Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

ಪೈಪ್‌ಲೈನ್‌ನ ಮುಖ್ಯ ಕೊಳವೆ ಅಳವಡಿಕೆ ಕಾರ್ಯ ವಿಳಂಬ; ಆಮೆಗತಿಯಲ್ಲಿ ಅಭಿವೃದ್ಧಿ ; ಟ್ರಾಫಿಕ್‌ ಜಾಮ್‌

Team Udayavani, Nov 15, 2024, 1:12 PM IST

4(1

ಮಹಾನಗರ: ಮಂಗಳೂರು ನಗರಕ್ಕೆ ಪ್ರವೇಶ ಪಡೆಯುವ ಪಂಪ್‌ವೆಲ್‌ - ಪಡೀಲ್‌ ಮುಖ್ಯ ರಸ್ತೆ ಕಾಂಕ್ರೀಟ್‌ ಕಾಮಗಾರಿ ಸುಮಾರು ಮೂರು ವರ್ಷಗಳ ಹಿಂದೆ ಆರಂಭ ಗೊಂಡಿದ್ದು, ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ.

ಅರೆ ಬರೆ ಕಾಮಗಾರಿಯ ಪರಿಣಾಮ ಈ ರಸ್ತೆಯಲ್ಲಿ ವಾಹನ ಸವಾರರಿಗೆ ನಿತ್ಯ ಟ್ರಾಫಿಕ್‌ ಜಾಮ್‌ ಬಿಸಿ ತಪ್ಪುತ್ತಿಲ್ಲ. ಈಗಾಗಲೇ ಪೂರ್ಣಗೊಳ್ಳಬೇಕಿದ್ದ ಈ ರಸ್ತೆ ಕಾಮಗಾರಿ ಆರಂಭದಿಂದಲೇ ಆಮೆಗತಿಯಲ್ಲಿ ನಡೆದಿತ್ತು. ನಾಗುರಿ ಬಳಿ ಪೈಪ್‌ಲೈನ್‌ ಅಳವಡಿಕೆ ಬಾಕಿ ಇರುವ ಕಾರಣ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕು.

ಇದೇ ರಸ್ತೆಯ ನಾಗುರಿ ಸಮೀಪ ಪೈಪ್‌ಲೈನ್‌ ಅಳವಡಿಕೆ ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಳಿಸಲು ಹಿನ್ನಡೆಯಾಗಿದೆ. ಸುಮಾರು 170 ಮೀ. ನಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ನ ಮುಖ್ಯ ಕೊಳವೆ ಅಳವಡಿಕೆ ಕಾರ್ಯ ಇರುವ ಕಾರಣದಿಂದಾಗಿ ಒಂದು ಭಾಗದ ರಸ್ತೆ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. ಇದು ಬೆಳಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ನಿತ್ಯ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಎರಡೂ ಬದಿಯಲ್ಲಿ ತೆರಳಬೇಕಾದ ವಾಹನಗಳು ಒಂದೇ ಕಡೆ ಸಂಚರಿಸುವ ಕಾರಣ ಹಾಗೂ ಇದೇ ಪ್ರದೇಶದಲ್ಲಿ ಬಸ್‌ ತಂಗುದಾಣ ಇರುವ ಕಾರಣ ಸಮಸ್ಯೆಯಾಗಿದೆ.

ಶಿಥಿಲಗೊಂಡಿದೆ ಪೈಪ್‌ಲೈನ್‌
ನಗರದಲ್ಲಿ ಸುಮಾರು 50 ವರ್ಷ ಹಳೆಯ ನೀರಿನ ಪೈಪ್‌ಲೈನ್‌ ಇದ್ದು, ಇದರಿಂದ ಹಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ತುಂಬೆಯಿಂದ ಬೆಂದೂರು ಹಾಗೂ ಪಣಂಬೂರಿಗೆ ತೆರಳುವ ಮುಖ್ಯ ಕೊಳವೆಯು ನಾಗುರಿ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿದೆ. ಇದರಿಂದ ನೀರು ಪೋಲಾಗುತ್ತಿದೆ. ಒಂದೊಮ್ಮೆ ಕಾಂಕ್ರೀಟ್‌ ಕಾಮಗಾರಿ ನಡೆದಲ್ಲಿ ಮತ್ತೆ ಕಾಂಕ್ರೀಟ್‌ ಅಗೆಯುವ ಪ್ರಸಂಗ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪೈಪ್‌ಲೈನ್‌ ದುರಸ್ತಿಗೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೈಪ್‌ ಅಳವಡಿಕೆ ಆರಂಭ
ನಾಗುರಿ ಭಾಗದಲ್ಲಿ ಪೈಪ್‌ಲೈನ್‌ ಅಳವಡಿಕೆ ಬಾಕಿ ಉಳಿದಿರುವ ಕಾರಣದಿಂದಾಗಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದೀಗ ಪಾಲಿಕೆ ಪೈಪ್‌ ಅಳವಡಿಕೆಗೆ ಮುಂದಾಗಿದ್ದು, ಗುತ್ತಿಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಈಗಾಗಲೇ ಕೊಳವೆಗಳನ್ನು ತರಿಸಿಕೊಳ್ಳಲಾಗಿದೆ.

