ಮಂಗಳೂರಿನಲ್ಲಿ ಜಾಗತಿಕ ಮಟ್ಟದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜು
ಇಲ್ಲಿ ಪ್ರತೀ ತರಗತಿಯಲ್ಲಿ 25ರಂತೆ 4 ತರಗತಿಗಳು ಪೂರ್ಣ ತರಬೇತಿ ಪಡೆದ ಪರಿಣಿತ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ನಡೆಯುತ್ತಿವೆ.
Team Udayavani, Feb 25, 2020, 4:01 PM IST
Mangalore Shakthi Residential School
ಮಂಗಳೂರು ನಗರದ ಹೃದಯ ಭಾಗದಿಂದ ಏಳು ಕಿ.ಮೀ ದೂರದಲ್ಲಿರುವ ಶಕ್ತಿನಗರದಲ್ಲಿ ಸುಂದರ ಪ್ರಕೃತಿಯ ಮಡಿಲಲ್ಲಿ ಎದ್ದು ನಿಂತಿದೆ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜು. ಇಲ್ಲಿನ ಪ್ರಶಾಂತ ವಾತಾವರಣ ಕಲಿಕೆಗೆ ಪೂರ್ಣ ಸಹಕಾರಿಯಾಗಿದೆ. ಒಟ್ಟು 2ಲಕ್ಷ ಚದರ ಅಡಿಯಲ್ಲಿ ಬೃಹತ್ ಕಟ್ಟಡ, ಅಂತರಾಷ್ಟ್ರೀಯ ಮಟ್ಟದ ಪ್ರಯೋಗಾಲಯ ಮತ್ತು ಗ್ರಂಥಾಲಯ ನಿರ್ಮಾಣವಾಗಿದೆ.
ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ:
2015ರಲ್ಲಿ ಸ್ಥಾಪಿಸಲ್ಪಟ್ಟ ಟ್ರಸ್ಟ್ನ ವತಿಯಿಂದ ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. ಇಲ್ಲಿ ಪ್ರತೀ ತರಗತಿಯಲ್ಲಿ 25ರಂತೆ 4 ತರಗತಿಗಳು ಪೂರ್ಣ ತರಬೇತಿ ಪಡೆದ ಪರಿಣಿತ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ನಡೆಯುತ್ತಿವೆ.
ಶಕ್ತಿ ವಸತಿ ಶಾಲೆ:
2018ರಲ್ಲಿ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜುಗಳ ಆರಂಭವಾಯಿತು. ವಿಶಾಲವಾದ ಪ್ರದೇಶದಲ್ಲಿ ವಿನೂತನ ವಿನ್ಯಾಸ ಹೊಂದಿರುವ ಶಾಲಾ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯ ಎದ್ದು ನಿಂತಿದೆ. ಅನುಭವಿ ಶಿಕ್ಷಕರಿಂದ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಅತ್ಯುತ್ತಮ ಪ್ರಯೋಗಾಲಯಗಳು, ಆಧುನಿಕ ಬೋಧನೋಪಕರಣಗಳು ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಎಲ್ಲಾ ತರಗತಿಗಳಿಗೂ ಒದಗಿಸಲಾಗಿದೆ. ಎಲ್ಲಾ ಕೊಠಡಿಗಳು ಎ.ಸಿ ಸೌಲಭ್ಯ ಹೊಂದಿವೆ. ಸಂವಹನ ಕಲೆಯಲ್ಲಿ ಪಳಗಿರುವ ತರಬೇತಿ ಪಡೆದ ಅನುಭವಿ ಶಿಕ್ಷಕರ ತಂಡ ಈ ಶಾಲೆಯಲ್ಲಿದೆ ಎಂಬುದು ಹೆಗ್ಗಳಿಕೆ.
