Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ


Team Udayavani, Jan 12, 2025, 3:38 PM IST

8(1

ಮಹಾನಗರ: ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಎರಡು ದಿನಗಳ ಮಂಗಳೂರು ಲಿಟ್‌ ಫೆಸ್ಟ್‌ 7ನೇ ಆವೃತ್ತಿ ಆರಂಭಗೊಂಡಿತು. ಹಿರಿಯ ಸಾಹಿತಿ ಡಾ| ಎಸ್‌.ಎಲ್‌. ಭೈರಪ್ಪ ಅವರು ಉದ್ಘಾಟಿಸಿದ ಕಾರ್ಯಕ್ರಮದ ಮೊದಲ ದಿನ ಸಮಕಾಲೀನ ಗಂಭೀರ ವಿಚಾರಗಳ ಜತೆಗೆ ಕನ್ನಡ ಸಾಹಿತ್ಯ, ತುಳು ಸಾಹಿತ್ಯದ ಆಳ ಅಗಲ, ಸಾಹಿತ್ಯ ವಿಮರ್ಶೆ, ಸಂವಾದ, ಪುಸ್ತಕ ಬಿಡುಗಡೆ, ಹೀಗೆ ಹಲವು ಕಾರ್ಯಕ್ರಮಗಳು ನಡೆದವು.

ತುಳು ಪ್ರಕಟನೆಗೆ ಪ್ರೋತ್ಸಾಹ ಬೇಕು: ಡಾ| ತುಕಾರಾಮ ಪೂಜಾರಿ ಅಭಿಮತ
ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅದರ ಸಮೃದ್ಧ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯಲು, ತುಳುವಿನಲ್ಲಿ ಪ್ರಕಟನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ತುಳು ವಿದ್ವಾಂಸ ಡಾ| ತುಕಾರಾಂ ಪೂಜಾರಿ ಹೇಳಿದರು.

ತುಳು ಸಾಹಿತ್ಯ: ಆಳ-ಅಗಲ-ಆವಿಷ್ಕಾರ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ತುಳುವಿನ ಮಹತ್ವ ತುಳುವರಾದ ನಮಗೇ ತಿಳಿ ದಿಲ್ಲ. ಆದರೆ ಬೇರೆ ರಾಷ್ಟ್ರದ ವಿದ್ವಾಂಸರು, ಜನಸಾಮಾನ್ಯರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ತುಳು ಭಾಷೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಾಹಿತ್ಯ ಭಂಡಾರ ಹೊಂದಿದೆ. ಆದರೂ ಬಹುತೇಕ ಸಾಹಿತ್ಯ ಮತ್ತು ವರದಿ ಕನ್ನಡ/ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಗೊಳ್ಳುತ್ತಿವೆ ಎಂದರು.

ತುಳು ಸಾಹಿತ್ಯಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ  ನೀಡುವ ಅಗತ್ಯವಿದೆ. ಯುವ ಪೀಳಿಗೆ ತಮ್ಮ ಭಾಷಾ ಪರಂಪರೆಯನ್ನು ಅಪ್ಪಿಕೊಳ್ಳಲು ಉತ್ತೇಜಿಸಬೇಕು. ತುಳು ಭಾಷೆಗೆ ನಿರಂತರ ಕೆಲಸ ಮಾಡುವ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು. ಸಾಹಿತಿ, ವಕೀಲ ಶಶಿರಾಜ್‌ ಕಾವೂರು ನಿರ್ವಹಿಸಿದರು.

ಸಿಟಿಯ ಗೌಜಿಯ ಮಧ್ಯೆ ಹಳ್ಳಿ ಮನಸು ಕಟ್ಟಿದ ಹಳ್ಳಿ ಗೋಷ್ಠಿ!
ಸ್ಮಾರ್ಟ್‌ಸಿಟಿಯ ಮಗ್ಗುಲಿನಲ್ಲಿ ಶನಿವಾರ ನಡೆದ ಗೋಷ್ಠಿಯೊಂದು ಹಳ್ಳಿಯ ಕಥಾನಕವನ್ನು ಸಿಟಿಯ ಜನರಿಗೆ ವಿವರವಾಗಿ ಅಚ್ಚೊತ್ತಿದ ಹಾಗೆ ಪ್ರಸ್ತುತಪಡಿಸಿತು. ಹಿಂದೊಮ್ಮೆ ಇದ್ದ ಹಳ್ಳಿ ಈಗ ಬದಲಾಗಿದ್ದು ಹೇಗೆ ಹಾಗೂ ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಹಾಗೂ ಅದಕ್ಕೊಂದು ಪರಿಪೂರ್ಣ ಉತ್ತರಕ್ಕೆ ‘ಹಳ್ಳಿಯನ್ನು ಕಟ್ಟುವ ಕಷ್ಟ ಸುಖ’ ಎಂಬ ಸಂವಾದ ವೇದಿಕೆ ಒದಗಿಸಿತು.

