Mangaluru: ಪ್ಲಾಸ್ಟಿಕ್ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ
ಮೇಯರ್ ಫೋನ್ ಇನ್‌ನಲ್ಲಿ ಪ್ರತಿಧ್ವನಿಸಿದ ಸುದಿನ ಪ್ಲಾಸ್ಟಿಕ್ ಚಕ್ರವ್ಯೂಹ ಸರಣಿ
Team Udayavani, Nov 20, 2024, 8:53 AM IST
ಲಾಲ್‌ಬಾಗ್: ಏಕಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಮಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದೊಳಗೆ ಇರುವ ಪ್ಲಾಸ್ಟಿಕ್ ಉತ್ಪಾದನ ಕೇಂದ್ರಗಳಿಗೆ ತೆರಳಿ ನಿಗಾ ವಹಿಸಲಾಗು ವುದು. ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡು ತ್ತಿರುವ ನಗರದ ಅಂಗಡಿ, ಹೊಟೇಲ್, ಕ್ಯಾಟರಿಂಗ್, ಸಾರ್ವಜನಿಕರಿಗೆ ಅರಿವು- ಜಾಗೃತಿ ಮೂಡಿಸುವ ಕಾರ್ಯವನ್ನು ಪಾಲಿಕೆ ವತಿಯಿಂದ ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.
ಮಂಗಳವಾರ ಪಾಲಿಕೆಯಲ್ಲಿ ಮೇಯರ್ ಫೋನ್ ಇನ್‌ಗೆ ಕರೆ ಮಾಡಿದ ಜಯಪ್ರಕಾಶ್ ಎಕ್ಕೂರು ಅವರು “ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ನಗರದಲ್ಲಿ ಇದ್ದರೂ ಯಾಕೆ ಅನುಷ್ಠಾನವಾಗುವುದಿಲ್ಲ. ಪ್ಲಾಸ್ಟಿಕ್ ಎಲ್ಲಿ ಉತ್ಪಾದನೆ ಆಗುತ್ತದೆಯೋ ಅಲ್ಲಿಯೇ ತಡೆ ನೀಡುವ ಕೆಲಸವನ್ನು ಪಾಲಿಕೆ ನಡೆಸಲಿ. ‘ಉದಯವಾಣಿ’ ಪತ್ರಿಕೆಯು ಈ ನಿಟ್ಟಿನಲ್ಲಿ ಸುದೀರ್ಘ ವರದಿಯೊಂದಿಗೆ ಜಾಗೃತಿ ಮೂಡಿಸುವ ಕೆಲಸ ನಡೆಸಿತ್ತು. ಇದನ್ನು ಗಂಭೀರವಾಗಿ ಪಾಲಿಕೆ ಪರಿಗಣಿಸಬೇಕು ಎಂದರು. ಸರಿತಾ ಲೋಬೋ ಎಂಬವರು ಕರೆ ಮಾಡಿ “ಸಣ್ಣ ಅಂಗಡಿಗೆ ರೈಡ್ ಮಾಡುವ ಬದಲು ಉತ್ಪಾದನೆಯ ಹಂತದಲ್ಲೇ ನಿರ್ಬಂಧಿಸಿ’ ಎಂದು ಸಲಹೆ ನೀಡಿದರು.
ಮೇಯರ್ ಪ್ರತಿಕ್ರಿಯಿಸಿ ಪಾಲಿಕೆ ವ್ಯಾಪ್ತಿಯ ಒಳಗೆ ಉತ್ಪಾದನೆ ನಡೆಸುವ ಪ್ಲಾಸ್ಟಿಕ್ ಫ್ಯಾಕ್ಟರಿಗಳ ಬಗ್ಗೆ ನಿಗಾ ವಹಿಸಲಾಗುವುದು, ನಗರಕ್ಕೆ ಹೊರಗಡೆಯಿಂದಲೇ ಪ್ಲಾಸ್ಟಿಕ್ ಬರುತ್ತದೆ. ಅದರ ಮೇಲೂ ನಿಗಾ ಇಡುತ್ತೇವೆ. ಹಂತ ಹಂತವಾಗಿ ಮಟ್ಟಹಾಕಲು ಕ್ರಮ ಕೈಗೊಳ್ಳಲಾಗುವುದು. ಆದ್ಯತೆಯ ಮೇರೆಗೆ ಅರಿವು ಮೂಡಿಸುವ ಕಾರ್ಯ ನ.21ರಂದು ಪಾಲಿಕೆಯಲ್ಲಿ ನಡೆಯಲಿದೆ ಎಂದರು.
ಉಪಮೇಯರ್ ಭಾನುಮತಿ ಪಿ.ಎಸ್., ಸ್ಥಾಯೀ ಸಮಿತಿ ಅಧ್ಯಕ್ಷರಾದ ಮನೋಹರ ಶೆಟ್ಟಿ ಕದ್ರಿ, ವೀಣಾಮಂಗಳ, ಸುಮಿತ್ರಾ ಕರಿಯ, ಸರಿತಾ ಶಶಿಧರ್, ಉಪಾಯುಕ್ತರಾದ ಆಡಳಿತ- ರವಿಕುಮಾರ್, ಕಂದಾಯ-ಗಿರೀಶ್ ನಂದನ್, ಅಭಿವೃದ್ಧಿ -ಕೆ.ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾಟಿಪಳ್ಳದಲ್ಲಿ 4 ದಿನಕ್ಕೊಮ್ಮೆ ನೀರು!
ರೀಟಾ ಕಾಟಿಪಳ್ಳ ಕರೆ ಮಾಡಿ ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿ 4 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ. 2 ತಿಂಗಳಿನಿಂದ ಈ ಸಮಸ್ಯೆಯಿಂದ ನಲುಗುತ್ತಿದ್ದೇವೆ ಎಂದರು. ‘ಪರಿಶೀಲಿಸಲಾಗುವುದು’ ಎಂದ ಮೇಯರ್, ತಾತ್ಕಾಲಿಕವಾಗಿ ಟ್ಯಾಂಕರ್ ವ್ಯವಸ್ಥೆ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಶೋಕನಗರದ ಸರಿತಾ ಲೋಬೋ ಅವರು ವಾರ್ಡ್ ಕಮಿಟಿ ಸಭೆ ನಡೆಯದಿರುವ ಬಗ್ಗೆ ಪ್ರಶ್ನಿಸಿದಾಗ, ನೀತಿಸಂಹಿತೆ ಇತ್ತು. ಆಯುಕ್ತರಲ್ಲಿ ಚರ್ಚಿಸಿ ಈ ತಿಂಗಳಿನಿಂದ ಮರು ಆರಂಭ ನಡೆಸಲಾಗುತ್ತದೆ ಎಂದರು ಮೇಯರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.