Mangaluru: ತೋಟಬೆಂಗ್ರೆಯಲ್ಲಿ ಸರಕಾರಿ ಜಾಗದಿಂದ ಅಕ್ರಮ ಮರಳು ಸಾಗಾಟ
Team Udayavani, Oct 11, 2024, 7:44 AM IST
ಮಂಗಳೂರು: ನಗರದ ಹೊರವಲಯದ ಬೆಂಗ್ರೆಯ ಬಳಿ ಅಕ್ರಮವಾಗಿ ಮರಳನ್ನು ತೆಗೆದು ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ತೋಟಬೆಂಗ್ರೆ ಹಿಂದೂ ರುದ್ರಭೂಮಿಯ ಬಳಿ ಸುಮಾರು 6 ಎಕ್ರೆ ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರವಾಗಿದೆ. ಜೆಟ್ಟಿ ನಿರ್ಮಾಣ ಉದ್ದೇಶಕ್ಕೆ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ.
ಆದರೆ ಮೂರ್‍ನಾಲ್ಕು ತಿಂಗಳ ಹಿಂದಿನಿಂದಲೇ ಇಲ್ಲಿಂದ ಯಾರೋ ಕೆಲವರು ಮರಳು ಒಯ್ಯುತ್ತಿದ್ದಾರೆ. ರಾತ್ರಿ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಮರಳು ಕೊಂಡೊಯ್ಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರೀತಿ ಮರಳು ತೆಗೆದ ಕಾರಣ ಸಮತಟ್ಟಾಗಿರುವ ಜಾಗದಲ್ಲಿ ಐದಾರು ಅಡಿ ಆಳದ ಕುಳಿಗಳು ನಿರ್ಮಾಣಗೊಂಡಿದ್ದು ಅಪಾಯಕಾರಿಯಾಗಿದೆ ಎನ್ನುವುದು ಸ್ಥಳೀಯರ ದೂರು. ಈ ಕುರಿತು ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಆರ್‌ಝಡ್ ಇಲಾಖೆಗೆ ಮೌಖೀಕ ದೂರು ನೀಡಿದ್ದಾರೆ.
ಮೌಖೀಕವಾಗಿ ದೂರು ಕೊಟ್ಟು ತಕ್ಷಣ ಬರಬೇಕೆಂದರೆ ಕಷ್ಟ, ನಾವು ಬೇರೆ ಕೆಲಸದಲ್ಲಿರುತ್ತೇವೆ, ಆದರೆ ಲಿಖೀತವಾಗಿ ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದು ಗಣಿ ಇಲಾಖೆ ಹಿರಿಯ ಜಿಯೊಲಜಿಸ್ಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.