ಡಾ|ಪ್ರಕಾಶ್‌ ಭಟ್‌ ಮಾತನಾಡಿ, ಭಾರತದ ಗ್ರಾಮೀಣಾಭಿವೃದ್ದಿ ಪರಂಪರೆ ನೋಡಿದರೆ ನಾವು ತಪ್ಪು ಅನುಷ್ಠಾನ ಮಾಡಿ ತಪ್ಪು ಪಾಠ ಕಲಿತಿದ್ದೇವೆ. ಹಳ್ಳಿಗಳಲ್ಲಿ ಕುಡಿತ ಅಧಿಕವಾಗುತ್ತಿದೆ. ಎಲ್ಲವೂ ಮಿತಿ ಮೀರುವ ಧಾವಂತಕ್ಕೆ ಎದುರಾಗಿದೆ. ನಾನು 40 ವರ್ಷದ ಹಿಂದೆ ಹೋದಾಗ ಇದ್ದ ಹಳ್ಳಿಗಳು ಈಗ ಇಲ್ಲ ಎಂಬ ವಿಷಾಧವೂ ಇದೆ ಎಂದ ಅವರು ಹಳ್ಳಿಗಳನ್ನು ನಾವು ಮರೆಯಲೇಬಾರದು. ಒಂದು ವೇಳೆ ಮರೆತರೆ ಈಗಕ್ಕೆ ಸಮಸ್ಯೆ ಆಗದು-ಆದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೆ ದೊಡ್ಡ ದುರಂತವನ್ನೇ ಎದುರು ಹಾಕಿಕೊಂಡಂತೆ ಎಂಬುದು ಅವರ ವಾದ. ಯಾಕೆಂದರೆ ದೇಶದ 90 ಕೋಟಿ ಜನ ಹಳ್ಳಿಯಲ್ಲಿದ್ದಾರೆ. ಅವರು ಕ್ಷೇಮವಾಗಿದ್ದರೆ ಮಾತ್ರ ನಾವು ಕ್ಷೇಮವಾಗಿರುತ್ತೇವೆ ಎಂದರು.

ಶಿವಾನಂದ ಕಳವೆ ಅವರ ಪ್ರಕಾರ, ಹಳ್ಳಿಗಳಲ್ಲಿ ಸುಧಾರಣೆಗಿಂತಲೂ ಬದಲಾವಣೆಯತ್ತ ಹೊರಳುವ ಪರಿಸ್ಥಿತಿ ಬಂದಿದೆ. ಹಳ್ಳಿ ಈಗ ಹೋಮ್‌ಸ್ಟೇ ರೂಪದಲ್ಲಿ ಬದಲಾಗಿದೆ. ವೃದ್ದಾಶ್ರಮ ಆಗುತ್ತಿದೆ. ಹಳ್ಳಿಯ ಮನಸ್ಸು ಅರಿಯಲು ನಾವು ಅಪ್‌ಡೇಟ್‌ ಆಗಬೇಕಿದೆ. ಹಳ್ಳಿಗಳಲ್ಲಿ ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಾದ ನಮಗೆ ಹಳ್ಳಿಯನ್ನು ಓದುವ ಸವಾಲಿದೆ.

ಸಾಹಿತ್ಯ ವಿಮರ್ಶೆ ಹೇಗಿರಬೇಕು?
ವಿಮರ್ಶಕರ ಧೋರಣೆ ಸರಿಯೇ?


ಸಾಹಿತ್ಯದ ಆಳ ಅಗಲವನ್ನು ಓದುಗರ ಮುಂದಿಡುವ ವಿಮರ್ಶೆ ಹೇಗಿರಬೇಕು? ವಿಮರ್ಶಕರ ದೃಷ್ಟಿಕೋನ, ಧೋರಣೆ ಯಾವ ಥರ ಇರಬೇಕು: ಹೀಗೊಂದು ವಿಮರ್ಶೆಯ ವಿಮರ್ಶೆ ನಡೆದಿದ್ದು ಶನಿವಾರ ಮಂಗಳೂರು ಲಿಟ್‌ಫೆಸ್ಟ್‌ನ ಅಂಗಳದಲ್ಲಿ ನಡೆದ ಕನ್ನಡ ಸಾಹಿತ್ಯ ವಿಮರ್ಶೆ-ಒಂದು ಅಕಾಡೆಮಿಕ್‌ ಚರ್ಚೆ ಗೋಷ್ಠಿಯಲ್ಲಿ. ಡಾ| ಕಾಖಂಡಕಿ ಎಚ್‌.ವಿ. ಸಂವಾದ ನಡೆಸಿಕೊಟ್ಟರು.

