Mangaluru: ಬಸ್‌ಗಳ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಣ್ಮರೆ!
ಖಾಸಗಿ ಬಸ್‌ಗಳಲ್ಲಿ ಕಡ್ಡಾಯ ನಿಯಮ ಪಾಲನೆ ಇಲ್ಲ; ಪೆಟ್ಟಿಗೆ ಇದ್ದರೂ ಔಷಧ, ಸಲಕರಣೆ ಇಲ್ಲ; ಅಗತ್ಯ ಮನವರಿಕೆಗೆ ಮಾಲಕರ ಸಂಘ ನಿರ್ಧಾರ; ಚಾಲಕ, ನಿರ್ವಾಹಕರಿಗೆ ಚಿಕಿತ್ಸಾ ವಿಧಾನ ತರಬೇತಿ
Team Udayavani, Nov 13, 2024, 1:26 PM IST
ಮಹಾನಗರ: ಖಾಸಗಿ ಬಸ್‌ಗಳಲ್ಲಿ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಆರೋಗ್ಯ ಸಮಸ್ಯೆಗೆ ಒಳಗಾಗುವ ಹಲವು ಘಟನೆಗಳು ಆಗಾಗ ಸಂಭವಿಸುತ್ತಿವೆ. ಚಾಲಕ-ನಿರ್ವಾಹಕರು ಅತ್ಯಂತ ಕಾಳಜಿಯಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸುತ್ತಿದ್ದಾರೆ. ಅದರ ನಡುವೆಯೇ ಖಾಸಗಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲೇಬೇಕು ಎಂಬ ಕಡ್ಡಾಯ ನಿಯಮ ಮಾತ್ರ ಸರಿಯಾಗಿ ಜಾರಿಯಾಗುತ್ತಿಲ್ಲ.
ಪ್ರಯಾಣದ ವೇಳೆ ಅಪಘಾತವಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಪ್ರತೀ ಬಸ್‌ಗಳಲ್ಲಿಯೂ ತುರ್ತು ಚಿಕಿತ್ಸಾ ಪೆಟ್ಟಿಗೆ ಇರಬೇಕು ಎನ್ನುವುದು ಸಾರಿಗೆ ಇಲಾಖೆಯ ಸೂಚನೆ. ಈ ನಿಯಮ ಪಾಲಿಸುವ ನಿಟ್ಟಿನಲ್ಲಿ ಎಲ್ಲ ಬಸ್ ಮಾಲಕರಿಗೆ, ನಿರ್ವಾಹಕರಿಗೆ ಮತ್ತು ಚಾಲಕರಿಗೆ ಸೂಚನೆ ನೀಡಲು ಖಾಸಗಿ ಬಸ್ ಮಾಲಕರ ಸಂಘ ಮುಂದಾಗಿದೆ. ಅದೇ ರೀತಿ ತುರ್ತು ಚಿಕಿತ್ಸಾ ವಿಧಾನ ಗಳನ್ನು ಯಾವ ರೀತಿ ಅನುಸರಿಸಬೇಕು ಎಂಬುವುದರ ಬಗ್ಗೆ ಬಸ್, ಚಾಲಕ ನಿರ್ವಾಹಕರಿಗೆ ಪ್ರತ್ಯೇಕ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ.
ನಗರದಲ್ಲಿ ಕೆಲ ದಿನಗಳ ಹಿಂದೆ ಬಸ್ ಪ್ರಯಾಣದ ಸಂದರ್ಭ ವಿದ್ಯಾರ್ಥಿನಿ ಯೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಬಸ್ ಅನ್ನೇ ಆಸ್ಪತ್ರೆಗೆ ಕೊಂಡೊಯ್ದ ಘಟನೆ ನಡೆದಿತ್ತು. ಅದೇ ರೀತಿ, ಪ್ರಯಾಣದ ವೇಳೆ ಹೃದಯಾಘಾತ ಉಂಟಾಗಿ ಪ್ರಯಾಣಿಕ ಸಾವನ್ನಪ್ಪಿದ ಘಟನೆಯೂ ಉಂಟಾಗಿತ್ತು. ಈ ರೀತಿ ಘಟನೆ ಆಗಾಗ್ಗೆ ನಡೆಯು ತ್ತಿದ್ದು, ಚಾಲಕ-ನಿರ್ವಾಹಕರು ಮುನ್ನೆಚ್ಚರಿಕೆ ವಹಿಸಿ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅದಕ್ಕೂ ಮುನ್ನ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪರಿಕರಗಳು ಇದ್ದರೆ ತುರ್ತು ಸ್ಪಂದನೆಗೆ ನೆರವಾಗುತ್ತದೆ.
ಪೆಟ್ಟಿಗೆಯಲ್ಲಿ ಏನೇನಿರಬೇಕು?
