Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ; 43.32 ಲಕ್ಷ ರೂ. ವಂಚನೆ
Team Udayavani, Oct 28, 2024, 9:20 PM IST
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ 43.32 ಲ.ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರರನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೋರ್ವ ಆತನನ್ನು ಮಂಜು ಪಚೀಶಿಯಾ ಎಂಬುದಾಗಿ ಪರಿಚಯಿಸಿಕೊಂಡು ತಾನು ಲೈಫ್ ಸೆಕ್ಯುರಿಟಿ ಲಿಮಿಟೆಡ್‌ನ ಅಸಿಸ್ಟೆಂಟ್ ಆಗಿರುವುದಾಗಿ ತಿಳಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಗಳಿಸಬಹುದು ಎಂದು ನಂಬಿಸಿದ ಅನಂತರ ಲಿಂಕ್‌ವೊಂದನ್ನು ಕಳುಹಿಸಿ ಅದರಲ್ಲಿ ಸೇರ್ಪಡೆಗೊಳಿಸಿದ್ದಾರೆ.
ಸೆ.26ರಿಂದ ಅ.23ರವರೆಗೆ ಹಂತ ಹಂತವಾಗಿ 43,32,502 ರೂ.ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಬಳಿಕ ದೂರುದಾರರು ಹೂಡಿದ ಹಣ ಹಿಂಪಡೆಯಲು ಮುಂದಾದಾಗ ಅಪರಿಚಿತ ವ್ಯಕ್ತಿಯು ಶೇ.25ರಷ್ಟು ಕಮಿಷನ್ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಆಗ ದೂರುದಾರರಿಗೆ ಮೋಸ ಹೋಗಿರುವುದು ತಿಳಿದುಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.