Mangaluru: ಹೃದ್ರೋಗ, ಕ್ಯಾನ್ಸರ್‌ಗೂ ಪ್ಲಾಸ್ಟಿಕ್‌ ದಾರಿ, ಹುಷಾರ್‌!

ಪ್ಲಾಸ್ಟಿಕ್‌ನಲ್ಲಿ ಪ್ಯಾಕ್‌ ಮಾಡಿದ ಬಿಸಿ ಆಹಾರ, ಸಾಂಬಾರ್‌, ಚಹಾ ಸೇವನೆ ಒಳ್ಳೆಯದಲ್ಲ; ದೀರ್ಘ‌ ಕಾಲ ಬಳಕೆಯಿಂದ ಮಹಿಳೆಯರಲ್ಲಿ ಪಿಸಿಒಡಿ, ನರಸಂಬಂಧಿ ರೋಗ ಸಾಧ್ಯತೆ

Team Udayavani, Oct 20, 2024, 5:22 PM IST

8

ಮಹಾನಗರ: ಮನುಷ್ಯನ ಆರೋಗ್ಯದ ಮೇಲೆ ಪ್ಲಾಸ್ಟಿಕ್‌ ಪರಿಣಾಮ ತತ್‌ಕ್ಷಣವಲ್ಲದಿದ್ದರೂ ದೀರ್ಘ‌ಕಾಲಿಕವಾಗಿ ಆಗುವುದು ಖಚಿತ. ಇದು ವೈದ್ಯರು ನೀಡುವ ಎಚ್ಚರಿಕೆ. ಅಷ್ಟೇ ಅಲ್ಲ, ದಿನನಿತ್ಯ ಬದುಕಿನಲ್ಲಿ ಪ್ಲಾಸ್ಟಿಕ್‌ ಆದಷ್ಟೂ ಕಡಿಮೆ ಬಳಕೆ ಮಾಡಿದರೆ ಉತ್ತಮ ಎನ್ನುವುದು ಅವರ ಸಲಹೆ.

ಅನುಕೂಲ ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್‌ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಆದರೆ ಪ್ಲಾಸ್ಟಿಕ್‌ ಸುದೀರ್ಘ‌ ಬಳಕೆಯಿಂದ ಕ್ಯಾನ್ಸರ್‌, ಹೃದ್ರೋಗ, ನರಸಂಬಂಧಿ ರೋಗಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್‌ ಡಾ| ಪ್ರಸನ್ನ ಮಿತ್ರ.

ಉತ್ಪಾದನೆಯಿಂದ ಬಳಕೆ ವರೆಗೆ ಅನಾರೋಗ್ಯಕರ
ಪ್ಲಾಸ್ಟಿಕ್‌ ಉತ್ಪಾದನೆ ವೇಳೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಅನಾರೋಗ್ಯಕರ ಮಾಲಿನ್ಯ ಯುಕ್ತ ರಾಸಾಯನಿಕಗಳನ್ನು ಉಸಿರಾಡುತ್ತಾರೆ ಹಾಗೂ ಹೊಗೆ ಸೇವಿಸುವ ಜನರಿಗೆ ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೋಗ ತರಬಲ್ಲದು.

ಹಿಂದೆ ಬಾಳೆ ಎಲೆಯಲ್ಲಿ ಪ್ಯಾಕ್‌ ಮಾಡಿ ಕೊಂಡು ಹೋಗುತ್ತಿದ್ದರೆ ಈಗ ಪ್ಲಾಸ್ಟಿಕ್‌ ಶೀಟ್‌, ಫಾಯಿಲ್‌ ರೀತಿಯೇ ಕಾಣುವ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್‌ ಮಾಡಿ ಕೊಂಡೊಯ್ದು ತಿನ್ನುವುದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಬಿಸಿ ಬಿಸಿ ಸಾಂಬಾರ್‌, ಚಹಾ-ಕಾಫಿಯನ್ನೇ ಪ್ಲಾಸ್ಟಿಕ್‌ ತೊಟ್ಟೆಗಳಲ್ಲಿ ಹಾಕಿ ದರೆ ಅದರಿಂದ ರಾಸಾಯನಿಕ ತಿನ್ನುವ ಆಹಾರ ಸೇರುವುದರಲ್ಲಿ ಸಂಶಯವೇ ಇಲ್ಲ. ಇದು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು.

