Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್‌ ಹಕ್ಕು ಸಾಧಿಸುವಂತಿಲ್ಲ

ಫ್ಲ್ಯಾಟ್‌ ಅಸೋಸಿಯೇಶನ್‌ ಪರ ನ್ಯಾಯಾಲಯ ತೀರ್ಪು

Team Udayavani, Jan 4, 2025, 6:55 AM IST

court

ಮಂಗಳೂರು: ಫ್ಲ್ಯಾಟ್‌ ಅಸೋಸಿಯೇಶನ್‌ಗೆ ಮೀಸಲಿರಿಸಿದ ಜಾಗವನ್ನು ಬಿಲ್ಡರ್‌ಗಳು ತಮ್ಮದೆಂದು ಹಕ್ಕು ಸಾಧಿಸುವುದು ಸಾಧುವಲ್ಲ ಎಂದು ಮೂಡುಬಿದಿರೆಯ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಬಪ್ಪನಾಡು ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಫ್ಲ್ಯಾಟ್‌ ಅಸೋಸಿಯೇಶನ್‌ ಸಂಸ್ಥೆಗೆ ಸೇರಿದ 60 ಸೆಂಟ್ಸ್‌ ಸ್ಥಳದಲ್ಲಿ ಅರ್ಧ ಭಾಗದಲ್ಲಿ ಫ್ಲ್ಯಾಟ್‌ ಕಟ್ಟಡವಿದ್ದು, ಉಳಿದ ಅರ್ಧ ಜಾಗವು ಸಾಮಾನ್ಯ ಹಕ್ಕಿನ ಸ್ಥಳವಾಗಿತ್ತು. ಆದರೆ ಕಟ್ಟಡದ ಮಾಲಕರು ಮತ್ತು ಬಿಲ್ಡರ್‌ ಕಟ್ಟಡದ ಸುತ್ತಮುತ್ತ ಸಾಮಾನ್ಯ ಬಳಕೆಗೆ ಮೀಸಲಿರಿಸಿದ ಜಾಗವನ್ನು ದುರುದ್ದೇಶಪೂರ್ವಕವಾಗಿ ಆಕ್ರಮಿಸಿ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಬಗ್ಗೆ ಕಟ್ಟಡದ ಫ್ಲ್ಯಾಟ್‌ ಮಾಲಕರ ಸಂಘ ಸಿವಿಲ್‌ ನ್ಯಾಯಾಲಯದಲ್ಲಿ ಶಾಶ್ವತ ಪ್ರತಿಬಂಧಕಾಜ್ಞೆ ದಾವೆ ಹೂಡಿತ್ತು. ಅದಕ್ಕೆ ಪ್ರತಿಯಾಗಿ ಬಿಲ್ಡರ್‌ ಸಂಸ್ಥೆಯು ಸಾಮಾನ್ಯ ಸ್ಥಳವನ್ನು ಫ್ಲ್ಯಾಟ್‌ ಮಾಲಕರಿಗೆ ಕೊಟ್ಟಿಲ್ಲ ಮತ್ತು ಕಾಮನ್‌ ಏರಿಯಾದಲ್ಲಿ ಬಾವಿ ತೋಡಿದ್ದನ್ನು ಮುಚ್ಚಿಸಬೇಕು ಎಂದು ಪ್ರತಿದಾವೆ ಹೂಡಿತ್ತು.

ದೀರ್ಘ‌ಕಾಲ ಸಾಕ್ಷಿ ವಿಚಾರಣೆ ನಡೆದು, ವಾದ ಪ್ರತಿವಾದಗಳನ್ನು ಆಲಿಸಿದ ಅನಂತರ ನ್ಯಾಯಾಲಯವು ಕಟ್ಟಡದ ಸುತ್ತಮುತ್ತ ಕಾಮನ್‌ ಏರಿಯಾ ಅಥವಾ ಸಾಮಾನ್ಯ ಸ್ಥಳಕ್ಕೆಂದು ಡೀಡ್‌ ಆಫ್‌ ಡಿಕ್ಲರೇಶನ್‌ ದಾಖಲೆಯಲ್ಲಿ ಸ್ಪಷ್ಟವಾಗಿ ನಮೂದಿಸಿ ಮೀಸಲಿರಿಸಿದ ಸ್ಥಳದಲ್ಲಿ ಕಟ್ಟಡದ ಮಾಲಕರು ಅಥವಾ ಬಿಲ್ಡರ್‌ ಯಾವುದೇ ರೀತಿಯಲ್ಲಿ ಹಕ್ಕು ಸಾಧಿಸುವುದನ್ನು ಮಾನ್ಯ ಮಾಡಲಾಗದು ಎಂದು ನ್ಯಾಯಾಲಯವು ಫ್ಲ್ಯಾಟ್‌ ಮಾಲಕರ ಸಂಘದ ದಾವೆಯನ್ನು ಪುರಸ್ಕರಿಸಿದೆ. ಫ್ಲ್ಯಾಟ್‌ ಮಾಲಕರ ಸಂಘದ ಪರವಾಗಿ ನ್ಯಾಯವಾದಿ ಶಶಿರಾಜ್‌ ರಾವ್‌ ಕಾವೂರು ವಾದಿಸಿದ್ದರು.

ಟಾಪ್ ನ್ಯೂಸ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

police crime

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

1-yash

Mangaluru: ದಿಢೀರ್‌ ಆಗಿ ಕಾಣಿಸಿಕೊಂಡ ನಟ ಯಶ್‌

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.