Mangaluru: ಇಂದು ಕ್ರಿಸ್ಮಸ್ ಜಾಗರಣೆ ವಿಶೇಷ ಬಲಿಪೂಜೆ
Team Udayavani, Dec 24, 2024, 1:33 PM IST
ಮಹಾನಗರ: ಕ್ರಿಸ್ತ ಜಯಂತಿಯ ಸಂಭ್ರಮಕ್ಕೆ ನಾಡು ಸಜ್ಜಾಗಿದ್ದು, ಡಿ. 24ರಂದು ರಾತ್ರಿ ಎಲ್ಲೆಡೆ ಕ್ರಿಸ್ಮಸ್ ಸಂಭ್ರಮಾಚರಣೆಗೆ ಚಾಲನೆ ಸಿಗಲಿದೆ. ಬೆತ್ಲೆಹೇಮ್ ನಗರದಲ್ಲಿ ನಡುರಾತ್ರಿಯ ವೇಳೆ ಕ್ರಿಸ್ತರ ಜನನವಾದ ಸನ್ನಿವೇಶವನ್ನು ಸ್ಮರಿಸಿ ಡಿ. 24ರ ರಾತ್ರಿ ಜಾಗತಿಕವಾಗಿ ಕ್ರಿಸ್ಮಸ್ ಜಾಗರಣೆ ನಡೆಯುತ್ತದೆ.
ಮಂಗಳವಾರ ಸಂಜೆ 7 ಗಂಟೆಯಿಂದ ಚರ್ಚ್‌ಗಳಲ್ಲಿ ಕ್ಯಾರೋಲ್ ಗಾಯನ, ವಿಶೇಷ ಬಲಿಪೂಜೆ, ಜಾಗತಿಕ ಶಾಂತಿಗಾಗಿ ಪ್ರಾರ್ಥನೆ ನಡೆಯುತ್ತವೆ. ಬಲಿಪೂಜೆಯ ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡುವ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ವಿದ್ಯುತ್ ದೀಪಗಳ ಅಲಂಕಾರ
ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪಾಲಂಕಾರ ಗೊಳಿಸಲಾಗಿದೆ. ಕೆಥೋಲಿಕ್ ಹಾಗೂ ಪ್ರೊಟೆ ಸ್ಟೆಂಟ್ ಚರ್ಚ್‌ಗಳು ದೀಪಾಲಂಕಾರ ಗಳಿಂದ ಕಂಗೊಳಿಸುತ್ತಿದೆ. ಗೋದಲಿ, ನಕ್ಷತ್ರಗಳೊಂದಿಗೆ ಅಲಂಕರಿಸಲಾಗಿದೆ. ಕೆಥೋಲಿಕ ಚರ್ಚ್‌ಗಳಾದ ನಗರದ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರ್‌ವೆಲ್, ಅಶೋಕ ನಗರ, ಬೊಂದೇಲ್, ವಾಮಂಜೂರು, ಪಾಲ್ದನೆ, ಕುಲಶೇಖರ, ಫಳ್ನೀರ್, ಕಾಸಿಯಾ, ಕೂಳೂರು, ಬಿಜೈ, ಬಜಾಲ್, ಶಕ್ತಿನಗರ, ಬಿಕರ್ನಕಟ್ಟೆ ಸಹಿತ ವಿವಿಧ ಚರ್ಚ್‌ಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ. ಪ್ರೊಟೆಸ್ಟೆಂಟ್ ಧರ್ಮಪ್ರಾಂತದ ಬಲ್ಮಠ ಸಿಎಸ್‌ಐ ಶಾಂತಿ ಕ್ಯಾಥೆಡ್ರಲ್, ಹೆಬಿಕ್ ಮೆಮೋರಿಯಲ್ ಚರ್ಚ್ ಗೋರಿಗುಡ್ಡ, ಕಾಂತಿ ಚರ್ಚ್ ಜಪ್ಪು, ಕೋಡಿಕ್ಕಲ್ ಕ್ರಿಸ್ಟ್ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ.
