Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

ಉದ್ಯಾನವನದ ಕಾಯಕಲ್ಪಕ್ಕೆ ಸಿಗಲಿ ಆದ್ಯತೆ | ಸುಣ್ಣ ಬಣ್ಣದೊಂದಿಗೆ ಆಗಬೇಕಿದೆ ಸಣ್ಣಪುಟ್ಟ ದುರಸ್ತಿ

Team Udayavani, Jan 8, 2025, 4:27 PM IST

10(1

ಮಹಾನಗರ: ಕದ್ರಿ ಪಾರ್ಕ್‌ ಬಳಿಯ ಜಿಂಕೆ ವನವನ್ನು ಕದ್ರಿ ಪಾರ್ಕ್‌ಗೆ ಪರ್ಯಾವಾಗಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕಾ ಇಲಾಖೆ, ಮುಡಾ, ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಯಾಗಿ ಹಲವು ವರ್ಷಗಳು ಕಳೆದಿದ್ದು, ಇದೀಗ ಪಾರ್ಕ್‌ಗೆ ಸೂಕ್ತ ನಿರ್ವಹಣೆಯ ಕೊರತೆ ಉಂಟಾಗಿದೆ.

ಮರಗಳಿಂದ ಬೀಳುವ ತರಗೆಲೆಗಳನ್ನು ಗುಡಿಸಿ ತೆರವು ಮಾಡುವುದು ಹೊರತು ಪಡಿಸಿದರೆ ಇತರ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಾರ್ಕ್‌ ಒಳಗಿನ ಫೌಂಟೇನ್‌ಗಳು ಕಾರ್ಯ ನಿಲ್ಲಿಸಿದ್ದು, ಅದರಲ್ಲಿನ ನೀರು ಕಲುಷಿತಗೊಂಡಿದೆ. ಕೆಲವು ಕಲ್ಲು ಬೆಂಚುಗಳಲ್ಲಿ ಕುಳಿತು ಕೊಳ್ಳಲು ಜನರಿಗೆ ಸಾಧ್ಯವಿಲ್ಲ. ಸಣ್ಣ ಗ್ಯಾಲರಿಗಳೂ ಕುಳಿತುಕೊಳ್ಳಲು ಯೋಗ್ಯವಿಲ್ಲ. ಮಳೆಗಾಲದಲ್ಲಿ ಹಿಡಿದ ಪಾಚಿ ಹಾಗೇ ಒಣಗಿ ಹೋಗಿದ್ದು, ಬಣ್ಣ ಬಳಿದು ಕುಳಿತುಕೊಳ್ಳಲು ಯೋಗ್ಯವಾಗುವಂತೆ ಮಾಡಬೇಕಿದೆ. ಪಾರ್ಕ್‌ನ ಆವರಣದ ಗೋಡೆ ಬದಿಯಲ್ಲಿ ಪೊದೆಗಳ ರೀತಿಯಲ್ಲಿ ಗಿಡಗಳು ಬೆಳೆದಿದ್ದು, ತರಗೆಲೆಗಳ ನಡುವೆ ನೀರು, ತುಂಪು ಪಾನೀಯಗಳನ್ನು ಕುಡಿದು ಎಸೆದ ಬಾಟಲಿಗಳು ಕೂಡಾ ಬಿದ್ದಿವೆ. ಕೆಲವು ಕಡೆಗಳಲ್ಲಿ ಹುತ್ತಗಳೂ ಬೆಳೆದಿವೆ.

ಜಿಂಕೆವನ ಪಾರ್ಕ್‌ ಪ್ರದೇಶ 1.75 ಎಕರೆ ವಿಸ್ತೀರ್ಣ ಹೊಂದಿದ್ದು, ಮೊದಲೇ ಸ್ಥಳದಲ್ಲಿದ್ದ ದೊಡ್ಡ ಮರಗಳನ್ನು ಹಾಗೇ ಉಳಿಸಿಕೊಂಡು, ಅವುಗಳ ನಡುವೆ ಹೂವಿನ ಗಿಡಗಳನ್ನು ಬೆಳೆಸಿ, ಕಾಲು ಹಾದಿ, ಕುಳಿತುಕೊಳ್ಳಲು ಬೆಂಚು, ಗ್ಯಾಲರಿ ಇತ್ಯಾದಿಗಳನ್ನು ಅಳವಡಿಸಲಾಗಿತ್ತು.

