Mangaluru: ಸಾವಯವ ಕೃಷಿಕ ಗ್ರಾಹಕ ಬಳಗದಿಂದ ನ. 1ರಂದು ನಗರದಲ್ಲಿ ಕಾರ್ಯಾಗಾರ
'ಎಲೆ ಅರಿವು' ಇದ್ದರೆ ಹಿತ್ತಲ ಗಿಡವೇ ಆಹಾರ!
Team Udayavani, Oct 15, 2024, 3:28 PM IST
ಮಹಾನಗರ: ಅನೇಕ ಕಾಯಿಲೆಗಳಿಗೆ ಹಿತ್ತಿಲಲ್ಲಿರುವ ಗಿಡಮೂಲಿಕೆಗಳೇ ರಾಮಬಾಣ. ಔಷಧ ಸೇವಿಸುವ ಬದಲು ತಿನ್ನುವ ಆಹಾರವೇ ಔಷಧೀಯ ಗುಣಗಳಿಂದ ಕೂಡಿರಬೇಕು. ಆ ಮೂಲಕ ರೋಗ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಸಾವಯವ ಕೃಷಿಕ ಗ್ರಾಹಕ ಬಳಗ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಅದುವೇ ‘ಎಲೆ ಅರಿವು’.
ಮನೆ ಪರಿಸರದಲ್ಲೇ ಇರುವ, ವಿವಿಧ ರೀತಿಯಲ್ಲಿ ಆಹಾರವಾಗಿ ಬಳಸಬಹುದಾದ ಎಲೆಗಳು, ಕಾಟು ಸಸಿಗಳು, ಹುಲ್ಲು ಸೇರಿದಂತೆ ಹಲವು ಗಿಡಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಿದು. ಮಧುಮೇಹ, ಶೀತ ಜ್ವರದ ಸಂದರ್ಭದಲ್ಲಿ ಮಾತ್ರೆ ನುಂಗುವ ಬದಲು ಅಮೃತ ಬಳ್ಳಿ, ನೆಲನೆಲ್ಲಿ ಯನ್ನು ಬಳಸಬಹುದು. ಎಲೆ ಅರಿವು ಕಾರ್ಯಕ್ರಮದಲ್ಲಿ ಇಂಥ ಹಿತ್ತಲ ಗಿಡಗಳನ್ನು ಪರಿಚಯಿಸಲಾಗುತ್ತದೆ.
ನ. 10ರಂದು ಕಾರ್ಯಕ್ರಮ
ಮಂಗಳೂರಿನ ನಂತೂರು ಶ್ರೀಭಾರತೀ ಸಭಾಭವನದಲ್ಲಿ ನವೆಂಬರ್ 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ.
ವೇದಮಾಯು ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ| ಕೇಶವ್ ರಾಜ್, ಪಿಲಿಕುಳದ ಡಾ| ಉದಯ್ ಕುಮಾರ್ ಶೆಟ್ಟಿ, ಡಾ| ಮನೋಹರ್ ಉಪಾಧ್ಯಾಯ ಹಾಗೂ ಪಾರಂಪರಿಕ ಜ್ಞಾನ ಹೊಂದಿರುವ ಅಜ್ಜಿಯೊಬ್ಬರು ಸೇರಿ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಇಲ್ಲಿ ತಜ್ಞರು ಮಾಹಿತಿ ನೀಡುವ ಜತೆಗೆ ಸಂವಾದಕ್ಕೂ ಅವಕಾಶವಿದೆ. ಅಂತಿಮವಾಗಿ ವೈದ್ಯರು ಅವಲೋಕನ ಮಾಡಲಿದ್ದಾರೆ.
30 ಮಂದಿ ನೋಂದಣಿ
ನವೆಂಬರ್ ತಿಂಗಳಲ್ಲಿ ನಡೆಯುವ ಉಚಿತ ಕಾರ್ಯಕ್ರಮಕ್ಕೆ ಈಗಾಗಲೇ 30 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳೂರು ನಗರ, ಬಂಟ್ವಾಳ, ಕಾಸರಗೋಡು, ಪುತ್ತೂರು ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂದಾಗಿದ್ದಾರೆ. 50ಕ್ಕಿಂತಲೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ಭಾಗಗಳಲ್ಲೂ ಇಂತಹ ಕಾರ್ಯಕ್ರಮಕ್ಕೆ ವೇದಿಕೆ ತಯಾರಿಸಲಾಗುವುದು.
-ರತ್ನಾಕರ್ ಕುಳಾಯಿ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ
ಅ. 16ರಂದು ಖಾದ್ಯ ಕಾರ್ಯಾಗಾರ
ಮಂಗಳೂರಿನ ಶಕ್ತಿನಗರದಲ್ಲಿ ಸ್ವೋದ್ಯೋಗ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಲು ಕೆಸುವಿನ ಗೆಡ್ಡಯಿಂದ ಖಾದ್ಯ ತಯಾರಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೋನ್ಸನ್ ನೆಲ್ಯಾಡಿ ಮತ್ತು ತಂಡ ಈ ಕಾರ್ಯಕ್ರಮ ನಡೆಸಿಕೊಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು
Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್
Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವದಲ್ಲಿ ಭಾಗಿ
Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್ ಫ್ರ್ಯಾಂಕ್
MUST WATCH
ಹೊಸ ಸೇರ್ಪಡೆ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.