Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ನಂಜನಗೂಡು ದೇವಳದಲ್ಲೇ ಹೆಚ್ಚು; 1000, 500 ರೂ. ಮುಖಬೆಲೆ ನೋಟು ಮೂಟೆ ಕಟ್ಟಿ ಇಟ್ಟ ಆಡಳಿತ ಮಂಡಳಿಗಳು
Team Udayavani, Nov 16, 2024, 3:01 PM IST
ಮಂಗಳೂರು: ಭಾರತದಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟು ಗಳ ಅಮಾನ್ಯಿà ಕರಣ ಗೊಂಡು 8 ವರ್ಷಗಳು ಪೂರ್ತಿಯಾಗಿವೆ. ಆದರೂ ಇನ್ನೂ ಈ ನಿರ್ಬಂಧಿತ ನೋಟುಗಳನ್ನೇ ತಂದು ಹುಂಡಿಗೆ ಹಾಕುವ ಭಕ್ತರ ಸಂಖ್ಯೆ ಇದ್ದೇ ಇದೆ!
ಮುಖ್ಯವಾಗಿ ಕ್ಲಾಸ್-1 ದೇಗುಲಗಳಾದ ನಂಜನಗೂಡು, ಚಾಮುಂಡಿ ಬೆಟ್ಟ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಕ್ಷೇತ್ರಗಳ ಹುಂಡಿಗಳಿಗೆ ಅಮಾನ್ಯಿàಕರಣ ಗೊಂಡ 500 ಹಾಗೂ 1000 ರೂ. ನೋಟುಗಳು ಬೀಳುತ್ತಿವೆ. ಈ ನೋಟುಗಳನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆಗಲೀ ಸರ್ಕಾರವಾಗಲೀ ಯಾವುದೇ ರೀತಿಯ ನಿರ್ದೇಶನಗಳನ್ನು ನೀಡದ ಕಾರಣ ಇಂತಹ ನೋಟುಗಳನ್ನು ಮೂಟೆ ಕಟ್ಟಿ ದೇವಸ್ಥಾನ ಸಮಿತಿಗಳು ತಮ್ಮಲ್ಲೇ ಇರಿಸಿಕೊಂಡಿವೆ.
2016ರ ನ.8ರಂದು ನರೇಂದ್ರ ಮೋದಿ ಸರ್ಕಾರ 1000 ರೂ. ಹಾಗೂ ಹಳೆಯ 500 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಿàಕರಣ ಗೊಳಿಸಿ ಆದೇಶಿಸಿತ್ತು. ಆ ಬಳಿಕ ಒಂದು ತಿಂಗಳ ಕಾಲ (ನ.25ರ ವರೆಗೆ) ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾ ಗಿತ್ತು. ಅಲ್ಲಿಯವರೆಗೆ ದೇಗುಲಗಳಿಂದಲೂ ನೋಟುಗಳನ್ನು ವಿನಿಮಯ ಮಾಡಿದ್ದರು. ಆದರೆ ಈ ಅವಧಿ ಮುಗಿದ ಬಳಿಕವೂ ನಿರಂತರವಾಗಿ ಹುಂಡಿಯಲ್ಲಿ ನಿರ್ಬಂಧಿತ ನೋಟುಗಳು ಬೀಳುತ್ತಲೇ ಇವೆ. ಇವುಗಳ ವಿಲೇವಾರಿ ಸವಾಲಾಗಿ ಪರಿಣಮಿಸಿದೆ.