ಭೇಟಿ ನೀಡುವವರ ಸಂಖ್ಯೆ ಕಡಿಮೆ
ಜಿಂಕೆವನಕ್ಕೆ ಪ್ರವೇಶ ಶುಲ್ಕ ಇರುವುದರಿಂದ ಕದ್ರಿಯ ಮುಖ್ಯ ಪಾರ್ಕ್‌ಗೆ ಹೋಲಿಸಿದರೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಿದೆ. ಫೋಟೋ ಶೂಟ್‌- ವೀಡಿಯೋ ಶೂಟಿಂಗ್‌ಗಳಿಗೆ ದುಬಾರಿ ಶುಲ್ಕವೂ ಇದೆ. ಈ ಕಾರಣಕ್ಕಾಗಿ ಬಹುತೇಕ ಮಂದಿ ಸ್ಮಾರ್ಟ್‌ ಸಿಟಿಯಿಂದ ಅಭಿವೃದ್ಧಿ ಪಡಿಸಲಾದ ರಸ್ತೆಯ ಇಕ್ಕೆಲಗಳಲ್ಲಿಯೇ ಫೋಟೋ ಶೂಟ್‌ಗಳನ್ನು ಮಾಡುತ್ತಾರೆ.

ಕೆಲಸ ನಿಲ್ಲಿಸಿರುವ ಸಂಗೀತ ಕಾರಂಜಿ
2.30 ಕೋ.ರೂ. ವೆಚ್ಚದಲ್ಲಿ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಸಂಗೀತ ಕಾರಂಜಿ ತನ್ನ ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿದೆ. ಸಂಗೀತ ಕಾರಂಜಿಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದು, ಕಾರಂಜಿಗಾಗಿ ಅಳವಡಿಸಿದ ಉಪಕರಣ ಮಳೆ ಬಿಸಿಲಿಗೆ ತುಕ್ಕು ಹಿಡಿಯುತ್ತಿದೆ. ಇವುಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ವ್ಯರ್ಥವಾದಂತಾಗಿದೆ.

ರೇಡಿಯೋ ಸ್ಟೇಶನ್‌ ಖಾಲಿಖಾಲಿ
ಪಾರ್ಕ್‌ನ ಒಳಗೆ ರೇಡಿಯೋ ಸ್ಟೇಷನ್‌ ಒಂದಿದೆ. ಆದರೆ ಅದರೊಳಗೆ ರೇಡಿಯೋ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳು ಇಲ್ಲ. ಯಾರೋ ಅದನ್ನು ಕೋಣೆಯಾಗಿ ಉಪಯೋಗಿಸುತ್ತಿದ್ದು, ಆಹಾರ ಸೇವನೆ ಮಾಡಿರುವುದು, ಬಾಟಲುಗಳನ್ನು ಇಟ್ಟಿರುವುದು ಕಂಡು ಬರುತ್ತದೆ. ಹೊರಗಡೆಯಿಂದ ರೇಡಿಯೋ ಸ್ಟೇಶನ್‌ ಎಂದು ಬರೆಯಲಾಗಿದ್ದು, ಇದನ್ನು ಅಭಿವೃದ್ಧಿ ಪಡಿಸಿ, ರೇಡಿಯೋ ಪ್ರಸಾರವನ್ನು ಮಾಡಬೇಕು ಎನ್ನುವ ಆಗ್ರಹ ಪಾರ್ಕ್‌ ಬಳಕೆದಾರರದ್ದಾಗಿದೆ.

ಪಾಕ್‌ನಲ್ಲಿ ಗಿಡಮರಗಳಿದ್ದು, ತಂಪಾದ ವಾತಾವರಣವೂ ಇದೆ. ಆದರೆ ಸುತ್ತಲಿನ ಪ್ರದೇಶವನ್ನು ನಿರ್ವಹಣೆಯಾಗುತ್ತಿಲ್ಲ. ಗ್ಯಾಲರಿಗಳು ಕುಳಿತು ಕೊಳ್ಳಲು ಯೋಗ್ಯವಾಗಿಲ್ಲ. ಕನಿಷ್ಠ 2 ವರ್ಷಕ್ಕೊಮ್ಮೆಯಾದರೂ, ಸುಣ್ಣ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಬೇಕು.
– ಕಾರ್ತಿಕ್‌, ಪಾರ್ಕ್‌ಬಳಕೆದಾರರು

-ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.