ವಿದ್ವಾಂಸ ಡಾ| ಎನ್‌.ಎಸ್‌. ಗುಂಡೂರ: ಕಲಾಹೀನನಾಗಿ ಇರುವವನಿಗೆ ಸಾಹಿತ್ಯ ಸುಗಂಧ ಬೆಸೆಯುವ ಕಾರ್ಯ ವಿಮರ್ಶೆಯಿಂದ ನಡೆಯಬೇಕು. ವಿಮರ್ಶಕ ನಿಜ ಅರ್ಥದಲ್ಲಿ ಸಾಹಿತ್ಯ ಸಂಸ್ಕೃತಿಯ ನಿರ್ಮಾತೃವೇ ಆಗಿದ್ದಾನೆ. ವಿಮರ್ಶೆಗೆ 100 ವರ್ಷಗಳ ಇತಿಹಾಸ ಇದೆ. ಎಲ್ಲಾ ಸಾಹಿತ್ಯಕ್ಕೂ ಒಂದೇ ತೆರನಾದ ವಿಮರ್ಶೆ ಎಂಬ ಭಾವ ಮೂಡಿದೆ. ಇದರಲ್ಲಿ ಬದಲಾವಣೆ ಬೇಕು, ಪಠ್ಯದ ಆಚೆಗೆ ಸಾಹಿತ್ಯ ಸಂಸ್ಕೃತಿಯ ವಿಮರ್ಶೆ ಆಗಬೇಕಿದೆ.

ವಿದ್ವಾಂಸ ಡಾ| ಜಿ.ಬಿ. ಹರೀಶ: ಸಮಾಜದ ಜತೆಯಲ್ಲಿರುವುದು ಸಾಹಿತ್ಯ. ಜಗತ್ತಿನ ಕೇಂದ್ರ ಜೀವನ. ಇದನ್ನು ಆಧಾರವಾಗಿಟ್ಟು ಮೂಲ ಲೇಖಕನ ಆಶಯವನ್ನು ಧಾತುವಾಗಿರಿಸಿ ಮೂಲ ಕೃತಿಯ ರಸವನ್ನು ಹಿಂಡಿ ವಾಚಕರ ಮುಂದೆ ಇಡುವುದು ವಿಮರ್ಶೆ. ಕೃತಿಯನ್ನು ವಿಮರ್ಶಿಸುವುದು ಮುಖ್ಯ ಅಲ್ಲ. ಹಾಗೆಯೇ ಮೂಲಸ್ವರೂಪದಲ್ಲಿ ಮತ್ತೆ ಕಟ್ಟಿಕೊಡುವುದು ಮುಖ್ಯ.

ಡಾ| ಶ್ಯಾಮಸುಂದರ ಬಿದರ ಕುಂದಿ: ಸೃಷ್ಟಿ ಮಾಡಿರುವುದರ ಬೆಳಕನ್ನು ಹೆಚ್ಚು ಮಾಡುವುದು ವಿಮರ್ಶೆ. ಕನ್ನಡದಲ್ಲಿ ವಿಮರ್ಶೆ ಅತ್ಯಂತ ಶಿಸ್ತಿನಿಂದ ಬೆಳೆದು ಬಂದಿದೆ. ವಿಕಾಸ ಹೊಂದುತ್ತ ಅಪ್‌ಡೇಟ್‌ ಆಗುತ್ತಾ ಬಂದಿದೆ.

ಸಾಹಿತ್ಯದಲ್ಲಿ ಅಂಗವಿಕಲತೆ ಕರುಣೆ, ಭಯದ ಸರಕು
ಅಂಗವಿಕಲತೆಯು ಕರುಣೆ, ಭಯದ ಭಾವನೆಯ ಸರಕಾಗಿ ಶಾಸ್ತ್ರೀಯ ಪಠ್ಯದಲ್ಲಿ ಬಳಕೆಯಾಗಿದೆ. ಮಾನವ ಅನುಭವದ ವೈವಿಧ್ಯತೆಯ ರೂಪ ಎಂದು ಆಧುನಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ ಎಂದು ಧಾರವಾಡ ಕರ್ನಾಟಕ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ| ಮಲ್ಲಪ್ಪ ಬಂಡಿ ಹೇಳಿದರು.

