Mangaluru: ಬೇಕು ಇಂದೋರ್‌ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?

ಮಂಗಳೂರಿಗಿಂತ ಐದು ಪಟ್ಟು ಹೆಚ್ಚು ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆ ಸಾಧನೆ; ; ಮಾದರಿ ಅನುಷ್ಠಾನಕ್ಕಾಗಿ ಆಡಳಿತ - ಅಧಿಕಾರಿಗಳ ಜವಾಬ್ದಾರಿ ಏನು?

Team Udayavani, Nov 5, 2024, 2:21 PM IST

3

ಮಹಾನಗರ: 35 ಲಕ್ಷ ಜನಸಂಖ್ಯೆ, ಪ್ರತಿನಿತ್ಯ 700 ಟನ್‌ ಹಸಿ ಕಸ, 1200 ಟನ್‌ ಒಣ ಕಸ ಸಂಗ್ರಹ.. ಹಾಗಿದ್ದರೂ ಮಧ್ಯಪ್ರದೇಶದ ಇಂದೋರ್‌ ನಗರ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ದೇಶದಲ್ಲೇ ನಂ. 1 ಸ್ವತ್ಛ ನಗರ ಎಂಬ ಪ್ರಶಸ್ತಿಯನ್ನು ಪಡೆಯುತ್ತಿದೆ. ಈ ಸಾಧನೆ ಮಾಡಿದ್ದು ಹೇಗೆ? ಈ ಮಾದರಿಯನ್ನು ಮಂಗಳೂರು ನಗರಕ್ಕೆ ಅನ್ವಯಗೊಳಿಸಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾಗಿದೆ.

ನಿಜವೆಂದರೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಗ್ರಹವಾಗುವ ತ್ಯಾಜ್ಯಕ್ಕೆ ಹೋಲಿಸಿದರೆ ಇಂದೋರ್‌ನಲ್ಲಿ ಐದು ಪಟ್ಟು ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುವುದು ನಿಜಕ್ಕೂ ಒಂದು ಯಶೋಗಾಥೆ.
2016ರಲ್ಲಿ ಒಂದು ಅದ್ಭುತವಾದ ಕಲ್ಪನೆಯೊಂದಿಗೆ ಸ್ವತ್ಛ ನಗರಿಯ ಕನಸನ್ನು ನನಸಾಗಿಸಿದ ಇಂದೋರ್‌ ಅದರ ಬಳಿಕ ಈ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸಿದೆ. ದೇಶದ ನಾನಾ ನಗರಗಳ ಪ್ರತಿನಿಧಿಗಳು ಇಂದೋರ್‌ಗೆ ಹೋಗಿ ಅಧ್ಯಯನ ನಡೆಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ನಿಯೋಗವೂ ಅಲ್ಲಿಗೆ ಹೋಗಿ ಬಂದಿದೆ.

ಇಂದೋರ್‌ ಮಹಾನಗರ ಪಾಲಿಕೆಯೂ ಕಸ ವಿಲೇವಾರಿಗೆ ಜಗತ್ತು ಎಂದೂ ಕಾಣದ ತಂತ್ರಜ್ಞಾನವನ್ನೇನೂ ಬಳಸಿಲ್ಲ. ಆಡಳಿತದ ಇಚ್ಛಾಶಕ್ತಿ, ಜನರಿಗೆ ಮನವರಿಕೆ ಮಾಡಿಕೊಡುವ ಕಲೆ, ಜಾಗೃತಿಯ ಮೂಲಕ ಈ ಕೆಲಸವನ್ನು ಸಾಧಿಸಿದೆ. ಇದು ದೇಶದ ಯಾವುದೇ ಭಾಗದಲ್ಲಾದರೂ ಗೆಲುವು ತಂದುಕೊಡಬಲ್ಲ ಸೂತ್ರಗಳೇ ಆಗಿವೆ. ಆದರೆ ಅದನ್ನು ಜಾರಿಗೆ ತರುವ ಇಚ್ಛಾಶಕ್ತಿ ಆಡಳಿತಕ್ಕೆ ಬೇಕು, ಜನರಿಗೆ ತಮ್ಮ ನಗರ ಸ್ವತ್ಛವಾಗಿರಬೇಕು ಎನ್ನುವ ಇರಾದೆಯೂ ಇರಬೇಕು. ಈ ನಿಟ್ಟಿನಲ್ಲಿ ಮುಂದಾದರೂ ಇಂದೋರ್‌ ಮಾದರಿ ಅನುಸರಿಸಿದರೆ ಮಂಗಳೂರು ಕೂಡ ಸ್ವತ್ಛ ನಗರ ಆಗಬಹುದು.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್‌: 9900567000