ಗಾಯಗೊಂಡವರಿಗೆ ಶುಶ್ರೂಷೆ ನೀಡಲೆಂದು ಸಾಮಾನ್ಯವಾಗಿ ಚಾಲಕನ ಸೀಟಿನ ಹಿಂಭಾಗದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಇಡಲಾಗುತ್ತದೆ. ಇದರಲ್ಲಿ ಹತ್ತಿ, ಡೆಟಾಲ್, ಟಿಂಚರ್, ಸಾಬೂನು, ಬಟ್ಟೆ, ಮುಲಾಮು, ಸುಟ್ಟ ಗಾಯಕ್ಕೆ ಮದ್ದು, ಬ್ಯಾಂಡೇಜ್, ಚಿಮುಟ ಸಹಿತ ತುರ್ತು ಸಂದರ್ಭ ಬಳಕೆಯ ಕೆಲವೊಂದು ಮಾತ್ರೆಗಳು ಇರಬೇಕು.
ಹೆಸರು ಮಾತ್ರ ಒಳಗೆ ಕಾಲಿ
ಕೆಲವೊಂದು ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಎಂದು ಬರೆಯಲಾದ ಬಾಕ್ಸ್‌ಗಳನ್ನು ಮೊಳೆ ಹೊಡೆದು ನೇತಾಕಿರುತ್ತಾರೆ. ಆದರೆ ಒಳಗಡೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಪ್ರಥಮ ಚಿಕಿತ್ಸಾ ಪರಿಕರಗಳನ್ನು ಇರಿಸಲಾಗಿಲ್ಲ. ಇದ್ದರೂ, ವಾಯಿದೆ ಮುಗಿದಿರುತ್ತದೆ. ಅದರ ಬದಲಾಗಿ ಆ ಬಾಕ್ಸ್‌ಗಳಲ್ಲಿ ಇಟಿಎಂ ಮೆಶಿನ್‌ಗಳನ್ನು ಇಡಲು ಕೆಲವರು ಉಪಯೋಗಿಸುತ್ತಿದ್ದಾರೆ.
ಕಡ್ಡಾಯ ಪಾಲನೆಗೆ ಸೂಚನೆ
ಪ್ರಯಾಣದ ಸಂದರ್ಭ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಅವರನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಕೆಲಸವನ್ನು ಬಸ್ ನಿರ್ವಾಹಕ, ಚಾಲಕರು ಮಾಡುತ್ತಿದ್ದಾರೆ. ಆದರೆ, ಮುನ್ನೆಚ್ಚರಿಕೆ ಉದ್ದೇಶಕ್ಕೆ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ಪ್ರತೀ ಬಸ್‌ಗಳಲ್ಲಿಯೂ ಈ ನಿಯಮ ಪಾಲಿಸಬೇಕು ಎಂಬ ಸೂಚನೆ ನೀಡುತ್ತೇನೆ. ಅದರ ಬಳಕೆ ಸಹಿತ ಪ್ರಯಾಣಿಕರ ಜತೆ ಸ್ಪಂದನೆ ಮುಂತಾದ ವಿಷಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಬಸ್ ಚಾಲಕ, ನಿರ್ವಾಹಕರಿಗೆ ಪ್ರತ್ಯೇಕ ಕಾರ್ಯಾಗಾರ ನಡೆಸಲಾಗುವುದು.
– ಅಜೀಜ್ ಪರ್ತಿಪ್ಪಾಡಿ, ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಹಳ್ಳಿಗಳಲ್ಲಿ ಆಸ್ಪತ್ರೆ ಇರುವುದಿಲ್ಲ
ಪ್ರಯಾಣಿಕರಾದ ಶಿವಾನಂದ್ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ ನಗರ ಹೊರತುಪಡಿಸಿ ಕೆಲವೊಂದು ಬಸ್‌ಗಳು ಗ್ರಾಮೀಣ ಭಾಗದ ಮೂಲಕವೂ ಸಂಚರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಲಭ್ಯವೂ ಇರುವುದಿಲ್ಲ. ಪ್ರತಿಯೊಂದು ಬಸ್‌ಗಳಲ್ಲಿಯೂ ಕಡ್ಡಾಯವಾಗಿ ತುರ್ತು ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತುಚಿಕಿತ್ಸೆಯು ಅಪಘಾತ ಸಮಯದಲ್ಲಿ ಪ್ರಯಾಣಿಕರ ಜೀವ ಉಳಿಸಬಲ್ಲದು. ಈ ನಿಯಮ ಕಡ್ಡಾಯ ಪಾಲನೆಯಾಗಬೇಕು ಎಂದು ತಿಳಿಸಿದ್ದಾರೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.