Mangaluru: ಚಿನ್ನದ ಬಿಸ್ಕೆಟ್ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ
Team Udayavani, Nov 14, 2024, 10:20 PM IST
ಮಂಗಳೂರು: ಹೊಲದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿವೆ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಂದ 4 ಲಕ್ಷ ರೂ. ಪಡೆದು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಮೂಲದ ಪ್ರಸ್ತುತ ಅಶೋಕನಗರ ರಂಗಪ್ಪ ಬೋವಿ ನೆಕ್ಕಿಲ್ನಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ಕರೆ ಮಾಡಿ ಜಮೀನಿನಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದ್ದು, 10 ಲಕ್ಷ ರೂ.ಗೆ ನೀಡುತ್ತೇನೆ ಎಂದು ತಿಳಿಸಿದ್ದಾನೆ. ಅದೇ ದಿನ ಮಧ್ಯಾಹ್ನ ತನ್ನ ಪತ್ನಿಯೊಂದಿಗೆ ಆತ ದೂರುದಾರರ ಮನೆಗೆ ಬಂದಿದ್ದು, ಮಾತುಕತೆ ವೇಳೆ ಅವರು 8 ಲಕ್ಷ ರೂ.ಗೆ ನೀಡುವುದಾಗಿ ತಿಳಿಸಿದ್ದರು.
ಚಿನ್ನದ ಅಸಲಿಯತ್ತು ತಿಳಿದುಕೊಳ್ಳಲು .05 ಮಿ.ಗ್ರಾಂ ಚಿನ್ನವನ್ನು ದೂರುದಾರರಿಗೆ ಕೊಟ್ಟಿದ್ದಾನೆ. ಕರೆ ಮಾಡಿದ್ದ ವ್ಯಕ್ತಿ ನನಗೆ ಹಣದ ಆವಶ್ಯಕತೆ ಇದೆ ಎಂದು 4 ಲಕ್ಷ ರೂ. ಕೊಡುವಂತೆ ತಿಳಿಸಿದ್ದಾನೆ. ವ್ಯವಹಾರದ ಉದ್ದೇಶಕ್ಕೆ ಹಲವು ಬಾರಿ ಆತ ಮನೆಗೆ ಭೇಟಿ ನೀಡಿದ್ದು, ಅಂತಿಮವಾಗಿ ನಕಲಿ ಚಿನ್ನವನ್ನು ನೀಡಿ 4 ಲಕ್ಷ ರೂ. ಹಣವನ್ನು ಪಡೆದು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.