Mangaluru: ಬಾವುಟಗುಡ್ಡೆ ತಂಗುದಾಣ ಬಸ್ ಬೇ ಬಳಕೆಗೆ ಅನುವು
Team Udayavani, Nov 13, 2024, 2:23 PM IST
ಬಾವುಟಗುಡ್ಡೆ: ಬಾವುಟ ಗುಡ್ಡೆಯ ಎ.ಬಿ.ಶೆಟ್ಟಿ ರಸ್ತೆಯಲ್ಲಿ ಅಲೋಶಿ ಯಸ್ ಶಿಕ್ಷಣ ಸಂಸ್ಥೆಯ ಎದುರಿನ ಬಸ್ ತಂಗುದಾಣದ ಎದುರು ‘ಬಸ್ ಬೇ’ಗೆಂದು ಮೀಸಲಿರಿಸಿದ್ದ ಜಾಗ ಬಸ್‌ಗಳ ನಿಲುಗಡೆಗೆ ಸಿಗಲಿದೆ. ಇದರಿಂದಾಗಿ ಇಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.
ಬಾವುಟಗುಡ್ಡೆಯಲ್ಲಿ ಬಸ್ ತಂಗು ದಾಣದ ಎದುರು ಇದ್ದ ಖಾಲಿ ಜಾಗ ಮತ್ತು ರಸ್ತೆಯ ನಡುವೆ ಫುಟ್‌ಪಾತ್ ನಿರ್ಮಿಸಲಾಗಿತ್ತು. ಹಾಗಾಗಿ ಬಸ್‌ಗಳು ತಂಗುದಾಣದ ಎದುರಿನ ಸ್ಥಳದಲ್ಲಿ ನಿಲುಗಡೆಯಾಗದೆ ಅದಕ್ಕಿಂತ ಹಿಂದೆ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದ್ದವು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗಿತ್ತು. ಈ ಬಗ್ಗೆ ‘ಸುದಿನ’ದಲ್ಲಿ 2 ಬಾರಿ ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ಇದೀಗ ಈ ಹಿಂದೆ ತಂಗುದಾಣವಿದ್ದ ಸ್ಥಳದಲ್ಲಿ ಶಿಕ್ಷಣ ಸಂಸ್ಥೆಯವರಿಂದಲೇ ವ್ಯವಸ್ಥಿತವಾದ ಹೊಸ ತಂಗುದಾಣ ನಿರ್ಮಾಣಗೊಂಡಿದೆ. ಮಾತ್ರವಲ್ಲದೆ, ರಸ್ತೆ ಮತ್ತು ತಂಗುದಾಣದ ಎದುರಿನ ಜಾಗದ ನಡುವೆ ಇದ್ದ ಫುಟ್‌ಪಾತ್‌ನ್ನು ತೆರವುಗೊಳಿಸಲಾಗಿದೆ. ಹಾಗಾಗಿ ಬಸ್‌ಗಳು ತಂಗುದಾಣ ಸನಿಹಕ್ಕೆ ಹೋಗಲು ಸಾಧ್ಯವಾಗಲಿದೆ.
ನೂತನ ತಂಗುದಾಣ ನಿರ್ಮಾಣ ಪೂರ್ಣಗೊಂಡ ಅನಂತರ ಬಸ್‌ಗಳು ತಂಗುದಾಣದ ಎದುರಿನ ಬಸ್‌ಬೇಯನ್ನೇ ಬಳಕೆ ಮಾಡುವಂತೆ ನೋಡಿಕೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
MUST WATCH
ಹೊಸ ಸೇರ್ಪಡೆ
ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Bantwal: ಶಂಭೂರಿನ ಎಂಆರ್‌ಎಫ್ ತಿಂಗಳಲ್ಲಿ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.