ಪಂಪ್‌ವೆಲ್‌ ಸಮೀಪದಲ್ಲೂ ಹೊಂಡ ಗುಂಡಿ
ಪಡೀಲ್‌ ಪಂಪ್‌ವೆಲ್‌ ರಸ್ತೆಯ ಪಂಪವೆಲ್‌  ಫ್ಲೈ ಓವರ್‌ ಸಮೀಪದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಆ ಪ್ರದೇಶದಲ್ಲಿ ಕಳೆದ ಹಲವು ಸಮಯದಿಂದ ಹೊಂಡಗಳು ನಿರ್ಮಾಣವಾಗಿದ್ದರೂ ಪಾಲಿಕೆಯಾಗಲಿ, ಸ್ಮಾರ್ಟ್‌ ಸಿಟಿ ಅಧಿಕಾರಿಗಳಾಗಿ ದುರಸ್ತಿಗೊಳಿಸುವ ಗೋಜಿಗೆ ಹೋಗದಿರುವ ಕಾರಣ ಸವಾರರಿಗೆ ಸಮಸ್ಯೆಯಾಗಿದೆ.

ಮುಂದಿನ ಕೆಲವು ತಿಂಗಳು ಸಮಸ್ಯೆ
ಪಾಲಿಕೆಯ ಮೂಲಕ ಪೈಪ್‌ ಲೈನ್‌ ಅಳವಡಿಕೆಗೆ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಿದೆ. ಬಳಿಕ ಪೈಪ್‌ ಅಳವಡಿಸಿದ ಜಾಗವನ್ನು ಹಿಂದಿನ ಹಂತಕ್ಕೆ ತರಲು ಕೆಲವು ದಿನಗಳು ಬೇಕಾಗುತ್ತಿದೆ. ಅನಂತರ ಕಾಂಕ್ರೀಟ್‌ ಕಾಮಗಾರಿ ನಡೆಸಿ ಕ್ಯೂರಿಂಗ್‌ಗೆ ಮತ್ತಷ್ಟು ದಿನಗಳು ಅಗತ್ಯವಿರುವ ಕಾರಣದಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಲೇ ಬೇಕು. ಹಳೆ ಕೊಳವೆಯನ್ನು ತೆರವುಗೊಳಿಸಿ ಹೊಸ ಕೊಳವೆ ಅಳವಡಿಸುವ ಸಂದರ್ಭ ನಗರಕ್ಕೆ ಕೆಲವು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎನ್ನಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಸುಮಾರು 44 ಕೋ. ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 40 ಕೋ. ರೂ.ನ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ಕಾಂಕ್ರೀಟ್‌ ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ಡಿವೈಡರ್‌, ಚರಂಡಿ, ತಡೆಗೋಡೆ ನಿರ್ಮಿಸಲಾಗಿದೆ. ಫುಟ್‌ಪಾತ್‌ ಹಾಗೂ ಇತರ ಅನೇಕ ಕಾಮಗಾರಿಗಳು ಬಾಕಿ ಉಳಿದಿದ್ದು, ಶೀಘ್ರ ಪೂರ್ಣಗೊಳ್ಳುವ ವಿಶ್ವಾಸವನ್ನು ಸ್ಥಳೀಯ ರಿಕ್ಷಾ ಚಾಲಕರು ವ್ಯಕ್ತಪಡಿಸಿದ್ದಾರೆ.

ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಮುಂದೆ ಆಗಿದ್ದೇ ಬೇರೆ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ

ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ

ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು

ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

Kite-Festival

Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ

Suside-Boy

Mangaluru: ಕಾರು ಚರಂಡಿಗೆ ಬಿದ್ದು ಮಹಿಳೆ ಸಾವು

Mangaluru: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು… ಮಹಿಳೆ ಪಾರು

Mangaluru: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು… ಮಹಿಳೆ ಪಾರು

ಆಳ್ವಾಸ್‌ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ

ಆಳ್ವಾಸ್‌ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಮುಂದೆ ಆಗಿದ್ದೇ ಬೇರೆ

Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!

ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ

ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.