Mangaluru: ವಾಹನ ಚಾಲಕರೇ… ಮಳೆಗಾಲದಲ್ಲಿರಲಿ ಹೆಚ್ಚುವರಿ ಎಚ್ಚರಿಕೆ
ಚಕ್ರ ಗುಂಡಿಯಲ್ಲಿ ಹೂತು ಹೋಗಬಹುದು.
Team Udayavani, Apr 22, 2024, 3:55 PM IST
ಮಹಾನಗರ: ಬೇಸಗೆಯ ನಡುವೆ ಮಳೆ ಯಾಗುತ್ತಿದೆ. ವಾಹನ ಚಾಲಕರು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮೊದಲ ಮಳೆಯೆಂದರೆ ಅದು ವಾಹನ ಚಾಲಕರು, ಸವಾರರಿಗೂ ಸವಾಲು. ಸಾಲು ಸಾಲು ಅಪಘಾತಗಳು ಸಂಭವಿ
ಸುವ ಅಪಾಯ ಹೆಚ್ಚು. ಒಂದಷ್ಟು ಹೆಚ್ಚುವರಿ ಎಚ್ಚ ರಿಕೆ ವಹಿಸಿದರೆ ಮಳೆಯ ಲ್ಲಿಯೂ ಸುರಕ್ಷಿತ ಸಂಚಾರ ಸಾಧ್ಯ. ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
*ರಸ್ತೆಯಲ್ಲಿ ಗುಂಡಿಗಳಿದ್ದರೆ ಅವುಗಳು ನೀರು ತುಂಬಿ ಕಾಣಿಸುವುದಿಲ್ಲ. ನಿಧಾನವಾಗಿ ಜಾಗರೂಕತೆಯಿಂದ ವಾಹನ
ಚಾಲನೆ ಮಾಡಬೇಕು. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ತುಂಬಾ ಎಚ್ಚರವಾಗಿರಬೇಕು.
*ಕೆಲವು ರಸ್ತೆಗಳಲ್ಲಿ ಬೆಳಗ್ಗೆ ನೀವು ಹೋಗುವಾಗ ಗುಂಡಿ ಇಲ್ಲದೆ ಇರಬಹುದು. ಆದರೆ ಮಳೆ ಬರುತ್ತಿದ್ದರೆ ಸಂಜೆ ವಾಪಸಾಗುವಾಗ ಹೊಂಡ ಸೃಷ್ಟಿಸಿ ಅಪಾಯ ಆಹ್ವಾನಿಸುತ್ತಿರಬಹುದು.
*ನಗರವಿರಲಿ, ಹೊರವಲಯ ಅಥವಾ ಗ್ರಾಮೀಣ ಭಾಗದ ರಸ್ತೆಗಳಿರಲಿ. ಕೇಬಲ್, ಪೈಪ್‌ಲೈನ್ ಕಾರಣಕ್ಕೆ ರಸ್ತೆ ಬದಿ ಉದ್ದಕ್ಕೆ ಗುಂಡಿ ತೋಡಿರುವುದು ಸಾಮಾನ್ಯ. ಕೆಲವೆಡೆ ಇಂತಹ ಗುಂಡಿಗಳ ಮೇಲೆ ಮಣ್ಣು ಹಾಕಿ ಮುಚ್ಚಿದ್ದರೂ ಅದು ಮೊದಲ ಮಳೆಗೆ ಕುಸಿದು ಹೋಗುತ್ತದೆ. ಹಾಗಾಗಿ ವಾಹನಗಳನ್ನು ರಸ್ತೆ ಬಿಟ್ಟು ಕೆಳಗೆ ಇಳಿಸುವಾಗ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲವಾದರೆ ಚಕ್ರ ಗುಂಡಿಯಲ್ಲಿ ಹೂತು ಹೋಗಬಹುದು.