ಪ್ಲಾಸ್ಟಿಕ್‌ ಎನ್ನುವುದು ಪಾಲಿ ಇಥಲಿನ್‌ ಮೊದ ಲಾದ ರಾಸಾಯನಿಕದಿಂದ ತಯಾರಾಗುತ್ತದೆ. ಅಲ್ಲದೆ ಕೆಲವೊಮ್ಮೆ ಪ್ಲಾಸ್ಟಿಕ್‌ಗಳಿಗೆ ಬಣ್ಣ ನೀಡಲು ಅದರೊಂದಿಗೆ ಕೆಲವೊಂದು ಭಾರೀ ಲೋಹ ಗಳನ್ನೂ ಬಳಸುವುದು ಇದೆ. ಅದರಲ್ಲಿ ಸೀಸ ದೇಹಕ್ಕೆ ವಿಷವಾಗಿ ಪರಿಣಮಿಸಬಲ್ಲದು. ಕ್ಯಾನ್‌ನಲ್ಲಿ ತುಂಬಿಸಿಡುವ ಆಹಾರಗಳಲ್ಲಿ ಕೂಡ ಇಂತಹ ಲೋಹಗಳ ಬಳಕೆಯಾಗುತ್ತದೆ.

ಪ್ಲಾಸ್ಟಿಕ್‌ ಬಾಟಲಿ ಮರುಬಳಕೆ ಬೇಡ
ಬಹುತೇಕ ಪ್ಲಾಸ್ಟಿಕ್‌ ಬಾಟಲಿಗಳು ಏಕ ಬಳಕೆಗೆಂದೇ ರೂಪಿತವಾಗಿರುತ್ತದೆ. ನೋಡಲು ಅಂದವಾಗಿದೆ ಎನ್ನುವ ಕಾರಣಕ್ಕೆ ಮತ್ತೆ ಮತ್ತೆ ನೀರು ಅಥವಾ ಇತರ ಪಾನೀಯ ತುಂಬಿ ಬಳಕೆ ಅದನ್ನೇ ಬಳಕೆ ಮಾಡುವುದು ನಮ್ಮಲ್ಲಿ ಅನೇಕರಿಗೆ ಅಭ್ಯಾಸವಾಗಿದೆ, ಆದರೆ ಮೇಲ್ನೋಟಕ್ಕೆ ಇದರಲ್ಲಿ ಏನೂ ಗೊತ್ತಾಗುವುದಿಲ್ಲ, ಆದರೆ ಇಂತಹ ಪ್ಲಾಸ್ಟಿಕ್‌ಗಳಿಂದ ಬೇಗನೆ ರಾಸಾಯನಿಕಗಳು ಬಿಡುಗಡೆಯಾಗಿ ಆಹಾರ, ನೀರಿಗೆ ಸೇರಿಕೊಂಡು ನಮ್ಮ ದೇಹವನ್ನು ಸೇರುತ್ತದೆ ಎನ್ನುತ್ತಾರೆ ಡಾ|ಪ್ರಸನ್ನ.

ಮೈಕ್ರೋಪ್ಲಾಸ್ಟಿಕ್‌ ಎಂಬ ಬ್ರಹ್ಮರಕ್ಕಸ!
ಯಾವ ಪ್ಲಾಸ್ಟಿಕ್‌ಗಳೂ ವರ್ಷಗಟ್ಟಲೆ ಕೊಳೆಯುವುದಿಲ್ಲ, ಆದರೆ ಕೆಲವು ವರ್ಷಗಳ ಬಳಿಕ ಕಣ್ಣಿಂದ ಮಾಯವಾಗುತ್ತದೆ. ಹೇಗೆ ಗೊತ್ತೇ? ಪ್ಲಾಸ್ಟಿಕ್‌ ಪುಡಿಯಾಗಿ ಕಣ್ಣಿಗೆ ಕಾಣದ ಸೂಕ್ಷ್ಮ ಕಣವಾಗಿ ಮಣ್ಣನ್ನು ಸೇರುತ್ತದೆ. ಇದು ನಡೆಯುತ್ತಲೇ ಇದೆ, ಹಾಗಾಗಿ ಮಣ್ಣಲ್ಲೆಲ್ಲಾ ಮೈಕ್ರೋ ಪ್ಲಾಸ್ಟಿಕ್‌ ಸೇರಿಕೊಂಡಿದೆ. ಇದು ಮಣ್ಣಿನ ಪೋಷಕಾಂಶ ಗುಣವನ್ನು ಕಡಿಮೆ ಮಾಡುತ್ತದೆ. ಇದರಿಂದ ನಾವು ಸೇವಿಸುವ ಆಹಾರವೂ ಕೂಡಾ ತನ್ನ ಪೌಷ್ಟಿಕತೆ ಕಳೆದುಕೊಳ್ಳುತ್ತದೆ. ಸುದೀರ್ಘ‌ ಪ್ಲಾಸ್ಟಿಕ್‌ಬಳಕೆಯಿಂದಲೂ ನಮ್ಮ ದೇಹಕ್ಕೆ ಮೈಕ್ರೋ ಪ್ಲಾಸ್ಟಿಕ್‌ ಸೇರಬಹುದು. ಈಗಾಗಲೇ ಸಾಗರದಲ್ಲಿ ಏಡಿಯಂತಹ ಜಲಚರಗಳ ದೇಹದಲ್ಲಿ ಕೂಡ ಮೈಕ್ರೋಪ್ಲಾಸ್ಟಿಕ್‌ ಪತ್ತೆಯಾಗಿದೆ, ಅವುಗಳ ಸೇವನೆ ಕೂಡ ಪರೋಕ್ಷವಾಗಿ ನಮ್ಮ ದೇಹಕ್ಕೆ ಪ್ಲಾಸ್ಟಿಕ್‌ ಅಂಶಗಳನ್ನು ಸೇರಿಸುತ್ತದೆ.

ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು
ಬಿಸ್ಪೆನೋಲ್‌ ಅಥವಾ ಬಿಪಿಎ: ಮುಖ್ಯವಾಗಿ ಆಹಾರವಸ್ತು, ಪಾನೀಯ ಪ್ಯಾಕೇಜಿಂಗ್‌ ಹಾಗೂ ಮರುಬಳಕೆ ಪ್ಲಾಸ್ಟಿಕ್‌ ಬಾಟಲಿ ಉತ್ಪಾದನೆಯಲ್ಲಿ ಬಳಕೆಯಾಗುತ್ತವೆ. ಇದು ಮಿದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಲ್ಲದು. ಮಹಿಳೆಯರಲ್ಲಿ ಪಿಸಿಒಡಿ ಕಾಯಿಲೆಗೂ ಕಾರಣವಾಗಬಲ್ಲದು ಎಂದು ಸಂಶೋಧನೆ ಶ್ರುತಪಡಿಸಿದೆ. ಅಲ್ಕಿಲ್‌ಫೆನೋಲ್‌: ಕೀಟನಾಶಕ, ಲೇಟೆಕ್ಸ್‌ ಪೈಂಟ್‌, ಪರ್ಸನಲ್‌ ಕೇರ್‌ ಉತ್ಪನ್ನ, ಪೈಂಟ್‌ಗಳಲ್ಲಿ ಇರುತ್ತದೆ. ಇದು ದೇಹಕ್ಕೆ ಸೇರಿಕೊಂಡರೆ ಪುರುಷರಲ್ಲಿ ನಪುಂಸಕತ್ವ ಉಂಟು ಮಾಡಬಲ್ಲದು. ಸ್ತನ ಕ್ಯಾನ್ಸರ್‌ಗೂ ಕಾರಣವಾಗಬಹುದು. ಫೆಥಲೇಟ್‌: ಪ್ಲಾಸ್ಟಿಕ್‌ನಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಬಳಕೆಯಾಗುವ ರಾಸಾಯನಿಕವಿದು. ಪಿವಿಸಿ, ಕಟ್ಟಡ ನಿರ್ಮಾಣ ವಸ್ತುಗಳು, ಸಾಲ್ವೆಂಟ್‌ಗಳು, ಆಹಾರ ಪ್ಯಾಕೇಜಿಂಗ್‌, ಮಕ್ಕಳ ಆಟಿಕೆ ಇತ್ಯಾದಿಗಳಲ್ಲಿ ಬಳಕೆಯಾಗುತ್ತದೆ. ಮನೆಯ ಧೂಳಿನಲ್ಲೂ ಇದು ಸೇರಿಕೊಳ್ಳುತ್ತದೆ. ಅನಿಮಿಯಾ, ಬೇಗನೆ ಮುಟ್ಟು ನಿಲ್ಲುವುದು ಇತ್ಯಾದಿ ಸಮಸ್ಯೆಗೆ ಕಾರಣವಾಗಬಹುದು.

