Mangaluru: ರಸ್ತೆಯಲ್ಲೇ ಪಾರ್ಕಿಂಗ್‌ ಕಿರಿಕಿರಿ!

ವೆಲೆನ್ಸಿಯಾ-ನಂದಿಗುಡ್ಡ ರಸ್ತೆ ಅಭಿವೃದ್ಧಿಯಾದರೂ ಮೂಲಸೌಕರ್ಯ ಕೊರತೆ

Team Udayavani, Jan 14, 2025, 2:47 PM IST

5

ಮಹಾನಗರ: ನಗರದ ಕಂಕನಾಡಿ ಕಡೆಯಿಂದ ಮಂಗಳಾದೇವಿ ದೇವಸ್ಥಾನ ಸಹಿತ ಇತರ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ವೆಲೆನ್ಸಿಯಾದಿಂದ ನಂದಿಗುಡ್ಡದ ಕೋಟಿಚೆನ್ನಯ ವೃತ್ತದ ವರೆಗಿನ ರಸ್ತೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಬಸ್‌ ತಂಗುದಾಣ ಸಹಿತ ಹಲವು ಮೂಲ ಸೌಕರ್ಯಗಳನ್ನು ಇನ್ನೂ ಕಲ್ಪಿಸಲಾಗಿಲ್ಲ.

ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರ ಗಳು, ವಾಣಿಜ್ಯ ಕಟ್ಟಡಗಳು, ಅಂಗಡಿ – ಮಳಿಗೆಗಳು, ವಸತಿ ಸಮುಚ್ಚಯಗಳ ಸಹಿತ ಹಲವು ಕಚೇರಿ ಸಂಸ್ಥೆಗಳು ಈ ರಸ್ತೆಯುದ್ದಕ್ಕೂ ಇವೆ. ನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಾಗುತ್ತಾರೆ. ರಸ್ತೆಯೂ ಅಗಲಗೊಂಡಿದ್ದು, ಕೆಲವು ಕಡೆ ಮಾತ್ರ ಫ‌ುಟ್‌ ಪಾತ್‌ ಇದೆ. ಕೆಲವೊಂದು ಮೂಲಸೌಕರ್ಯಗಳ ಕೊರತೆ ಸಾರ್ವಜನಿಕರನ್ನು ಇನ್ನೂ ಕಾಡುತ್ತಿದೆ.

ಬಸ್‌ ತಂಗುದಾಣವಿಲ್ಲ
ಸುಮಾರು ಒಂದೂವರೆ ಕಿ.ಮೀ. ಚತುಷ್ಪಥ ರಸ್ತೆಯಲ್ಲಿ ನಂದಿಗುಡ್ಡದಿಂದ ವೆಲೆನ್ಸಿಯಾ ಕಡೆಗೆ ಬರುವ ರಸ್ತೆಯಲ್ಲಿ ಒಂದು ಬಸ್‌ ತಂಗುದಾಣ ಇದೆ. ಅದನ್ನು ನವೀಕರಿಸಲಾಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ವೆಲೆನ್ಸಿಯಾದಿಂದ ನಂದಿ ಗುಡ್ಡೆ ವರೆಗೆ ಯಾವುದೇ ಬಸ್‌ ತಂಗು ದಾಣಗಳಿಲ್ಲ. ಇದರಿಂದಾಗಿ ಬಸ್ಸಿಗಾಗಿ ಕಾಯುವವರು ರಸ್ತೆಯಲ್ಲಿರುವ ಅಂಗಡಿಗಳ ಮುಂಭಾಗದಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ನಿಂತು ಬಸ್ಸಿಗೆ ಕಾಯಬೇಕಾದ ಅಗತ್ಯವಿದೆ. ಸ್ಥಳೀಯ ಶಾಲೆಗಳ ಮಕ್ಕಳು ಕೂಡಾ ಮಳೆ – ಬಿಸಿಲಿಗೆ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಅನಿವಾರ್ಯಯಿದೆ.

