ಮಂಗಳೂರು ವಿಮಾನ ನಿಲ್ದಾಣ: ಜೂ. 1ರಿಂದ ಸಂಚಾರ ಸಹಜಸ್ಥಿತಿಗೆ
Team Udayavani, May 22, 2023, 7:45 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಮರು ರಚನೆಗೆ (ರಿಕಾಪೆìಟಿಂಗ್) ಸಂಬಂಧಿಸಿದ ಕಾಮಗಾರಿ ಮೇ 31ಕ್ಕೆ ಪೂರ್ಣವಾಗಲಿದೆ. ಜೂ. 1ರಿಂದ ದಿನದ 24 ಗಂಟೆಯೂ ರನ್‌ವೇ ಲಭ್ಯವಾಗಲಿದೆ.
ಕಾಂಕ್ರೀಟ್ ರನ್‌ವೇ ಡಾಮ ರೀಕರಣ/ಬ್ಲ್ಯಾಕ್‌ಟಾಪ್ ಕಾಮ ಗಾರಿ ಮತ್ತು ದೀಪಗಳ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ 4 ತಿಂಗಳು ಹಗಲು ವಿಮಾನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ರವಿವಾರ ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ರನ್‌ವೇ ಬಂದ್ ಇದೆ. ಸಂಜೆ 6ರಿಂದ ಬೆಳಗ್ಗೆ 9.30ರ ತನಕ ಮಾತ್ರ ಮಂಗಳೂರಿನಿಂದ ವಿಮಾನಗಳ ಓಡಾಟ ನಡೆಯುತ್ತಿದೆ.
ಪ್ರಸ್ತುತ 2450 ಮೀ. ಉದ್ದ ಮತ್ತು 45 ಮೀ. ಅಗಲದ ಕಾಂಕ್ರೀಟ್ ರನ್‌ವೇ ಇದೆ. ಈ ಕಾಂಕ್ರೀಟ್ ರನ್‌ವೇ ಮೇಲೆ ಡಾಂಬರು ಹಾಕುವುದರಿಂದ ಟೇಕಾಫ್ ಮತ್ತು ಲ್ಯಾಂಡಿಂಗ್ ಸಂದರ್ಭ ವಿಮಾನಗಳ ಚಕ್ರಗಳಿಗೆ ನೆಲದ ಮೇಲೆ ಹೆಚ್ಚು ಹಿಡಿತ ದೊರೆಯಲಿದೆ. ಜತೆಗೆ ರನ್‌ವೇಯಲ್ಲಿ ಬೀಳುವ ನೀರು ಪೂರ್ಣ ಪ್ರಮಾಣದಲ್ಲಿ ಹೊರಗೆ ಹೋಗು ವಂತೆ ಡಾಮರೀಕರಣ/ಬ್ಲ್ಯಾಕ್ ಟಾಪ್ ಪೂರ್ಣಗೊಳಿಸಲಾಗುತ್ತಿದೆ. ರಿ ಕಾರ್ಪೇಂಟಿಂಗ್ ಕೆಲಸವು ರನ್‌ವೇ ಸೆಂಟರ್‌ಲೈನ್ ಲೈಟ್‌ಗಳ ಅಳವಡಿಕೆಯನ್ನೂ ಒಳಗೊಂಡಿದೆ. ಇದು ರಾತ್ರಿಯಲ್ಲಿ ವಿಮಾನ ಕಾರ್ಯಾಚರಣೆ ಮತ್ತು ಕಡಿಮೆ ಗೋಚರತೆ ಸಂದರ್ಭದಲ್ಲಿ ಸಹಾಯ ಮಾಡುತ್ತದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.