Mangaluru; ಉದ್ಯೋಗ ನೆಪ: ಲಕ್ಷ ರೂ. ವಂಚನೆ
Team Udayavani, Jan 10, 2024, 12:07 AM IST
ಮಂಗಳೂರು: ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ಹೇಳಿ 1,06,020 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಮೊಬೈಲ್‌ಗೆ ಪಾರ್ಟ್ ಟೈಮ್ ಜಾಬ್ ಬಗ್ಗೆ ಜಾಹೀರಾತು ಬಂದಿತ್ತು. ಅದರಲ್ಲಿದ್ದ ವಾಟ್ಸಪ್ ಲಿಂಕ್‌ಗೆ ಕ್ಲಿಕ್ ಮಾಡಿ ಉದ್ಯೋಗದ ಮಾಹಿತಿ ಕೇಳಿದ್ದರು. ಆರೋಪಿಗಳು ಅಮೆಜಾನ್‌ನಲ್ಲಿ ಪಾರ್ಟ್ ಟೈಮ್ ಕೆಲಸ ನೀಡಿ ಪ್ರತಿ ದಿನ 3ರಿಂದ 8 ಸಾವಿರ ರೂ. ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಿ ಐಡಿ ರಚಿಸಲು ಹೇಳಿದ್ದರು. ಆದರಂತೆ ದೂರುದಾರರು ಲಿಂಕ್‌ನಲ್ಲಿ ತಮ್ಮ ವಿವರಗಳನ್ನು ನಮೂದಿಸಿ ಅಮೆಜಾನ್ ಐಡಿ ರಚಿಸಿದ್ದರು. ಆರೋಪಿಗಳು ಐಡಿಗೆ ಮೊದಲು 80 ರೂ. ಜಮೆ ಮಾಡಿದ್ದರು. ಅನಂತರ ಮುಂದಿನ ಹಂತಕ್ಕೆ ತಲುಪಲು 120 ರೂ. ರೀಚಾರ್ಜ್ ಮಾಡಲು ಹೇಳಿದ್ದಾರೆ.
ಅನಂತರ ಜ.4ರಿಂದ 6ರವರೆಗೆ 500 ರೂ., 1100 ರೂ., 3000 ರೂ ಹೀಗೆ ಒಟ್ಟು 1,06,020 ವರ್ಗಾವಣೆ ಮಾಡಿ ವಂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.