Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಿದ ಬಳಿಕ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಿರುವ ಪಾಲಿಕೆ

Team Udayavani, Dec 18, 2024, 2:49 PM IST

9(1

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 6 ರಸ್ತೆ, ಸರ್ಕಲ್‌ಗ‌ಳಿಗೆ ಸ್ಥಳೀಯ ಪ್ರಾಮುಖ್ಯವನ್ನು ಹೊಂದಿದ ಹೆಸರನ್ನು ಇಡುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಕೆಯಾಗಿದ್ದ ಬೇಡಿಕೆ ಇದೀಗ ಸಾಮಾನ್ಯ ಸಭೆಯಲ್ಲಿ ಮಂಡನೆ ಯಾಗಿವೆ. ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಇಂತಹ ಒಟ್ಟು ಆರು ಪ್ರಸ್ತಾವಗಳು ಮಂಡನೆಯಾಗಿವೆ.

ಸಭೆಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ನಾಮಕರಣದ ಕುರಿತಾದ ಈ ಆರು ಕಾರ್ಯಸೂಚಿಗಳು ಸರಕಾರದ ಮಾರ್ಗಸೂಚಿ ಪ್ರಕಾರ ಈ ವಿಚಾರವು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು ಒಂದು ತಿಂಗಳ ಒಳಗೆ ಆಕ್ಷೇಪಣೆ ಅಥವಾ ಸಲಹೆಯನ್ನು ಆಹ್ವಾನಿಸಬೇಕಿದೆ. ಆಕ್ಷೇಪಣೆ/ ಸಲಹೆ ಬಂದಲ್ಲಿ ಮುಂದಿನ ಪಾಲಿಕೆ ಸಭೆಯಲ್ಲಿ ಮತ್ತೆ ಮಂಡಿಸಬೇಕಿದೆ. ಸ್ಥಾಯೀ ಸಮಿತಿಯಲ್ಲಿ ಇದು ಪರಿಶೀಲನೆ ಆಗಿ, ಸರಕಾರದ ಅನುಮೋದನೆ ಪಡೆಯಬೇಕಿದೆ.

ಕುಂಟಿಕಾನ ಜಂಕ್ಷನ್‌ ವೃತ್ತ ‘ಕನಕದಾಸ ವೃತ್ತ’
ಕುಂಟಿಕಾನ ಜಂಕ್ಷನ್‌ ವೃತ್ತಕ್ಕೆ ‘ಶ್ರೀ ಭಕ್ತ ಕನಕದಾಸ’ ವೃತ್ತ ಎಂದು ನಾಮಕರಣ ಮಾಡುವಂತೆ ಶಾಸಕ ಡಿ. ವೇದವ್ಯಾಸ ಕಾಮತ್‌ ಹಾಗೂ ಪಾಲಿಕೆಯ ಹಿರಿಯ ಸದಸ್ಯ ಹಾಗೂ ಮಾಜಿ ಮೇಯರ್‌ ಶಶಿಧರ ಹೆಗ್ಡೆ ಹಾಗೂ ಕರಾವಳಿ ಕುರುಬರ ಸಂಘದಿಂದ ಬೇಡಿಕೆ ಸಲ್ಲಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕನಕದಾಸರ ಭಕ್ತರಿದ್ದಾರೆ. ಮಂಗಳೂರು ವಿವಿಯಲ್ಲೂ ಕನಕ ಪೀಠವಿದೆ. ಕನಕ ದಾಸರ ಸ್ಮರಣೆಗೆ ಒಂದು ಜಾಗ ಬೇಕು ಎನ್ನುವುದು ಬೇಡಿಕೆ.

ಕೊಂಚಾಡಿ ಮಹಾಲಸಾ ದೇವಸ್ಥಾನ ರಸ್ತೆಗೆ ‘ಶ್ರೀ ಕಾಶೀಮಠ ರಸ್ತೆ’
ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಮುಂಭಾಗದ ರಸ್ತೆಯನ್ನು ‘ಶ್ರೀ ಕಾಶಿಮಠ ರಸ್ತೆ’ ಎಂದು ನಾಮಕರಣ ಮಾಡುವಂತೆ ಶಾಸಕ ಡಾ| ಭರತ್‌ ಶೆಟ್ಟಿ ಮತ್ತು ಸ್ಥಳೀಯ ಸದಸ್ಯೆ ಸಂಗೀತಾ ಆರ್‌. ನಾಯಕ್‌ ಮನವಿ ಮಾಡಿದ್ದಾರೆ. ಗೌಡ ಸಾರಸ್ವತ ಸಮಾಜದಲ್ಲಿ ಕಾಶಿಮಠ ಸಂಸ್ಥಾನವು ಮಹತ್ತರ ಸ್ಥಾನ ಹೊಂದಿದ್ದು, 1542ರಲ್ಲಿ ಸ್ಥಾಪನೆಗೊಂಡಿದ್ದು, ಕಾಶಿಮಠ ಸಂಸ್ಥಾನಕ್ಕೂ ಮಹಾಲಸಾ ನಾರಾಯಣಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.