ರಸ್ತೆ ವಿಸ್ತರಣೆ ಕಾಮಗಾರಿಯ ಸಂದರ್ಭ ಬಸ್‌ ತಂಗುದಾಣಗಳನ್ನು ತೆರವು ಗೊಳಿಸಲಾ ಗಿದ್ದು, ಬಳಿಕ ಹೊಸದಾಗಿ ನಿರ್ಮಿಸಲಾಗಿಲ್ಲ. ಕನಿಷ್ಠ 2-3 ಬಸ್‌ ತಂಗುದಾಣಗಳನ್ನು ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಅಗತ್ಯ
ರಸ್ತೆ ಬದಿಯಲ್ಲಿ ಪಾರ್ಕಿಂಗ್‌ಗೆ ಎಂದು ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿಲ್ಲ. ಇದರಿಂದಾಗಿ ಕೆಲವೊಮ್ಮೆ ರಸ್ತೆಬದಿಯಲ್ಲಿ ಉದ್ದಕ್ಕೂ ವಾಹನಗಳ ಪಾರ್ಕಿಂಗ್‌ ಮಾಡುವುದು ಕಂಡು ಬರುತ್ತದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೂ ಅಡ್ಡಿಯಾಗುತ್ತಿದೆ. ಒಂದೆರಡು ಕಡೆಗಳಲ್ಲಿ ಪಾರ್ಕಿಂಗ್‌ಗೆಂದೇ ಸ್ಥಳಗಳನ್ನು ಮೀಸಲಿಡಬೇಕು ಎನ್ನುವುದು ವಾಹನ ಸವಾರರ ಬೇಡಿಕೆ. ಸಂಜೆ ವೇಳೆ ಫಾಸ್ಟ್‌ ಫುಡ್‌ ವಾಹನಗಳನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸುವುದರಿಂದಲೂ ವಾಹನ ದಟ್ಟಣೆ ಉಂಟಾಗುತ್ತಿದೆ.

100 ಮೀ. ಫುಟ್‌ಪಾತ್‌ ನಿರ್ಮಾಣ ಬಾಕಿ
ಇಲ್ಲಿನ ಸೈಂಟ್‌ ಜೋಸೆಫ್‌ ನಗರದ ಬಳಿಯಿಂದ ನಂದಿಗುಡ್ಡೆ ವೃತ್ತದ ವರೆಗೆ ಒಂದು ಬದಿಯಲ್ಲಿ ಫುಟ್‌ಪಾತ್‌ ನಿರ್ಮಾಣ ಮಾಡಲೂ ಬಾಕಿ ಇದೆ. ಸುಮಾರು 100 ಮೀ. ಗಳಷ್ಟು ದೂರ ರಸ್ತೆ ಬದಿಯಲ್ಲಿರುವ ಕಿರಿದಾದ ಜಾಗದಲ್ಲೇ ಪಾದಚಾರಿಗಳು ನಡೆಯದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವೆಲೆನ್ಸಿಯ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಕೆಲವೊಂದು ಮೂಲಸೌಕರ್ಯ ಗಳನ್ನು ಕಲ್ಪಿಸಬೇಕಾಗಿದೆ. ಬಸ್‌ ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸಬೇಕು. ವಾಹನಗಳ ಪಾರ್ಕಿಂಗ್‌ಗಾಗಿಯೂ ಸೂಕ್ತ ಸ್ಥಳ ನಿಗದಿಪಡಿಸಬೇಕು.
– ಸ್ಟೀವನ್‌ ಸಿಕ್ವೇರಾ, ಸ್ಥಳೀಯರು

-ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Kaikamba: ಮಟ್ಕಾ ದಾಳಿ, ಇಬ್ಬರ ಬಂಧನ

Kaikamba: ಮಟ್ಕಾ ದಾಳಿ: ಇಬ್ಬರು ಆರೋಪಿಗಳ ಬಂಧನ

Mangaluru: ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಸಾವುMangaluru: ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಸಾವು

Mangaluru: ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಸಾವು

Mangaluru: Prisoners obstruct prison officers’ duties

Mangaluru: ಜೈಲಾಧಿಕಾರಿಗಳ ಕರ್ತವ್ಯಕ್ಕೆ ಕೈದಿಗಳಿಂದ ಅಡ್ಡಿ; ಹಲ್ಲೆಗೆ ಯತ್ನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

sankranti-karnataka

ನಿಸರ್ಗದ ದಿವ್ಯಾರಾಧನೆಯ ಪ್ರತೀಕ ಮಕರ ಸಂಕ್ರಾಂತಿ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.