Mangaluru ಆ.8-10: ಗೋಡಂಬಿ ಸಮ್ಮೇಳನ
Team Udayavani, Aug 7, 2024, 11:41 PM IST
ಮಂಗಳೂರು: ಅಖಿಲ ಭಾರತ ಗೋಡಂಬಿ ಸಂಘ-ಎಐಸಿಎ ವತಿಯಿಂದ ಎಐಸಿಎ ಗೋಡಂಬಿ ಸಮ್ಮೇಳನ ಆ.8ರಿಂದ ಆ.10ರ ವರೆಗೆ ಬೆಂಗಳೂರು ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ ನಡೆಯಲಿದೆ.
ಎಐಸಿಎ, ಕ್ಯಾಶ್ಯೂ ಇನಾರ್ಮೇಶನ್ ಡಾಟ್ ಕಾಮ್ ಹಾಗೂ ಅಪೆಡಾ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅಪೇಡಾ ಅಧ್ಯಕ್ಷ ಅಭಿಷೇಕ್‌ದೇವ್ ಮುಖ್ಯ ಅತಿಥಿಯಾಗಿದ್ದು, ಆ.8ರಂದು ಸಂಜೆ ಉದ್ಘಾಟನೆ ನೆರವೇರಿಸುವರು.
ಅಪೆಡಾ ನಿರ್ದೇಶಕ ಡಾ| ತರುಣ್ ಬಜಾಜ್, ಗೋಡಂಬಿ ಹಾಗೂ ಕೊಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ| ಫೆಮಿನಾ, ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಲಹೆಗಾರ ಡಾ| ಅಲ್ಕಾ ರಾವ್, ಭಾರತೀಯ ಬೀಜಗಳು ಹಾಗೂ ಒಣಹಣ್ಣು ಸಮಿತಿ ಅಧ್ಯಕ್ಷ ಗುಂಜನ್ ಜೈನ್, ಎಇಸಿ-ಸಿಐ ಅಧ್ಯಕ್ಷ ಅಲೆಕ್ಸ್ ಎನ್‌ಗುಯೆಶಿಯಾ ಅಸೌಮಾನ್ ಪಾಲ್ಗೊಳ್ಳುವರು.
ಮೂರು ದಿನಗಳ ಸಮ್ಮೇಳನದಲ್ಲಿ ಯಂತ್ರೋಪಕರಣಗಳ ಪ್ರದರ್ಶನ, ಅಲ್ಲದೆ ಪೂರೈಕೆದಾರರಿಗೆ ಬೇಕಾದ ಸೇವೆ
ಗಳ ಪ್ರದರ್ಶನ, ವಿವಿಧ ಬಗೆಯ ಗೋಡಂಬಿ ಪ್ರದರ್ಶನವೂ ನಡೆಯಲಿದೆ.
ಭಾರತೀಯ ಗೋಡಂಬಿ ಕ್ಷೇತ್ರ ಕುರಿತಂತೆ ಗೋಡಂಬಿ ಬೆಳೆ ಹೆಚ್ಚಿಸುವುದು, ತಾಂತ್ರಿಕ ಸುಧಾರಣೆ ಮತ್ತು ಗೋಡಂಬಿ ಫ್ಯಾಕ್ಟರಿಗಳನ್ನು ಸ್ಪರ್ಧಾತ್ಮಕ ಗೊಳಿಸುವುದು, ಭಾರತದಲ್ಲಿ ಗೋಡಂಬಿ ಬಳಕೆ ಕುರಿತು ಅರಿವು ಮೂಡಿಸುವ ಉದ್ದೇಶಗಳನ್ನು ಹೊಂದಿದೆ. 40ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಮಾತನಾಡಲಿದ್ದಾರೆ. 600ರಷ್ಟು ಪ್ರತಿನಿಧಿಗಳು ಭಾರತದಿಂದ ಮತ್ತು ಐವರಿಕೋಸ್ಟ್, ಯುಎಇ, ಸಿಂಗಪುರಕ್ಕೆ ಸೇರಿದ 30 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಎ ಅಧ್ಯಕ್ಷ ರಾಹುಲ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.