ಪಡೀಲ್‌ ಡಿಸಿ ಕಚೇರಿ ಮುಂಭಾಗ ಸಿಎ ಇಂಡಿಯಾ ಸರ್ಕಲ್‌
ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ತಿರುವಿನಲ್ಲಿ ‘ಸಿಎ ಇಂಡಿಯಾ ಸರ್ಕಲ್‌’ ಅಥವಾ ‘ಸಿಎ ಇಂಡಿಯಾ ಜಂಕ್ಷನ್‌’ ನಿರ್ಮಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್‌ ಅಜೆಂಡಾ ಮಂಡಿಸಿದ್ದಾರೆ. ಪಾಲಿಕೆಯ 50ನೇ ಅಳಪೆ ವಾರ್ಡ್‌ನ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾದ ಶಾಖೆ ಪ್ರೀಮಿಯರ್‌ ಅಕೌಂಟಿಂಗ್‌, ವಿಶ್ವದ 2ನೇ ಅತೀ ದೊಡ್ಡ ಲೆಕ್ಕಪತ್ರ ಸಂಸ್ಥೆಯಾಗಿದೆ. 3,500 ವಿದ್ಯಾರ್ಥಿಗಳು ಸದಸ್ಯತ್ವ ಹೊಂದಿದ್ದಾರೆ.

ಐಎಂಎ ಭವನ ಪಕ್ಕದ ರಸ್ತೆಗೆ ‘ಐಎಂಎ ವೃತ್ತ’
ಅತ್ತಾವರ ರಸ್ತೆಯಲ್ಲಿರುವ ಐಎಂಎ ಭವನದ ಸಮೀಪದ ವೃತ್ತವನ್ನು ಐಎಂಎ ವೃತ್ತ ಎಂದು ನಾಮಕರಣ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕವು ಪಾಲಿಕೆಗೆ ಮನವಿ ಮಾಡಿದೆ. ಐಎಂಎ ಡಾಕ್ಟರ್ಸ್‌ ಆಫ್ ಮಾಡರ್ನ್ ಮೆಡಿಸಿನ್‌ನ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು, 1928ರಲ್ಲಿ ಸ್ಥಾಪನೆಗೊಂಡಿದೆ. ದೆಹಲಿಯಲ್ಲಿ ಪ್ರಧಾನ ಕಚೇರಿ ಹಾಗೂ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.

ಉರ್ವ ಮಾರ್ಕೆಟ್‌ ವೃತ್ತಕ್ಕೆ ‘ಶ್ರೀ ಮಾರಿಯಮ್ಮ ವೃತ್ತ’
ಉರ್ವ ಮಾರ್ಕೆಟ್‌ ಬಳಿ ಇರುವ ವೃತ್ತಕ್ಕೆ ‘ಶ್ರೀ ಮಾರಿಯಮ್ಮ ವೃತ್ತ’ ಎಂದು ನಾಮಕರಣಕ್ಕೆ ಕ್ರಮ ವಹಿಸಲು ಶಾಸಕ ವೇದವ್ಯಾಸ ಕಾಮತ್‌, ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಉರ್ವ ಫ್ರೆಂಡ್ಸ್‌ ಕಲ್ಚರಲ್‌ ಅಸೋಸಿಯೇಶನ್‌ರವರ ಮನವಿಯನ್ನು ಕಾರ್ಯಸೂಚಿಯಲ್ಲಿ ಮಂಡಿಸಲಾಗಿದೆ. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಮಂಗಳೂರಿನ ಪ್ರಸಿದ್ಧ ಗ್ರಾಮದೇವಿಯ ದೇವಸ್ಥಾನವೂ ಆಗಿದೆ. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಎಂಫಾಸಿಸ್‌ ಜಂಕ್ಷನ್‌ ವೃತ್ತಕ್ಕೆ ಶ್ರೀ ಗೋರಕ್ಷನಾಥ ಪಾಲೆಮಾರ್‌ ವೃತ್ತ
ಮೋರ್ಗನ್ಸ್‌ಗೆàಟ್‌ನ ಎಂಫಾಸಿಸ್‌ ಜಂಕ್ಷನ್‌ ಎದುರುಗಡೆ ಇರುವ ವೃತ್ತಕ್ಕೆ ‘ಶ್ರೀ ಗೋರಕ್ಷನಾಥ ಪಾಲೆಮಾರ್‌ ವೃತ್ತ’ ಎಂದು ನಾಮಕರಣ ಮಾಡುವಂತೆ ಮನಪಾ ಸದಸ್ಯೆ ಪಿ.ಎಸ್‌. ಭಾನುಮತಿ ಅವರ ಮನವಿ, ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ಅವರ ಟಿಪ್ಪಣಿಯೊಂದಿಗೆ ಕಾರ್ಯಸೂಚಿ ಮಂಡನೆಯಾಗಿದೆ. ಶ್ರೀ ಗೋರಕ್ಷನಾಥರು ನೇಪಾಲ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿ ಯೋಗ ಪ್ರಚಾರ ಮಾಡಿ 10ನೇ ಶತಮಾನದ ಮಧ್ಯಭಾಗದಲ್ಲಿ ನಾಥ ಪಂಥದ ಪ್ರಥಮ ವಿಲಾಸಿನಿ ಪಿಂಗಳಾದೇವಿ ಜತೆ ಗೂಡಿ ತುಳುನಾಡು ಪ್ರವೇಶಿಸಿದ್ದರು. ಈ ಸಂದರ್ಭ ಜಪ್ಪು ಪ್ರದೇಶದ ನೇತ್ರಾವತಿ ನದಿಯ ತಟದಲ್ಲಿ ಶ್ರೀ ಗೋರಕ್ಷನಾಥರು ತಮ್ಮ ಕೈಯ್ಯಲ್ಲಿದ್ದ ದಂಡ ನೆಲಕ್ಕೂರಿ ಕೆಲ ವರ್ಷಗಳ ಕಾಲ ಯೋಗಗೈದಿದ್ದರು.

ಟಾಪ್ ನ್ಯೂಸ್

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.