ಪ್ಲಾಸ್ಟಿಕ್‌ ವೇಸ್ಟ್‌ ಕಲೆಕ್ಷನ್‌ ಸೆಂಟರ್‌
ಇಂದೋರ್‌ ಮನಪಾದಿಂದಲೇ ಕಸ ಸಂಗ್ರಹ ಶುರುವಾಗುತ್ತಲೇ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಇಲ್ಲದಂತಾಯಿತು. ಹಾಗಾಗಿ ಅವರನ್ನು ಮತ್ತೆ ಒಟ್ಟಾಗಿಸಿ, ತರಬೇತಿ ನೀಡಿ ಅಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಉದ್ಯೋಗ ನೀಡಲಾಯಿತು. ಸಂಗ್ರಹವಾದ ಪ್ಲಾಸ್ಟಿಕ್‌ ಕಸವನ್ನು ಸಿಮೆಂಟ್‌ ಕಾರ್ಖಾನೆಗೆ ಹಾಗೂ ರಸ್ತೆ ನಿರ್ಮಾಣ ಮಾಡುವ ಎಂ.ಪಿ.ಗ್ರಾಮೀಣ ರಸ್ತೆ ಅಭಿವೃದ್ಧಿ ಮಂಡಳಿಗೆ ಮಾರಾಟ ಮಾಡಲಾಗುತ್ತದೆ.

ಪ್ರತಿ ರಾತ್ರಿ 800 ಕಿ.ಮೀ. ರಸ್ತೆ ಕ್ಲೀನಿಂಗ್‌!
ಇಂದೋರ್‌ನಲ್ಲಿ ಪ್ರತಿ ರಾತ್ರಿ ಇಡೀ ನಗರದ ಪ್ರಧಾನ ರಸ್ತೆ, ಫ‌ುಟ್‌ಪಾತ್‌ ಮತ್ತು ರಸ್ತೆ ವಿಭಜಕಗಳನ್ನು ಗುಡಿಸಿ ಸ್ವತ್ಛಗೊಳಿಸಲಾಗುತ್ತದೆ. ಇದಕ್ಕಾಗಿ ಇರುವ ವಾಹನಗಳ ಓಡಾಟದ ಒಟ್ಟು ದೂರ ದಿನಕ್ಕೆ 800 ಕಿ.ಮೀ. ಆಗುತ್ತದೆ. ರಸ್ತೆಯನ್ನು ನೀರು ಸಿಂಪಡಿಸಿ ಸ್ವತ್ಛಗೊಳಿಸಲಾಗುತ್ತದೆ. ಇದಕ್ಕೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನೇ ಮರುಬಳಸಲಾಗುತ್ತದೆ. ಉಳಿದಂತೆ 2200 ಕಿ.ಮೀ. ಒಳ ರಸ್ತೆಯನ್ನು ಗುಡಿಸಲಾಗುತ್ತದೆ.

