Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ
ಪಟಾಕಿ ಮಾರಾಟಕ್ಕೆ ಪಾಲಿಕೆಯಿಂದ ಎಚ್ಚರಿಕೆಯ ಹೆಜ್ಜೆ
Team Udayavani, Oct 22, 2024, 6:58 PM IST
ಮಹಾನಗರ: ಬೆಳಕಿನ ಹಬ್ಬ ದೀಪಾವಳಿಗೆ ಕರಾವಳಿಯಲ್ಲಿ ಸಿದ್ಧತೆಗಳು ಶುರುವಾಗಿದೆ. ಸಡಗರ ಸಂಭ್ರಮದಿಂದ ಆಚರಿಸುವ ಈ ಹಬ್ಬ ಆಚರಣೆ ವೇಳೆ ಹಣತೆ ಹಚ್ಚುವುದು ಒಂದೆಡೆಯಾದರೆ, ಪಟಾಕಿ ಸಿಡಿಸಿ ಚಟಾಕಿ ಹರಿಸುವುದು ಮತ್ತೂಂದೆಡೆ. ಪಟಾಕಿಗಳನ್ನು ಬಾನಂಗಳಕ್ಕೆ ಹಾರಿಸಲು ಕಾತರತೆ ಹೆಚ್ಚಾಗಿದೆ. ಇದಕ್ಕಾಗಿ ಸಿದ್ಧತೆಗಳು ಶುರುವಾಗಿವೆ.
ಪಟಾಕಿಗಳು ಸೂಕ್ಷ್ಮವಾಗಿರುವ ಕಾರಣದಿಂದಾಗಿ ಬೇಕಾಬಿಟ್ಟಿ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲು ಅವಕಾಶವಿಲ್ಲ. ಈ ಕಾರಣದಿಂದಾಗಿ ನಗರ ವ್ಯಾಪ್ತಿಯಲ್ಲಿ ಪಾಲಿಕೆ ಗೊತ್ತು ಮಾಡಿದ ಸ್ಥಳಗಳಲ್ಲೇ ವ್ಯಾಪಾರ ನಡೆಸುವಂತೆ ನಿರ್ದೇಶಿಸಿದೆ. ಈ ಪೈಕಿ ನೆಹರೂ ಮೈದಾನದಲ್ಲಿ ಅತ್ಯಧಿಕ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲು ಪಾಲಿಕೆ ಮುಂದಾಗಿದೆ. ದೀಪಾವಳಿ ಹಾಗೂ ತುಳಸಿ ಪೂಜೆಯ ಸಂದರ್ಭದಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟಕ್ಕೆ ಗುರುತಿಸಲಾಗಿರುವ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅನುಮತಿ ಸಿಗಲಿದೆ.
13 ಸ್ಥಳಗಳಲ್ಲಿ 89 ಸ್ಟಾಲ್‌ಗಳು
ಪಾಲಿಕೆಯ ಮೊದಲ ವಲಯದಲ್ಲಿ ಕೃಷ್ಣಪುರ ಪ್ಯಾರಡೈಸ್ ಮೈದಾನ, ಎ.ಪಿ.ಎಂ.ಸಿ. ಕಟ್ಟಡದ ಮುಂಭಾಗದ ತೆರೆದ ಜಾಗ, ಆದರ್ಶ ಯುವಕ ಮಂಡಲ ಮಹಿಳಾ ಸಮಿತಿ ಗಣೇಶಪುರ ಕೈಕಂಬಗಳಲ್ಲಿ ಒಟ್ಟು 15 ಸ್ಟಾಲ್‌ಗಳಿವೆ. ಎರಡನೇ ವಲಯದಲ್ಲಿ 8 ಸ್ಥಳಗಳಿದ್ದು 89 ಸ್ಟಾಲ್‌ಗಳಿಗೆ ಅನುಮತಿ ನೀಡಲು ಪಾಲಿಕೆ ಮುಂದಾಗಿದೆ. ಕದ್ರಿ ಕ್ರಿಕೆಟ್ ಮೈದಾನ, ಪದವು ಹೈಸ್ಕೂಲ್ ಮೈದಾನ, ಬೊಂದೇಲ್ ಕ್ರಿಕೆಟ್ ಮೈದಾನ, ಪಚ್ಚನಾಡಿ ಮೈದಾನ, ನೆಹರು ಮೈದಾನ, ಅತ್ತಾವರ ನಾಯಕ ಮೈದಾನ, ಎಮ್ಮೆಕೆರೆ ಮೈದಾನ, ಉರ್ವ ಕ್ರಿಕೆಟ್ ಮೈದಾನ ಸೇರಿದೆ.
ವಲಯ ಮೂರರಲ್ಲಿ ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ನಿಗದಿ ಪಡಿಸಿದ ಜಾಗ ಹಾಗೂ ಶಕ್ತಿನಗರ ಮೈದಾನ ಆಯ್ಕೆ ಮಾಡಲಾಗಿದ್ದು 10 ಮಂದಿಗೆ ವ್ಯಾಪಾರಕ್ಕೆ ಅವಕಾಶ ಸಿಗಲಿದೆ.
ಮುನ್ನೆಚ್ಚರಿಕೆ ಅಗತ್ಯ
ಮನಸ್ಸಿಗೆ ಮುದ ನೀಡುವ ಹಿನ್ನೆಲೆ ಪಟಾಕಿ ಸಿಡಿಸಲು ಮಕ್ಕಳು ಯುವಕರು ಮುಂದಾಗುತ್ತಾರೆ. ಆದರೆ, ಪಟಾಕಿ ಸಿಡಿಸುವ ವೇಳೆ ಎಚ್ಚರ ಅಗತ್ಯ.ಹಿಂದೆ ಅನೇಕ ಅನಾಹುತಗಳು ಸಂಭವಿಸಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಟಾಕಿ ಸಿಡಿಸುವ ವೇಳೆ ಮಕ್ಕಳನ್ನು ದೂರ ನಿಲ್ಲಿಸುವುದನ್ನು ಮರೆಯಬಾರದು. ಕೈಯಲ್ಲಿ ಹಿಡಿದುಕೊಂಡು ಪಟಾಕಿ ಸಿಡಿಸಬಾರದು. ಅಸ್ತಮಾ, ಆಲರ್ಜಿ ಸಹಿ ತ ಅನಾರೋಗ್ಯ ಇರುವವರು ಪಟಾಕಿಯಿಂದ ದೂರವಿರಬೇಕು. ವಾಹನಗಳನ್ನು ದೂರವಿಟ್ಟು ಪಟಾಕಿ ಸಿಡಿ ಸುವುದು ಉತ್ತಮ. ಮಕ್ಕಳು ಹಿರಿಯರಿರುವ ವೇಳೆ ಕಡಿಮೆ ಶಬ್ಧದ ಪಟಾಕಿ ಬಳಸುವುದರಿಂದ ಆರೋಗ್ಯ ಹಾಗೂ ಪರಿಸರಕ್ಕೂ ಪೂಕರವಾಗಿರಲಿದೆ.
-ಸಂತೋಷ್ ಮೊಂತೇರೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.