ಇಲ್ಲಿ ಒಂದನೇ ತರಗತಿಯಿಂದ ಸಿ.ಬಿ.ಎಸ್.ಇ ಪಠ್ಯಕ್ರಮ ಜಾರಿಯಲ್ಲಿದೆ. ಪಠ್ಯೇತರ ಚಟುವಟಿಕೆಗಳಿಗೆ, ಆಟೋಟಗಳಿಗೆ, ಡ್ರಾಯಿಂಗ್, ಹಾಡು, ನೃತ್ಯ, ನಾಟಕ ಮೊದಲಾದ ಲಲಿತ ಕಲೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಸರಕಾರದ ನಲಿ ಕಲಿ ವಿಧಾನವನ್ನು ಇಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಆಪ್ತ ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶಾಲವಾದ ಆಟದ ಮೈದಾನ, ಗುಣಮಟ್ಟದ ಈಜುಕೊಳ ಈ ಶಾಲೆಯಲ್ಲಿದೆ. ಎಲ್ಲಾ ಆಟಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಕ್ತಿ ಎಡ್ವಾನ್ಸ್ ಡ್ ಲರ್ನಿಂಗ್:[SAL]
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ 1 ತರಗತಿಯಿಂದ ಅವರ ಅಕ್ಷರವನ್ನು ಚಂದದ ರೀತಿಯಲ್ಲಿ ಬರೆಯುವ ನೂತನ ವಿಧಾನವನ್ನು ಕಲಿಸುವುದು. ಭಾಷಾ ವಿಷಯಗಳಾದ ಹಿಂದಿ, ಕನ್ನಡ, ಸಂಸ್ಕೃತ ಮುಂತಾದ ವಿಷಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವುದು.
6ನೇ ತರಗತಿಯಿಂದ ಕಿಶೋರ ವೈಜ್ಞಾನಿಕ ಪ್ರೋತ್ಸಾಹ ಯೋಜನಾ(ಕೆವಿಪಿವೈ)ಯ ರಾಷ್ಟೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ, ಓಲಿಂಪಿಯಾಡ್ ಪರೀಕ್ಷೆಗೆ ತಯಾರಿ, ಎನ್ಡಿಎ(ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ) ಪರೀಕ್ಷೆ ಐಐಟಿ ಮತ್ತು ಎನ್ಐಟಿ ಎಂಜಿನಿಯರಿಂಗ್ ಪ್ರವೇಶಕ್ಕೆ ಜೆಇಇ, ವೈದ್ಯಕೀಯ ಪ್ರವೇಶಕ್ಕಾಗಿ ನೀಟ್, ರಾಜ್ಯ ಸರ್ಕಾರ ನಡೆಸುವ ಸಿಇಟಿ ಹೀಗೆ ಹಲವು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಅವುಗಳಲ್ಲಿ ಆಸಕ್ತಿಯನ್ನು ಭರಿಸುವುದು ಶಕ್ತಿ ಎಡ್ವಾನ್ಸ್ ಡ್ ಲರ್ನಿಂಗ್ ಉದ್ದೇಶ. ಇದನ್ನು ಶಾಲಾ ಹಂತದಲ್ಲಿಯೇ ನೀಡಲಾಗುತ್ತದೆ.
ಶಾಲಾ ವಾಹನ:
ಊರ ಪರವೂರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. 5ನೆಯ ತರಗತಿಯ ನಂತರದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 1 ರಿಂದ 8 ನೇ ತರಗತಿಯ ವರೆಗೆ ತರಗತಿಗಳು ನಡೆಯಲಿವೆ.
ಶಕ್ತಿ ಪದವಿ ಪೂರ್ವ ಕಾಲೇಜು:
2018ರ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ತರಗತಿಗಳ ಆರಂಭ ಆಗಿರುತ್ತದೆ. PCMB ಮತ್ತು PCMC ಅಯ್ಕೆಗಳು ವಿಜ್ಞಾನ ವಿಭಾಗದಲ್ಲಿದ್ದು, ವಾಣಿಜ್ಯ ವಿಭಾಗದಲ್ಲಿ EBAC ಹಾಗೂ SEBA ಆಯ್ಕೆಗಳಿರುತ್ತವೆ. 2000 ಚ. ಅಡಿಯಲ್ಲಿ ಪ್ರತ್ಯೇಕ ಪ್ರತ್ಯೇಕ ಸುಸಜ್ಜಿತ ಪ್ರಯೋಗಾಲಯಗಳು, ನುರಿತ ಪ್ರಾಧ್ಯಾಪಕರಿಂದ ವಿಶೇಷ ತರಗತಿಗಳು ಇಲ್ಲಿನ ವೈಶಿಷ್ಟ್ಯ.
ಭಾಷೆಗಳ ಕಲಿಕೆಗೆ ವಿಶೇಷ ಪ್ರಯತ್ನ ನೀಡಲಾಗುತ್ತದೆ. ಇಂಗ್ಲೀಷ್ನ ಜೊತೆಗೆ ಕನ್ನಡ, ಹಿಂದಿ ಹಾಗೂ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಶಕ್ತಿ ಕೋಚಿಂಗ್ ಅಕಾಡೆಮಿ:
ವಿಶೇಷ ತರಗತಿಗಳನ್ನು ನಡೆಸಲು ಮಂಗಳೂರಿನ ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ನಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿ ಪ್ರಾರಂಭಿಸಲಾಗಿದೆ. ಈ ಕೋಚಿಂಗ್ ಅಕಾಡೆಮಿಯಲ್ಲಿ ರಾಜ್ಯ ಹಾಗೂ ಅಂತರ ರಾಜ್ಯದ ಯಾವುದೇ ವಿದ್ಯಾರ್ಥಿಯು ತನಗೆ ಅವಶ್ಯವಿರುವ ವಿಜ್ಞಾನ ಹಾಗೂ ವಾಣಿಜ್ಯದ ಕೋಚಿಂಗನ್ನು ಪಡೆಯಬಹುದು. ಅವುಗಳು NEET ಮತ್ತು ಇತರೆ ವೈದ್ಯಕೀಯ ಪ್ರವೇಶದ ಪರೀಕ್ಷೆಗಳ ತರಬೇತಿ.
JEE(MAIN & ADVANCED) KCET COMED-K, KVPY ಆಗಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ CA Foundation, CS & CLAT ತರಬೇತಿ ನೀಡಲಾಗುತ್ತದೆ.
ಕರ್ನಾಟಕ ಹಾಗೂ ದೇಶದ ಅನೇಕ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಕಾರಣೀಭೂತರಾದ ನುರಿತ ಅಧ್ಯಾಪಕರ ಈ ಕೋಚಿಂಗ್ ಅಕಾಡೆಮಿಯನ್ನು ಮುನ್ನಡೆಸುತ್ತಾರೆ.
ಕ್ಯಾಂಟೀನ್:
ಒಮ್ಮೆಗೆ 350 ಮಂದಿ ಕುಳಿತು ಊಟ ಮಾಡಬಹುದಾದ ವಿಶಾಲ ಕ್ಯಾಂಟೀನ್ ಸೌಲಭ್ಯವನ್ನು ಈ ಕಾಲೇಜು ಹೊಂದಿದೆ. 4 ಎಕರೆ ವಿಸ್ತೀರ್ಣ ಹೊಂದಿರುವ ಜಾಗದಲ್ಲಿ ಆಟದ ಮೈದಾನ, ಈಜು ಕೊಳ, ಕ್ರೀಡಾ ಕೊಠಡಿ, ಭದ್ರತಾ ಕೊಠಡಿ, ಸಿಸಿಟಿವಿ ನಿಯಂತ್ರಣ, ಹವಾ ನಿಯಂತ್ರಿತ ಕೊಠಡಿಗಳನ್ನು ನಾವು ಕಾಣಬಹುದು.
