Mangaluru: ಅಂತಾರಾಷ್ಟ್ರೀಯ ಮಟ್ಟ ತಲುಪಿದ ಮಂಗಳೂರಿನ ಗಾಳಿಪಟ!
ಜ. 18, 19ರಂದು ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಆಕರ್ಷಣೆ; 10 ದೇಶಗಳು ಭಾಗಿ
Team Udayavani, Jan 16, 2025, 2:58 PM IST
ಮಹಾನಗರ: ಹಿಂದೆ ಮಂಗಳೂರಿನಲ್ಲಿ ಗಾಳಿಪಟ ಎಂದರೆ ಅದು ಮಕ್ಕಳ ಆಟ ಆಗಿತ್ತು. ಆದರೆ 2006ರ ಬಳಿಕ ಅದಕ್ಕೆ ಅಂತಾರಾಷ್ಟ್ರೀಯ ಸ್ವರೂಪ ದೊರಕಿದೆ. ಈ ಬಾರಿ ಜ. 18 ಮತ್ತು 19ರಂದು ಟೀಮ್ ಮಂಗಳೂರು ತಂಡವು ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ 8ನೇ ಅವತರಣಿಕೆಯಲ್ಲಿ 24 ದೇಶಗಳ ಗಾಳಿಪಟ ತಂಡಗಳು ಭಾಗವಹಿಲಿವೆ.
ಚಾರಣ ಹೋದಾಗ ಬೆಟ್ಟದ ಮೇಲೆ ಗಾಳಿಪಟ ಹಾರಿಸುತ್ತಿದ್ದ ಮಂಗಳೂರಿನ ಅಶೋಕ ನಗರದ ಸರ್ವೇಶ್ ರಾವ್ ಮತ್ತು ಗಿರಿಧರ್ ಕಾಮತ್, ಪ್ರಶಾಂತ್ ಉಪಾಧ್ಯಾಯ, ದಿನೇಶ್ ಹೊಳ್ಳ, ವಿ.ಕೆ. ಸನಿಲ್, ಸತೀಶ್ ರಾವ್, ನರೇಂದ್ರ, ಅರುಣ್.. ಹೀಗೆ ಸಮಾನ ಮನಸ್ಕರು ಸೇರಿ ಟೀಮ್ ಮಂಗಳೂರು ಎಂಬ ಹವ್ಯಾಸಿ ಗಾಳಿಪಟ ತಂಡ ರೂಪುಗೊಂಡಿದ್ದು ಗಾಳಿಪಟಕ್ಕೆ ಹೊಸ ರೂಪ ಸಿಗಲು ಕಾರಣವಾಯಿತು.
ಸಣ್ಣ ಸಣ್ಣ ಗಾಳಿಪಟ ಮಾಡುತ್ತಿದ್ದ ತಂಡವು ಗುಜರಾತ್‌ನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ ಅನಂತರ ದೊಡ್ಡ ಗಾತ್ರದ ಮತ್ತು ಹಾರಿಸುವ ತಂತ್ರಗಾರಿಕೆಯನ್ನೂ ಕಲಿತುಕೊಂಡಿತು. ಜತೆಗೆ ವಿದೇಶೀ ಗಾಳಿಪಟ ತಂಡಗಳ ಪರಿಚಯವಾಯಿತು.
2006ರ ಬಳಿಕ ಈ ತಂಡವು ನಿರಂತರವಾಗಿ ಫ್ರಾನ್ಸ್ (7 ಬಾರಿ) ಇಂಗ್ಲೆಂಡ್, ಕೆನಡಾ, ಇಟೆಲಿ, ದಕ್ಷಿಣ ಕೊರಿಯಾ, ಹಾಂಕಾಂಗ್, ಥಾಯ್‌ಲ್ಯಾಂಡ್, ಇಂಡೋನೇಷ್ಯ, ಶ್ರೀಲಂಕಾ, ದುಬಾಯಿ, ಕತಾರ್ ದೇಶಗಳ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿತು. ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಪುಷ್ಪಕ ವಿಮಾನ, ಭರತನಾಟ್ಯಮ್, ಕೋಳಿ ಕಟ್ಟ, ಗಣಪತಿ, ಭಾರತೀಯ ದಂಪತಿ, ಗರುಡ, ಭೂತದ ಕೋಲ ಇತ್ಯಾದಿ ಬೃಹತ್ ಗಾಳಿಪಟಗಳನ್ನು ಮಾಡಿ ಗಮನ ಸೆಳೆಯಿತು.
2006ರಿಂದ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ನಡೆಯುತ್ತಿದೆ.
ಭಾಗವಹಿಸುವ ಪ್ರಮುಖ ಅಂತಾರಾಷ್ಟ್ರೀಯ ತಂಡಗಳು
ಸ್ಲೊವೇನಿಯಾ, ಯುಕೆ, ಜರ್ಮನಿ, ಎಸ್ಟೋನಿಯಾ, ಇಟಲಿ, ಮಲೇಷ್ಯಾ, ಸಿಂಗಾಪುರ, ಸ್ವೀಡನ್, ಇಂಡೋನೇಷ್ಯಾ ಮತ್ತು ಗ್ರೀಸ್ ದೇಶಗಳ ತಂಡಗಳು ಭಾಗಿ. ದೇಶದ ಮಹಾರಾಷ್ಟ್ರ, ಕೇರಳ, ಒಡಿಶಾ, ರಾಜಕೋಟ್, ಮುಂಬಯಿ, ಬರೋಡಾ ಅಹಮದಾ ಬಾದ್ ತಂಡಗಳು ಭಾಗವಹಿಸಲಿವೆ.
ಭಾರತದಲ್ಲೇ ಅತೀ ದೊಡ್ಡ ಗಾಳಿಪಟ ನಿರ್ಮಾಣವಾಗಿತ್ತು
2005ರಲ್ಲಿ ಟೀಮ್ ಮಂಗಳೂರು ತಯಾರಿಸಿದ 36 ಅಡಿ ಎತ್ತರದ ಬೃಹತ್ ಕಥಕ್ಕಳಿ ಗಾಳಿಪಟ ಭಾರತದಲ್ಲೇ ಅತೀ ದೊಡ್ಡ ಗಾಳಿಪಟವೆಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಯಿತು.
ಮೊದಲ ಬಾರಿಗೆ ಕೊಡೆ ಬಟ್ಟೆ ಬದಲು ವಿದೇಶದಲ್ಲಿ ಮಾತ್ರ ಸಿಗುವ ರಿಪ್ ಸ್ಟಾಪ್ ನೈಲಾನನ್ನು ಇದರಲ್ಲಿ ಬಳಸಲಾಗಿತ್ತು. ಒಂದು ತಿಂಗಳ ಶ್ರಮದೊಂದಿಗೆ 18 ಸೂತ್ರ ಕಟ್ಟಿ ಹಾರಿಸಿದ ಗಾಳಿಪಟ ಇದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಹುಷಾರು, ಅಂಗಡಿ ಮುಚ್ಚಿದರೂ ಶುಲ್ಕ ಕಟ್ಟಬೇಕು!
Mangaluru: 500 ಮನೆಗಳಿಗೆ ತಲುಪಿದ ಸಿಎನ್‌ಜಿ ಅನಿಲ; ಶೀಘ್ರ ಇನ್ನಷ್ಟು ಕಡೆ ವಿಸ್ತರಣೆ
Bajpe: 7 ಅಣೆಕಟ್ಟೆಗೆ ಹಲಗೆ; ತುಂಬಿದ ನೀರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
MUST WATCH
ಹೊಸ ಸೇರ್ಪಡೆ
ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ
Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.