mangaluru: ಕಬಡ್ಡಿ, ಬ್ಯಾಡ್ಮಿಂಟನ್‌ಗೆ ಸ್ಮಾರ್ಟ್‌ ಕಾಂಪ್ಲೆಕ್ಸ್‌

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇನ್ನು ಮಂಗಳೂರು ಆತಿಥ್ಯ

Team Udayavani, Jan 13, 2025, 1:16 PM IST

4

ಮಹಾನಗರ: ಪ್ರೊ ಕಬಡ್ಡಿ, ಶಟಲ್‌ – ಬ್ಯಾಡ್ಮಿಂಟನ್‌ನಂತಹ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಇನ್ನು ಮುಂದೆ ಮಂಗಳೂರಿನಲ್ಲಿಯೇ ಆಯೋಜಿ ಸಬಹುದು, ಆಸಕ್ತರು ತರಬೇತಿಯನ್ನೂ ಪಡೆಯಬಹುದು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆ ಯಲ್ಲಿ ಉರ್ವ ಮಾರುಕಟ್ಟೆ ಬಳಿ ಮಲ್ಟಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣ ಆಗುತ್ತಿದ್ದು, ಉದ್ಘಾಟನೆಗೂ ಸಿದ್ಧವಾಗಿದೆ.

ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು, ಆರು ಕಬಡ್ಡಿ ಕೋರ್ಟ್‌ ಸಹಿತ, ಮೂರು ಶಟಲ್‌ ಬ್ಯಾಡ್ಮಿಂಟನ್‌, ಪ್ರೇಕ್ಷಕರ ಗ್ಯಾಲರಿ ಕೂಡ ಇರಲಿದೆ. ಕೆಳ ಅಂತಸ್ತಿನಲ್ಲಿ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ. ಈ ಯೋಜನೆ ಪೂರ್ಣಗೊಳ್ಳಲು ಇನ್ನು ಎರಡು ತಿಂಗಳ ಆವಶ್ಯಕತೆ ