![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:45 PM IST
ಮಹಾನಗರ: ದಶಕದ ಹಿಂದೆ ಇದ್ದ ಪಂಪ್‌ವೆಲ್‌ನ ಗತ ವೈಭವ ಮತ್ತೆ ಮರುಕಳಿಸಲಿದೆ. ಕಲಶ ಮರು ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಎರಡು ತಿಂಗಳ ಒಳಗಾಗಿ ಈ ಹಿಂದೆ ಇದ್ದ ರೀತಿಯೇ ಸುಂದರ ಕಲಶ ನಿರ್ಮಾಣ ಆಗಲಿದೆ.
ಜೈನ್ ಸೊಸೈಟಿ ಮತ್ತು ಮಂಗಳೂರು ಸ್ಮಾರ್ಟ್‌ಸಿಟಿ ಲಿ.ನಿಂದ ಈ ಕಾಮಗಾರಿ ನಡೆಯಲಿದ್ದು, ಸದ್ಯ ಆರಂಭಿಕ ಹಂತದ ಕೆಲಸ ಚಾಲನೆ ಸಿಕ್ಕಿದೆ. ಪಂಪ್‌ವೆಲ್‌ನಿಂದ ಗರೋಡಿ ಕಡೆಗೆ ತೆರಳುವ ರಸ್ತೆಯಲ್ಲಿ ಇರುವ ಟ್ರಾಫಿಕ್ ಐಲ್ಯಾಂಡ್‌ನಲ್ಲೇ ಕಲಶ ನಿರ್ಮಾಣಗೊಳ್ಳಲಿದೆ. ಈ ಐಲ್ಯಾಂಡ್ ನಲ್ಲಿದ್ದ ಬೃಹತ್ ಪೈಪ್‌ಗ್ಳನ್ನು ಈಗಾಗಲೇ ತೆರವು ಮಾಡಲಾಗಿದ್ದು, ಕೆಲವು ದಿನಗಳಲ್ಲೇ ಕಾಮಗಾರಿ ಆರಂಭಿಸಿ, ಶೀಘ್ರದಲ್ಲೇ ಪೂರ್ಣ ಗೊಳಿಸಲು ಯೋಜನೆ ರೂಪಿ ಸಲಾಗಿದೆ. ಆರಂಭಿಕವಾಗಿ ಸ್ಮಾರ್ಟ್ ಸಿಟಿಯಿಂದ ಕಟ್ಟೆ ನಿರ್ಮಾಣ ಕೆಲಸ ನಡೆಯುತ್ತದೆ. ಬಳಿಕ ಜೈನ್ ಸೊಸೈಟಿಯಿಂದ ಕಲಶ ಸ್ಥಾಪನೆಯ ಕೆಲಸ ನಡೆಯಲಿದೆ.
ಈ ಹಿಂದೆ ಇದ್ದಂತೆ ಓವಲ್ ಆಕಾರ ದಲ್ಲಿಯೇ ಕಲಶ ನಿರ್ಮಾಣ ಆಗುತ್ತದೆ. ಕಲಶ ಸ್ಥಾಪನೆ ಮಾಡಿ ಅಲ್ಲಿನ ಸುತ್ತಲೂ ಹಸುರಿಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಅಲ್ಲಿ ‘ಮಹಾವೀರ ವೃತ್ತ’ ಎಂಬ ನಾಮ ಫಲಕವೂ ತಲೆಎತ್ತಲಿದೆ. ವೃತ್ತಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನಷ್ಟು ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದ್ದು, ನೀಲ ನಕ್ಷೆ ಸಿದ್ಧಗೊಳ್ಳುತ್ತಿದೆ.
ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರಾದ್ಯಂತ 2001ರಿಂದ 2002ರ ವರೆಗೆ ಆಚರಿಸಲು ಕೇಂದ್ರ ಸರಕಾರ ಈ ಹಿಂದೆ ನಿರ್ಧರಿಸಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯು ‘ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ ಹಾಗೂ 20 ಟನ್ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಯಿತು.
9 ವರ್ಷದ ಬಳಿಕ ಮರುಸ್ಥಾಪನೆ
ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ 2003ರ ಜನವರಿ ತಿಂಗಳಿನಲ್ಲಿ ಆರಂಭಗೊಂಡು 6 ತಿಂಗಳ ಬಳಿಕ ಉದ್ಘಾಟನೆ ನೆರವೇರಿತ್ತು. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವೇಳೆ 2016ರಲ್ಲಿ ಈ ಕಲಶವನ್ನು ತೆರವು ಗೊಳಿ ಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇಡಲಾಗಿದೆ. ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆ ವೇಳೆ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ಭರವಸೆ ನೀಡಿದ್ದರು. ಆದರೆ ಈಗ ಒಂಬತ್ತು ವರ್ಷದ ಬಳಿಕ ಸಾಕಾರಗೊಳ್ಳುತ್ತಿದೆ.
ಹಳೆ ಕಲಶವೇ ಮರುಸ್ಥಾಪನೆ!
ಮಂಗಳೂರಿನ ಪಂಪ್‌ವೆಲ್ ಬಳಿ ಈ ಹಿಂದೆ ಇದ್ದಂತಹ ಕಲಶವನ್ನು ತೆರವು ಮಾಡಿ, ಕಂಕನಾಡಿ ತಿರುವು ರಸ್ತೆ ಬಳಿ ಇಡಲಾಗಿದೆ. ಆ ಕಲಶದ ಕೆಲವು ಕಡೆಗಳಲ್ಲಿ ಹಾನಿ ಉಂಟಾಗಿದ್ದು, ಪೈಂಟ್ ಮಾಸಿದೆ. ಅದೇ ಕಲಶವನ್ನು ಸರಿಪಡಿಸಿ, ಪಂಪ್‌ವೆಲ್‌ನಲ್ಲಿ ಮರು ನಿರ್ಮಿಸಲಾಗುತ್ತದೆ.
ಆರಂಭಿಕ ಕೆಲಸ ಶೀಘ್ರ ಪೂರ್ಣ
ಪಂಪ್‌ವೆಲ್‌ನಲ್ಲಿ ಈ ಹಿಂದೆ ಇದ್ದ ರೀತಿಯೇ ಕಲಶ ಸ್ಥಾಪನೆ ಮಾಡುತ್ತೇವೆ. ಆರಂಭಿಕ ಹಂತದ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು.
– ಪುಷ್ಪರಾಜ್ ಜೈನ್, ಜೈನ್ ಸೊಸೈಟಿ ಅಧ್ಯಕ್ಷ
-ನವೀನ್ ಭಟ್ ಇಳಂತಿಲ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.