ಸಾರ್ವಜನಿಕರ ಅಭಿಪ್ರಾಯ
ವ್ಯಾಪಾರಿಗಳು ಯಾವ ಕಾರಣಕ್ಕೂ ಸಾಮಗ್ರಿ ಒಯ್ಯಲು ಪ್ಲಾಸ್ಟಿಕ್‌ ಚೀಲಗಳನ್ನು ನೀಡಬಾರದು. ಬಟ್ಟೆ ಚೀಲಗಳ ದರ ಕಡಿಮೆ ಮಾಡಬೇಕು. ಅಂಗಡಿಗಳಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಚೀಲ ಬಳಸಿದ್ದಲ್ಲಿ ಆ ಬಗ್ಗೆ ನಿಯಂತ್ರಣ ಮಂಡಳಿಗೆ ತಿಳಿಸಬೇಕು. ಅವರ ಪರವಾನಿಗೆಯನ್ನು ಕೆಲವು ದಿನಗಳ ಕಾಲ ರದ್ದುಗೊಳಿಸಬೇಕು.
-ಜಿ.ಆರ್‌. ಪ್ರಭು ಬಿಜೈ

ನಾನು ಅಂಗಡಿಗೆ ತೆರಳುವ ವೇಳೆ ಹಳೆ ಪ್ಲಾಸ್ಟಿಕ್‌ ಅಥವಾ ಬಟ್ಟೆ ಚೀಲ ಒಯ್ಯುತ್ತೇನೆ. ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಹೆಚ್ಚಿನ ವ್ಯಾಪಾರಿಗಳು ಪ್ಲಾಸ್ಟಿಕ್‌ ಚೀಲಗಳನ್ನು ನೀಡುತ್ತಾರೆ.
– ವೀರಾ ಪಿಂಟೊ ಸುರತ್ಕಲ್‌

ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಯಂತ್ರಿಸಲು ಅಸಾಧ್ಯವಾದ ಮಾತು! ಅದರ ಬದಲಿಗೆ ಬಳಕೆಯಾಗಿರುವ ಪ್ಲಾಸ್ಟಿಕ್‌ ಚೀಲಗಳನ್ನು ಒಂದು ಒಳ್ಳೆಯ ದರ ನೀಡಿ ಪ್ರತಿ ಅಂಗಡಿಗಳಲ್ಲೂ ಖರೀದಿಸುವ ವ್ಯವಸ್ಥೆಯನ್ನು ಸ್ಥಳೀಯ ಪಾಲಿಕೆಗಳು ಮಾಡಬೇಕು. ಇದಕ್ಕೆ ತಗಲುವ ವೆಚ್ಚವನ್ನು ಪ್ಲಾಸ್ಟಿಕ್‌ ಚೀಲಗಳಿಂದಲೇ ಮಾಡಬಹುದು. ಹೊಸ ಪ್ಲಾಸ್ಟಿಕ್‌ ಚೀಲಗಳಿಗೆ ಈಗ ಇರುವ ದರದಲ್ಲಿ 5ರಿಂದ 10 ಪೈಸೆ ಹೆಚ್ಚಳ ಮಾಡಿ ಸದ್ರಿ ದರವನ್ನು ಹಳೆ ಪ್ಲಾಸ್ಟಿಕ್‌ ವಾಪಸ್‌ ನೀಡುವಾಗ ನೀಡಬಹುದು.
– ಪದ್ಮನಾಭ ಎಂ. ಭಂಡಾರಿ, ಮಂಗಳೂರು