ಅತ್ಯುತ್ತಮ ವಸತಿ ಸೌಲಭ್ಯ:
ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನ ವಸತಿ ನಿಲಯದಲ್ಲಿ ಅತ್ಯುತ್ತಮ ಅಂತರಾಷ್ಟೀಯ ಮಟ್ಟದ ಹುಡುಗ ಮತ್ತು ಹುಡುಗಿಯರಿಗಾಗಿ ಪ್ರತ್ಯೇಕ ವಸತಿ ನಿಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಕೊಠಡಿಯಲ್ಲಿ 4 ವಿದ್ಯಾಥರ್ಿಗಳಿಗೆ ವಾಸ ಕಲ್ಪಿಸಲಾಗಿದೆ. ಹವಾನಿಯಂತ್ರಿತ ಕೊಠಡಿಗಳ ಸೌಲಭ್ಯ ಕೂಡ ಇದೆ. ಕರ್ಲಾನ್ ಮ್ಯಾಟ್ರಸ್ ಗಳನ್ನು ಪ್ರತೀ ಮಂಚಕ್ಕೆ ಒದಗಿಸಲಾಗಿದೆ. ಎಲ್ಲಾ ಕೊಠಡಿಗಳು ಪ್ರತ್ಯೇಕ ಶೌಚಾಲಯ ಮತ್ತು ಸ್ನಾನ ಗ್ರಹಗಳನ್ನು ಹೊಂದಿದೆ. ಸ್ಮಾರ್ಟ್ ವಿದ್ಯಾರ್ಥಿಗಳಿಗೆ ಲಾಂಡ್ರಿ ವ್ಯವಸ್ಥೆ, ಊಟ, ಉಪಾಹಾರಕ್ಕೆ ವಿಶಾಲವಾದ ಊಟದ ಹಾಲ್ನ ವ್ಯವಸ್ಥೆಯಿದೆ. ಊಟ ಮತ್ತು ಉಪಾಹಾರಗಳ ವ್ಯವಸ್ಥೆಯನ್ನು ಗಮನಿಸಿ ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಈಖಖಂ) ಪರವಾನಿಗೆ ನೀಡಿದೆ.
ವಸತಿ ನಿಲಯದಲ್ಲಿ ಪ್ರತಿ ಅಂತಸ್ತಿಗೂ ಪ್ರತ್ಯೇಕ ವಾರ್ಡನ್ನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರು ತನ್ನ ಪೋಷಕರ ಜೊತೆ ಮಾತನಾಡಲು ವಿಶೇಷ ಮತ್ತು ಸೌಲಭ್ಯವಿರುವ ಫೋನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರಿಗೆ ಬೆಳಗ್ಗೆ ಎದ್ದ ಕೂಡಲೆ ಯೋಗವನ್ನು ಕಡ್ಡಾಯವಾಗಿ ಮಾಡಿಸಲಾಗುವುದು.
ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ಬರದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ವಸತಿ ನಿಲಯದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಓದುವ ಸಮಯವನ್ನು ನಿಗದಿ ಪಡಿಸಲಾಗಿದೆ. ಹಾಸ್ಟೆಲ್ ನ ವಾರ್ಡ್ ನ್ ಗಳ ಜೊತೆ ಅನೇಕ ಉಪನ್ಯಾಸಕರು ಇದನ್ನು ಗಮನಿಸುತ್ತಾರೆ. ವಸತಿ ನಿಲಯದಲ್ಲಿ ಉಪನ್ಯಾಸಕರು ಹಾಗೂ ದೈಹಿಕ ಶಿಕ್ಷಕರು ಉಳಿಯುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಓದುವಿಕೆ ಹಾಗೂ ಶಿಸ್ತು, ಗುಣ ನಡತೆಯ ಬಗ್ಗೆ ಗಮನಿಸುವ ತಂಡವಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೋಸ್ಕರ ಹೆಚ್ಚುವರಿ ತರಗತಿಯನ್ನು ಉಪನ್ಯಾಸಕ ವರ್ಗ ನಡೆಸಿಕೊಡುತ್ತದೆ.
ಗ್ರಂಥಾಲಯ:
ಸುಮಾರು 3500 ಚದರಅಡಿಯಲ್ಲಿ ಗ್ರಂಥಾಲಯ ನಿರ್ಮಾಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಇತರೆ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ ಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳು ಲಭ್ಯವಿರುತ್ತದೆ. ವಿದ್ಯಾರ್ಥಿಗಳ ಬೇಡಿಕೆಗಳ ಅನ್ವಯ ಪುಸ್ತಕಗಳನ್ನು ತರಿಸಲಾಗುತ್ತದೆ. ಒಂದು ಹೊಸ ಶಾಲೆ ಮತ್ತು ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ಗ್ರಂಥಗಳು ನಮ್ಮ ಗ್ರಂಥಾಲಯದಲ್ಲಿ ದೊರಕುತ್ತದೆ.