ರೆಡ್ನೂಸ್‌-ರಿಯೂಸ್‌-ರಿಸೈಕಲ್‌ ಕಡ್ಡಾಯವಾಗಲಿ
ಮನುಷ್ಯ ಕೇವಲ ಅನುಕೂಲ ಎನ್ನುವ ವಿಚಾರವೊಂದನ್ನೇ ಹಿಡಿದುಕೊಂಡು ಪ್ಲಾಸ್ಟಿಕ್‌ ಅನ್ನು ಅನಗತ್ಯವಾಗಿ ಹೆಚ್ಚು ಬಳಕೆ ಮಾಡುತ್ತಿದ್ದಾನೆ. ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಅದರ ಪರ್ಯಾಯವನ್ನೇ ಬಳಸುವುದು ಉತ್ತಮ, ಸಾಧ್ಯವಾಗದಿದ್ದರೆ ಇರುವ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡಬಹುದು. ಇನ್ನೂ ಅದನ್ನು ಎಸೆಯುವ ಬದಲು ರಿಸೈಕಲ್‌ಗೆ ನೀಡಬಹುದು, ಇದರಿಂದ ನಮ್ಮ ಆರೋಗ್ಯವೂ ಸ್ವಸ್ಥವಾಗುತ್ತದೆ, ನಮ್ಮ ಪರಿಸರವೂ ಉಳಿಯುತ್ತದೆ ಎನ್ನುತ್ತಾರೆ ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಕಾಲೇಜಿನ ರೇಡಿಯೇಶನ್‌ ಆಂಕಾಲಜಿ ತಜ್ಞ ಡಾ|ಕೃಷ್ಣ ಶರಣ್‌.

ಮಕ್ಕಳ ಬೆಳವಣಿಗೆಗೆ ಅಡ್ಡಿ
ಪ್ಲಾಸ್ಟಿಕ್‌ ರಾಸಾಯನಿಕ ಅಂಶಗಳು ಬೆಳೆಯುವ ಮಕ್ಕಳ ಶರೀರಕ್ಕೆ ನಿರಂತರ ಸೇರುವುದರಿಂದ ಅವರ ಬೆಳವಣಿಗೆಗೂ ಇದು ಅಡ್ಡಿಯಾಗುತ್ತದೆ. ಮುಖ್ಯವಾಗಿ ಅವರ ಹೃದಯ ಆರೋಗ್ಯಕ್ಕೆ ಇದು ಹಾನಿಕಾರಕ. ನರರೋಗ, ಕ್ಯಾನ್ಸರ್‌ಗೂ ಕಾರಣವಾಗಬಲ್ಲದು.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು.
ವಾಟ್ಸಪ್‌: 9900567000

-ವೇಣು ವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Kar-kerala

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

BNg-Bulls

Pro Kabaddi: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–arsss

Mangaluru: RSS ವಿಜಯ ದಶಮಿ ಪಥಸಂಚಲನ

suicide (2)

MRPL ಸೆಕ್ಯುರಿಟಿ ಗಾರ್ಡ್‌ ಆತ್ಮಹ*ತ್ಯೆ ದೃಢ

Nanthooru-Acci

Mangaluru: ನಂತೂರು ಬಳಿ ಅಪಘಾತ: ಯುವತಿ ಮೃತ್ಯು

9

Ullal: ಕುಸಿಯುವ ಭೀತಿಯಲ್ಲಿದೆ ಗ್ರಾಮ ಪಂಚಾಯತ್ ಸದಸ್ಯೆ ಮನೆ!

Railway-Track

Mangaluru: ರೈಲು ಹಳಿಯಲ್ಲಿ ಕಲ್ಲಿರಿಸಿದ ಕಿಡಿಗೇಡಿಗಳು: ಭಾರೀ ಶಬ್ದಕ್ಕೆ ಬೆಚ್ಚಿದ ಸ್ಥಳೀಯರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ

1-a-sidili

Puttur: ಸಿಡಿಲು ಬಡಿದು ಹಾನಿ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

1-a-suddu

Kukke Subrahmanya: ದಿಢೀರ್‌ ಮಳೆಗೆ ತುಂಬಿ ಹರಿದ ದರ್ಪಣ ತೀರ್ಥ ನದಿ

1-mulky

Mulki: ಮನೆಗೆ ನುಗ್ಗಿ ಸೆರೆ ಸಿಕ್ಕ ಚಿರತೆ ; ಜನರಲ್ಲಿ ಹೆಚ್ಚಾದ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.