ಸುಬ್ರಹ್ಮಣ್ಯದಲ್ಲಿ 40 ಲಕ್ಷ ಮೌಲ್ಯದ ನೋಟು: ಲಭ್ಯ ಮಾಹಿತಿ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೊಂದರಲ್ಲೇ 40.40 ಲಕ್ಷ ರೂ.ನಷ್ಟು ಮೊತ್ತದ 500, 1000 ರೂ. ಮುಖಬೆಲೆಯ ಹಳೆಯ ನೋಟುಗಳು ಉಳಿದುಕೊಂಡಿವೆ. ಇದರಲ್ಲಿ 26.05 ಲಕ್ಷ ರೂ. (5,211 ನೋಟುಗಳು). 500ರ ನೋಟುಗಳಾಗಿದ್ದರೆ, 14.35 ಲಕ್ಷ ರೂ. (1,435 ನೋಟುಗಳು) 1000 ರೂ. ಮುಖಬೆಲೆಯವು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಕೂಡ ಸುಮಾರು 19 ಲಕ್ಷ ರೂ. ಮೌಲ್ಯದ ನೋಟುಗಳು ಬಾಕಿ ಇವೆ ಎಂದು ಮೂಲಗಳು ತಿಳಿಸಿವೆ.
ನಮ್ಮಲ್ಲಿ ಮಾತ್ರವಲ್ಲ, ರಾಜ್ಯದ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಕೂಡ ಇದೇ ಕಥೆಯಾಗಿದೆ. ಈ ಬಗ್ಗೆ ಯಾವುದೇ ಬ್ಯಾಂಕ್ ಗಳಿಗೂ ಯಾವ ಮಾಹಿತಿ ಇಲ್ಲ, ಆರ್‌ಬಿಐ ಕೂಡ ಯಾವುದೇ ಸೂಚನೆ ನೀಡಿಲ್ಲ, ನಮಗೆ ಕಳೆದ ತಿಂಗಳು ಕೂಡ ನಿಷೇಧಿತ 500 ರೂ. ಹಾಗೂ ಕೆಲವು ತಿಂಗಳ ಹಿಂದೆ ಚಲಾವಣೆಯಿಂದ ಹಿಂಪಡೆದಿರುವ 2000 ರೂ. ನೋಟು ಸಿಕ್ಕಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಹೊರ ಜಿಲ್ಲೆ ಪ್ರವಾಸಿಗರು ಬರುವಲ್ಲಿ ಜಾಸ್ತಿ: ಸಾಮಾನ್ಯವಾಗಿ “ಎ’ ದರ್ಜೆಯ ದೇವಸ್ಥಾನ ಗಳಲ್ಲಿ ಹಳೇ ನೋಟುಗಳ ಕಾಟ ಇಷ್ಟಿಲ್ಲ, ಆದರೆ ಯಾತ್ರಿಕರು, ಪ್ರವಾಸಿಗರು ಹೆಚ್ಚಾಗಿ ಬರುವಂ ತಹ ಕಡೆ ಇದು ಜಾಸ್ತಿ. ದಕ್ಷಿಣ ಕನ್ನಡದಲ್ಲಿ ಕಟೀಲು ಹಾಗೂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಪ್ರಕರಣ ಜಾಸ್ತಿ ಕಂಡು ಬಂದಿದೆ.
ಅದೇ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕೇವಲ ಸುಮಾರು 25 ಸಾವಿರ ರೂಪಾಯಿನಷ್ಟು ಮೌಲ್ಯದ ಹಳೆಯ ನೋಟುಗಳು ಮಾತ್ರ ಸಿಕ್ಕಿದೆ.
2000 ರೂ. ನೋಟುಗಳೂ ಸಿಗುತ್ತಿವೆ!
2023ರ ಸೆಪ್ಟೆಂಬರ್ 30 ರಿಂದ ಚಲಾವಣೆಯಿಂದ ಹಿಂಪಡೆಯಲಾಗಿರುವ 2000 ರೂ. ಮುಖ ಬೆಲೆಯ ನೋಟುಗಳನ್ನೂ ಕೆಲವು ಭಕ್ತರು ಹುಂಡಿಗಳಿಗೆ ಹಾಕುತ್ತಿದ್ದಾರೆ. ಅಂತಹ ಸುಮಾರು 98 ನೋಟುಗಳು ಸಿಕ್ಕಿವೆ ಎಂದು ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.