ನೋಟ-ಒಳನೋಟ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಭಾರತೀಯ ಪಾಶ್ಚಾತ್ಯ ಪರಂಪರೆಯಲ್ಲಿ ಅಂಗವಿಕಲತೆ ರೂಪಕವಾಗಿ ಬಳಕೆ ಮಾಡಲಾಗಿದೆ. ಕೆಲವರು ತಮ್ಮ ಸಾಹಿತ್ಯದ ಮೂಲಕ ಅಂಗವೈಕಲ್ಯ ಇರುವವರನ್ನು ದುರಂತ ವ್ಯಕ್ತಿಗಳನ್ನಾಗಿ ರೂಪಿಸಿದ್ದಾರೆ. ಇದರ ಬದಲು ಅವರನ್ನು ಮಿತಿ, ಸಾಮರ್ಥ್ಯ, ಭಿನ್ನ, ಸಂಕೀರ್ಣತೆ ಮೂಲಕ ರೂಪಿಸಬಹುದಿತ್ತು ಎಂದರು.

ಸಂಶೋಧನ ವಿದ್ಯಾರ್ಥಿ ಒ. ಐಶ್ವರ್ಯ, ಬಾಲ್ಯದಲ್ಲಿ ನಾನು ಕರುಡುತನವನ್ನು ದ್ವೇಷಿಸುತ್ತಿದ್ದೆ. ಆದರೆ ಬಳಿಕ ಅಂಗವಿಕಲ ಸಮುದಾಯದೊಡನೆ ಬೆರೆತಾಗ ನನ್ನ ಭಾವನೆಯೇ ಬೇರೆಯಾಗಿತ್ತು ಎಂದರು. ಪೃಥ್ವಿ ಕಾರಿಂಜೆ ನಿರ್ವಹಿಸಿದರು.

ಹಾಲಿವುಡ್‌ ಸಿನೆಮಾಗಳಲ್ಲಿ ಚೀನ ಉಲ್ಲೇಖ ಹೆಚ್ಚೇಕೆ?
ಹಾಲಿವುಡ್‌ ಚಲನಚಿತ್ರಗಳಲ್ಲಿ ಚೀನ ತನ್ನ ಹೆಗ್ಗುರುತು ಪ್ರದರ್ಶಿಸುತ್ತಿದ್ದು, ಭಾರತಕ್ಕೆ ಹೋಲಿಕೆ ಮಾಡಿದರೆ ಅತೀ ದೊಡ್ಡ ಸಿನೆಮಾ ಮಾರುಕಟ್ಟೆ ಹೊಂದಿದೆ ಎಂದು ಸಾಹಿತಿ ಅರುಣ್‌ ಭಾರದ್ವಾಜ್‌ ಹೇಳಿದರು. ತಾವೇ ಬರೆದ ‘ಸಿನಿಮೀಯ-ಸಿನಿಕೀಯ’ ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಚೀನದಲ್ಲಿ 94,000 ಚಲನಚಿತ್ರ ಮಂದಿರಗಳಿದ್ದು, ಅಲ್ಲಿ ಚಿತ್ರ ಬಿಡುಗಡೆಗೆ ಈ ತಂತ್ರ ಅಳವಡಿಸಲಾಗುತ್ತಿದೆ. ಆದರೆ ಭಾರತದಲ್ಲಿ ಕೇವಲ 10,000 ಚಿತ್ರಮಂದಿರಗಳು ಇವೆ ಎಂದು ಹೇಳಿದರು. ಈ ವೇಳೆ ಶೈಲೇಶ್‌ ಕುಲಕರ್ಣಿ, ಪ್ರಕಾಶ್‌ ಬೆಳವಾಡಿ ಇದ್ದರು.

ಟಾಪ್ ನ್ಯೂಸ್

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್‌ ಅಳವಡಿಕೆ ಪೂರ್ಣ

3

Mangaluru: ಬಂದರಿನಲ್ಲಿ ಐಪಿಎಲ್‌ ಮಾದರಿ ಗಲ್ಲಿ ಕ್ರಿಕೆಟ್‌!

2(1

Mangaluru: ಕದ್ರಿ ಪಾರ್ಕ್‌ನಲ್ಲಿ ಕಲಾಲೋಕ ವೈಭವ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.