*ಮೊದಲಿನ ಕೆಲವು ದಿನಗಳವರೆಗೆ ಬಹುತೇಕ ಮಂದಿ ದ್ವಿಚಕ್ರ ವಾಹನ ಸವಾರರು ರೈನ್ ಕೋಟ್ ಹಾಕಿಕೊಳ್ಳುವುದು ಕಡಿಮೆ. ರೈನ್ ಕೋಟ್ ಇಲ್ಲದ ಕಾರಣ ಧಾವಂತದಿಂದ ದ್ವಿಚಕ್ರ
ವಾಹನ ಚಲಾಯಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ದ್ವಿಚಕ್ರ ವಾಹನ ಚಾಲಕರು, ಇತರ ವಾಹನ ಚಾಲಕರು ಜಾಗರೂಕತೆ ವಹಿಸಬೇಕು.
*ರಸ್ತೆ ಮೇಲೆ ಮಳೆ ನೀರು ಬಿದ್ದರೆ ರಸ್ತೆ ಯಲ್ಲಿರಬಹುದಾದ ಎಣ್ಣೆಯ ಅಂಶಗಳು ಹರಡಿ ದ್ವಿಚಕ್ರ ವಾಹನ ಗಳು ಸ್ಕಿಡ್ ಆಗುವ ಸಾಧ್ಯತೆ ಇರುತ್ತದೆ. ಅಂತಹ ಅಂಶಗಳು ಕಂಡ ಕೂಡಲೇ ವಾಹನ ನಿಧಾನಗೊಳಿಸುವುದೇ ಸುರಕ್ಷಿತ.
*ಮಳೆ ಬರುವಾಗ ಕೊಡೆ ತರದೆ ರಸ್ತೆ ದಾಟುವವರು, ಮಳೆಯಿಂದ ಎಲ್ಲಿಯಾದರೂ ರಕ್ಷಣೆ ಪಡೆದುಕೊಳ್ಳಲು ರಭಸದಿಂದ ಹೆಜ್ಜೆ ಹಾಕುವವರು ಹೆಚ್ಚು. ಪಾದಚಾರಿಗಳು ಮತ್ತು ವಾಹನ ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
*ಸಾಮಾನ್ಯವಾಗಿ ಮಳೆಗಾಲ ಸಂಚಾರ ನಿರ್ವಹಣೆ ಪೊಲೀಸರಿಗೂ ಸವಾಲು. ಮಳೆಯ ನಡುವೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಕೆಲವು ವಾಹನಗಳು ಎಲ್ಲೆಂದರಲ್ಲಿ ನುಗ್ಗುವ ಅಪಾಯವಿರುತ್ತದೆ.
*ದ್ವಿಚಕ್ರ ವಾಹನ ಸವಾರರು ರೈನ್ ಕೋಟ್, ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುವುದು ಸುರಕ್ಷಿತ. ರೈನ್‌ಕೋಟ್ ತಂದಿಲ್ಲ, ಮಳೆ ಬರುವ ಸಾಧ್ಯತೆ ಇದೆ ಎಂಬ ಆತಂಕದಿಂದ ನಿಯಂತ್ರಣ ಕಳೆದುಕೊಂಡು ಅತೀವೇಗ ದಿಂದ ವಾಹನ ಚಲಾಯಿಸುವುದು ಅಪಾಯಕಾರಿ.
*ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಮರದ ಕೆಳಗೆ ಅಥವಾ ರಸ್ತೆಬದಿಯ ಕಟ್ಟಡದ ಕೆಳಗೆ ವಾಹನ ನಿಲ್ಲಿಸಿ ಅದರಲ್ಲಿ ಕುಳಿತುಕೊಳ್ಳುವುದು ಅಪಾಯಕಾರಿ.
*ಮಳೆಗಾಲವೆಂಬ ಕಾರಣಕ್ಕಾದರೂ ವಾಹನಗಳ ಫಿಟ್ ನೆಸ್ ತಪಾಸಣೆ ಮಾಡಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
*ರಸ್ತೆಯ ಮೇಲೆ ಕೆಸರು ನೀರು ಶೇಖರಣೆಯಾಗಿ ಸ್ಕಿಡ್ ಆಗುವ ಸಾಧ್ಯತೆ ಇರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.