Mangaluru: ನಗರದಲ್ಲಿ ಅಪಾಯಕಾರಿಯಾಗುತ್ತಿದೆ ಮ್ಯಾನ್‌ಹೋಲ್‌ಗಳು
ದ್ವಿಚಕ್ರ ವಾಹನ ಸಂಚಾರಕ್ಕೆ ಆಪತ್ತು; ವಾಹನ ದಟ್ಟಣೆಗೂ ಕಾರಣವಾಗುತ್ತಿವೆ
Team Udayavani, Dec 10, 2024, 2:41 PM IST
ಮಹಾನಗರ: ನಗರದ ರಸ್ತೆಗಳಲ್ಲಿ ಅತಿಯಾಗಿರುವ ಮ್ಯಾನ್‌ಹೋಲ್‌ಗಳ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ. ಅನೇಕ ವರ್ಷಗಳಿಂದ ಮ್ಯಾನ್‌ಹೋಲ್‌ಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಮ್ಯಾನ್‌ಹೋಲ್‌ಗಳ ಮುಚ್ಚಳ ಮ್ಯಾನ್‌ಹೋಲ್ ಒಳಗಡೆ ಕುಸಿದಿದ್ದು ಅಪಘಾತಕ್ಕೆ ಆಹ್ವಾನವಾಗುತ್ತಿದೆ.
ನಗರದಲ್ಲಿ ಸದಾ ವಾಹನ ಓಡಾಟದಿಂದ ಕೂಡಿದ ಬೆಂದೂರುವೆಲ್, ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಬಿಜೈ, ಎಂಜಿ ರಸ್ತೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮ್ಯಾನ್‌ಹೋಲ್ ಮುಚ್ಚಳಗಳು ಕೆಲವು ಅಡಿಗೆ ಕುಸಿದಿದೆ. ರಸ್ತೆಯ ವಾಹನ ಪಥದಲ್ಲೇ ಈ ಮ್ಯಾನ್‌ಹೋಲ್ ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹಲವು ಕಡೆಗಳಲ್ಲಿ ವಾಹನ ದಟ್ಟಣೆಗೂ ಇದು ಕಾರಣವಾಗುತ್ತಿದೆ.
ಕೆಲವೆಡೆ ಮ್ಯಾನ್‌ಹೋಲ್‌ಗಳು ರಸ್ತೆಯಿಂದ ಸುಮಾರು ಅಡಿ ಕೆಳಗೆ ಹೋಗಿದೆ. ಇದರಿಂದ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿ ಕಾಮಗಾರಿ ಮಾಡುವ ಜತೆಗೆ ಈಗಿರುವ ಮ್ಯಾನ್‌ಹೋಲ್‌ಗಳ ನಿರ್ವಹಣೆ ಕೂಡ ಅತೀ ಮುಖ್ಯ.
ವಿವಿಧ ರಸ್ತೆಗಳಲ್ಲಿ ಮ್ಯಾನ್‌ಹೋಲ್ ಅಪಾಯಕಾರಿ
ಕದ್ರಿ ಮೈದಾನ ಬಳಿಯ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಸಂಪೂರ್ಣ ಕುಸಿದಿದ್ದು, ಕಬ್ಬಿಣದ ಸಲಾಕೆಗಳು ಮಾತ್ರವೇ ಉಳಿದುಕೊಂಡಿವೆ. ಬಿಜೈ ಕೆಎಸ್‌ಆರ್‌ಟಿಸಿ ಸಮೀಪದಲ್ಲಿ ಎರಡೂ ಬಿದಿಯ ರಸ್ತೆಗಳಲ್ಲಿ ಮ್ಯಾನ್ ಹೋಲ್ ಮುಚ್ಚಳಗಳು ಕುಸಿದಿದ್ದು, ಅಪಾಯಕ್ಕೆ ಆಹ್ವಾನವಾಗಿದೆ. ಬಲ್ಮಠ ಸಮೀಪದ ಮುಖ್ಯ ರಸ್ತೆಯಲ್ಲೂ ಮ್ಯಾನ್‌ಹೋಲ್ ಮುಚ್ಚಳ ಅಪಾಯದಲ್ಲಿದೆ. ಹಲವು ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಇಂತಹ ಅವ್ಯವಸ್ಥೆ ಇದ್ದು, ವಾಹನ ಸವಾರರು ಪರದಾಡುವಂತಾಗಿದೆ.
ದ್ವಿಚಕ್ರ ವಾಹನ ಸವಾರರ ಪರದಾಟ
ದ್ವಿಚಕ್ರವಾಹನಗಳಲ್ಲಿ ಸಂಚರಿಸುವಾಗ ಏಕಾಏಕಿ ಮ್ಯಾನ್‌ಹೋಲ್ ಮುಚ್ಚಳ ಕುಸಿದಿದ್ದು ಗೋಚರಕ್ಕೆ ಬಾರದೆ ಕೂದಳೆಲೆ ಅಂತರದಲ್ಲಿ ಅಪಾಯದಿಂದ ಪಾರಾದೆ. ನಗರದ ಅನೇಕ ರಸ್ತೆಗಳಲ್ಲಿ ಇಂತಹ ಸಮಸ್ಯೆಯಾಗುತ್ತಿದ್ದು ಪಾಲಿಕೆ ಕ್ರಮಕೈಗೊಳ್ಳಲಿ.
-ಹರೀಶ್ ಕೆ., ದ್ವಿಚಕ್ರವಾಹನ ಸವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.