ಪ್ರಯೋಗಾಲಯ:
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕವಿಜ್ಞಾನ ಹಾಗೂ ಶಾಲೆಗೆ ಬೇಕಾಗಿರುವ ಸುಸಜ್ಜಿತ ಪ್ರಯೋಗಾಲಯವು ಪ್ರತ್ಯೇಕ ಪ್ರತ್ಯೇಕ 2000 ಚ.ಅಡಿ ಕೊಠಡಿಗಳ ಮೂಲಕ ಇದೆ. ಇಂತಹ ವಿಶಾಲವಾದ ಪ್ರಯೋಗಾಲಯದಲ್ಲಿ ಒಮ್ಮೆಗೆ 180 ವಿದ್ಯಾರ್ಥಿಗಳು ಕುಳಿತು ಪ್ರಯೋಗವನ್ನು ನಡೆಸಬಹುದಾಗಿದೆ. ಅತ್ಯಾಧುನಿಕ ಪ್ರಯೋಗೋಪಕರಣಗಳನ್ನು ಪ್ರಯೋಗ ನಡೆಸಲು ಅನುಕೂಲವಾಗುವಂತೆ ಕಲ್ಪಿಸಲಾಗಿದೆ.
ಪಠ್ಯೇತರ ಚಟುವಟಿಕೆ:
ಶಕ್ತಿ ವಿದ್ಯಾ ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಪ್ರಧಾನಿ ಮೋದಿಯವರ ಕಲ್ಪನೆಯ ಸ್ವಚ್ಛ ಭಾರತ ಆಂದೋಲನದ ಮೂಲಕ ಶಕ್ತಿ ನಗರವನ್ನು ಇನ್ನು 2 ವರ್ಷಗಳಿಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ನಿರ್ಮಾಣ ಮಾಡುವ ಕನಸು ಇದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಲಾಗುವುದು. ವಿವಿಧ ರೀತಿಯ ಹಬ್ಬಗಳನ್ನು ಆಚರಿಲಾಗುತ್ತದೆ.
ಕೌನ್ಸ್ಲಿಂಗ್:
ಹದಿಹರೆಯದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಸಮಸ್ಯೆ, ಮಾನಸಿಕ ಒತ್ತಡಗಳ ಬಗ್ಗೆ ಆಪ್ತ ಸಮಾಲೋಚನೆಗಾಗಿ ಕೌನ್ಸಿಲರ್ಗಳನ್ನು ನೇಮಕ ಮಾಡಲಾಗಿದೆ. ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಗುತ್ತದೆ. ಪೋಷಕರಿಗೆ ಅಗತ್ಯವಾಗಿ ತಿಳಿಸುವ ಮಾಹಿತಿಯನ್ನು ಕೌನ್ಸಿಲರ್ ನೀಡುತ್ತಾರೆ.
ವೈದ್ಯರ ಲಭ್ಯತೆ:
24 ಗಂಟೆಗಳ ಕಾಲವೂ ಕರೆಗೆ ತಕ್ಷಣ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳ ಆರೋಗ್ಯ ಪಾಲನೆಗೆ ಗಮನ ಕೊಡುವ ನುರಿತ ವೈದ್ಯಾಧಿಕಾರಿಗಳು ನಮ್ಮೊಂದಿಗಿದ್ದಾರೆ.
ಸಂಪರ್ಕಿಸಿ: ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಶಕ್ತಿ ಪ.ಪೂ ಕಾಲೇಜು,ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ, ಶಕ್ತಿನಗರ. ಮಂಗಳೂರು 575016
Website: www.shakthi.net.in
Email:[email protected]
Ph: 0824-2230452 / 9686000046 /9611588813
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.