ಕಂಗೊಳಿಸುತ್ತಿವೆ ಗೋದಲಿ, ಮಿನುಗು ನಕ್ಷತ್ರಗಳು
ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಕೆಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಚರ್ಚ್‌ಗಳು ವಿದ್ಯತ್ ದೀಪ, ಗೋದಲಿ, ನಕ್ಷತ್ರ ಗಳಿಂದ ಕಂಗೊಳಿಸುತ್ತಿವೆ. ಕ್ರೈಸ್ತರ ಮನೆ, ಚರ್ಚ್ ಗಳಲ್ಲಿ ಕ್ರಿಸ್ಮಸ್ ಸಂಬಂಧಿತ ಆಕರ್ಷಕ ಗೋದಲಿ(ಕ್ರಿಬ್)ಗಳನ್ನು ರಚಿಸಲಾಗಿದ್ದು, ಗಮನಸೆಳೆಯುತ್ತಿವೆ. ಬಹುತೇಕ ಕ್ರೈಸ್ತರ ಮನೆಗಳ ಮುಂಭಾಗಗಳಲ್ಲಿ ಗೋದ ಲಿಗಳು, ನಕ್ಷತ್ರಗಳು ಕಾಣಸಿಗು ತ್ತಿದ್ದು, ಸೋಮವಾರ ಸಂಪೂರ್ಣ ವಾಗಿ ಸಿದ್ಧಪಡಿಸಲಾಗಿದೆ. ಅಲಂಕಾರಿಕ ವಸ್ತು ಗಳಿಂದ ಜೋಡಿಸಲಾಗಿದೆ. ಮಂಗಳೂರು ನಗರ, ಗ್ರಾಮಾಂತರದ ಹಲವಾರು ಚರ್ಚ್‌ಗಳಲ್ಲಿ, ಕ್ರೈಸ್ತರ ಮನೆಗಳಲ್ಲಿ ತಯಾರಿಗಳು ಬಲು ಜೋರಾಗಿವೆ.
ಖರೀದಿ ಭರಾಟೆ ಜೋರು
ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಕೋವಿಡ್ ಬಳಿಕ ಮೊದಲ ಬಾರಿಗೆ ಅತೀ ಹೆಚ್ಚಿನ ಖರೀದಿ ಪ್ರಕ್ರಿಯೆ ಇದಾಗಿದೆ ಎಂದು ಮಂಗಳೂರಿನಲ್ಲಿ ವಿವಿಧ ಮಳಿಗೆಯೊಂದರ ಮಾಲಕರು ಅಭಿಪ್ರಾಯಪಟ್ಟಿದ್ದಾರೆ. ಅನಿವಾಸಿ ಭಾರತೀಯರು ವಿಶೇಷವಾಗಿ ಕ್ರಿಸ್ಮಸ್ ಹಬ್ಬಕ್ಕೆ ತಮ್ಮ ರಜೆಗಳನ್ನು ಕಾಯ್ದಿರಿಸಿ ಊರಿಗೆ ಬಂದು ಕುಟುಂಬದೊಂದಿಗೆ ಹೊಸ ಬಟ್ಟೆ ಬರೆಗಳು, ಆಹಾರ ಸಾಮಗ್ರಿಗಳು, ಕ್ರಿಸ್ಮಸ್‌ಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕೆಲವು ಮಳಿಗೆಯಲ್ಲಿ ಸರತಿ ಸಾಲಲ್ಲಿ ನಿಂತು ಖರೀದಿಸುವುದು ಕಂಡುಬರುತ್ತಿದೆ. ಮಂಗಳೂರು ನಗರ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಅಂಗಡಿಗಳಲ್ಲೂ ವ್ಯಾಪಾರ ಶೇಕಡಾವಾರು ಏರಿಕೆಯಾಗಿದೆ.
ಕ್ರಿಬ್‌ಸೆಟ್, ಮನೆ, ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಗಂಟೆ (ಬೆಲ್)ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ವೇಷಭೂಷಣ, ವಿವಿಧ ವಿಗ್ರಹಗಳು, ಕ್ಯಾಂಡಲ್ ಸೆಟ್, ಸ್ಪೆಶಲ್ ಬೆಲ್‌ಗಳು, ಲೈಟಿಂಗ್ಸ್ ಇತ್ಯಾದಿಗಳು ಈಗಾಗಲೇ ಮಾರಾಟವಾಗಿವೆ. ಕೆಲವರು ಕೊನೇ ಕ್ಷಣದಲ್ಲಿ ಖರೀದಿಸಿದರು.
ಮಂಗಳೂರು ನಗರ ಸಹಿತ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಅಂಗಡಿ, ಬೇಕರಿಗಳ ಮುಂಭಾಗದಲ್ಲಿ ಜನಸಂದಣಿ ಹೆಚ್ಚಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.