದ್ದ ಅಂಚೆ ಕಚೇರಿ ಸಹಿತ ಮತ್ತಿತರ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.