ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Team Udayavani, Jan 9, 2025, 12:33 PM IST
ಮಂಗಳೂರು: ಸಿ.ಬಿ.ಎಸ್.ಇ. ಬೋರ್ಡ್ ನಡೆಸುವ ಆರ್ಯಭಟ ಗಣಿತ ಚಾಲೆಂಜ್ ಹಂತ 1 ಪರೀಕ್ಷೆಯನ್ನು 8 ರಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 2024 ರ ಆಗಸ್ಟ್ 30 ರಂದು ಡಿ.ಪಿ.ಎಸ್, ಎಂ.ಆರ್.ಪಿ.ಎಲ್. ಶಾಲೆಯಲ್ಲಿ ನಡೆಸಲಾಗಿತ್ತು.
ಈ ಪರೀಕ್ಷೆಯಲ್ಲಿ 9ನೇ ತರಗತಿಯ ಚಿರಾಗ್ ಅಡಿಗ, ಅನಘಾ ಅನಿಲ್ ಬಾಳಗಿ ಮತ್ತು 10ನೇ ತರಗತಿಯ ಧನುಷ್ ಉಮೇಶ್ ನಾಯ್ಕ್ ವಿದ್ಯಾರ್ಥಿಗಳು 2024 ರ ಅಕ್ಟೋಬರ್ 8 ರಂದು ಸಿ.ಬಿ.ಎಸ್.ಇ. ಬೋರ್ಡ್ ಆನ್ಲೈನ್ನಲ್ಲಿ ನಡೆಸಿದ 2ನೇ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದರು. ಸತತ 2ನೇ ವರ್ಷ ಚಿರಾಗ್ ಅಡಿಗ ಅವರು ಹಂತ 2 ರ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಆರ್ಯಭಟ ಗಣಿತ ಚಾಲೆಂಜ್ 2ನೇ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಪ್ರತಿ ಸಿ.ಬಿ.ಎಸ್.ಇ. ವಲಯದ ಉನ್ನತ 100 ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಬೆಂಗಳೂರು ವಲಯದ ಟಾಪ್ 100 ವಿದ್ಯಾರ್ಥಿಗಳಲ್ಲಿ ದೆಹಲಿ ಪಬ್ಲಿಕ್ ಶಾಲೆಯ 9ನೇ ತರಗತಿಯ ಚಿರಾಗ್ ಅಡಿಗ, ಅನಘಾ ಅನಿಲ್ ಬಾಳಗಿ ಮತ್ತು 10ನೇ ತರಗತಿಯ ಧನುಷ್ ಉಮೇಶ್ ನಾಯ್ಕ್ ಕ್ರಮವಾಗಿ 6, 7 ಮತ್ತು 8 ನೇ ಶ್ರೇಣಿಯನ್ನು ಪಡೆದು ಮೆರಿಟ್ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.