ಕೃಷ್ಣಾಪುರ: ಕೀಳರಿಮೆಯಿಂದ ಮನನೊಂದು ಹಲ್ಲೆಯ ಕಥೆ ಕಟ್ಟಿದ ಬಾಲಕ !
Team Udayavani, Jul 1, 2022, 6:30 AM IST
ಸುರತ್ಕಲ್ : ಓದಿನಲ್ಲಿ ಹಿಂದಿದ್ದ ಬಾಲಕನೊಬ್ಬ ತನ್ನ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಕಥೆ ಕಟ್ಟಿ ಎಲ್ಲರನ್ನೂ ಬೇಸ್ತು ಬೀಳಿಸಿದ್ದಾನೆ.
ಜೂ. 27ರಂದು ಸಂಜೆ ಮದ್ರಸಾದ ಪಾಠ ಮುಗಿಸಿ ಮನೆಗೆ ಹೋಗುವ ಸಂದರ್ಭ ಹಲ್ಲೆ ಪ್ರಕರಣ ನಡೆದಿದೆ ಎಂದು ಅಪ್ರಾಪ್ತ ಹುಡುಗನೇ ಹಿರಿಯ ಮಧ್ಯಸ್ಥಿಕೆಯಲ್ಲಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಸಿಸಿ ಕೆಮರಾ ಪರಿಶೀಲಿಸಿದ್ದಾರೆ. ಜತೆಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಾಲಕನನ್ನು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ. ಓದಿನಲ್ಲಿ ಹಿಂದಿದ್ದು, ಸಹಪಾಠಿಗಳೂ ಆತನನ್ನು ದೂರವಿರಿಸಿದ್ದರು. ಮನೆಯಲ್ಲೂ ಬಡತನವಿದ್ದು, ಈ ಎಲ್ಲ ಕಿರಿಕಿರಿಯಿಂದ ಮನನೊಂದ ಬಾಲಕ ತಾನೇ ಅಂಗಿಯನ್ನು ಹರಿದುಕೊಂಡು ಗಮನ ಸೆಳೆಯಲು ಯತ್ನಿಸಿದ್ದಾನೆ. ಈ ಬಗ್ಗೆ ಮದ್ರಸಾ ಶಿಕ್ಷಕರಿಗೆ, ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಮ್ಯಾನೇಜ್ಮೆಂಟ್ ಕೋಟಾ; ರಾಷ್ಟ್ರ ಮಟ್ಟದ ಸಿಇಟಿ ನಡೆಸಲು ಸಿದ್ಧ: ಡಾ.ಅಶ್ವತ್ಥನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.