ಇಂದೋರ್‌ನಲ್ಲಿ ವಿಲೇವಾರಿ ಹೇಗೆ?
- ಇಂದೋರ್‌ನಲ್ಲೂ ಮೊದಲು ನಮ್ಮಂತೆಯೇ ಮಾರ್ಗದ ಕೊನೆಗಳಲ್ಲಿ ಕಸ, ಪ್ಲಾಸ್ಟಿಕ್‌ ಎಸೆಯುವ ಪರಿಪಾಠವಿತ್ತು. ಮುಂದೆ ನಿಧಾನಕ್ಕೆ ಪ್ರತಿಯೊಂದು ರಸ್ತೆಗೂ, ಓಣಿಗೂ ಕಸ ಸಂಗ್ರಹ ವಾಹನಗಳನ್ನು ತಲುಪಿಸಲಾಯಿತು.
- ಆರಂಭದಲ್ಲಿ ಜನರು ಕಸವನ್ನು ಜೈವಿಕ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ಸಹಿತ ಒಣ ತ್ಯಾಜ್ಯವಾಗಿ ಪ್ರತ್ಯೇಕಿಸಿ ಕೊಡಲು ಒಪ್ಪುತ್ತಿರಲಿಲ್ಲ. ಹಲವಾರು ಸುತ್ತಿನ ಮನವರಿಕೆಗಳ ಬಳಿಕ ಅವರಿಗೆ ಈ ಹವ್ಯಾಸ ಬೆಳೆದಿದೆ.
- ಸಂಗ್ರಹಿಸಿದ ಕಸವನ್ನು ತ್ಯಾಜ್ಯ ನಿರ್ವಹಣ ಘಟಕಕ್ಕೆ ಒಯ್ದು ಅಲ್ಲಿ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಮಾಡಿ ಮಾರಾಟ ಮಾಡಿದರೆ, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಿಮೆಂಟ್‌ ಕಾರ್ಖಾನೆಗೆ ಕಳುಹಿಸಲಾಗುತ್ತಿತ್ತು.
- ಇಂದೋರ್‌ನ ಮಾರ್ಕೆಟ್‌ ಮತ್ತು ಕೆಲವೊಂದು ಫ‌ುಡ್‌ ಸ್ಟ್ರೀಟ್‌ಗಳಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಅಲ್ಲಿ ಅದಕ್ಕೆಂದೇ ಪ್ರತ್ಯೇಕವಾದ ವಿಲೇವಾರಿ ಘಟಕವನ್ನು ತೆರೆದು ಕಾಂಪೋಸ್ಟ್‌ ಜತೆಗೆ ಗೋಬರ್‌ ಗ್ಯಾಸ್‌ ತಯಾರಿ ಮಾಡಲಾಗಿದೆ. ಇಲ್ಲಿ ಉತ್ಪತ್ತಿಯಾಗುವ ಅನಿಲವನ್ನು ವಾಹನಗಳಿಗೆ ಬಳಸುವ ತಂತ್ರ ಇಲ್ಲಿದೆ.
- ಇಂದೋರ್‌ನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಿದೆ. ಮಾಧ್ಯಮಗಳು, ಬೀದಿ ನಾಟಕ, ಮನೆ ಮನೆ ಭೇಟಿ ಮತ್ತಿತರ ಎಲ್ಲ ವಿಧಾನಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದರಿಂದ ಈಗ ಹೆಚ್ಚಿನವರು ಕಸವನ್ನು ಆಲ್ಲಲ್ಲಿ ಇಟ್ಟಿರುವ ಪೆಟ್ಟಿಗೆಗಳಲ್ಲೇ ಹಾಕುತ್ತಾರೆ.
- ಸಂಪೂರ್ಣ ತ್ಯಾಜ್ಯ ವಿಲೇವಾರಿಗೆ 311 ಆಪ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಸಂಗ್ರಹಣಾ ಸೇವೆಯ ಬಗ್ಗೆ ದೂರು ನೀಡಲು ಅವಕಾಶವಿದೆ. ತಪಾಸಣೆ, ಸಿಬಂದಿಗಳ ಬಯೋಮೆಟ್ರಿಕ್‌ ಹಾಜರಾತಿಯನ್ನೂ ಇದು ನಿರ್ವಹಿಸುತ್ತದೆ. ಸ್ವತಃ ಪಾಲಿಕೆ ಆಯುಕ್ತರೇ ದೂರಿಗೆ ಉತ್ತರ ಕೊಡುತ್ತಾರೆ.
- ಇಲ್ಲಿ ವಾಹನಗಳು ನಿಗದಿತ ಸಮಯದಲ್ಲೇ ಒಂದು ಪ್ರದೇಶಕ್ಕೆ ಬರುತ್ತವೆ. ಯಾವ ವಾಹನ, ಯಾವ ಸಮಯದಲ್ಲಿ, ಎಲ್ಲಿರುತ್ತದೆ ಎಂದು ಟ್ರ್ಯಾಕ್‌ ಕೂಡಾ ಮಾಡಬಹುದು.

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.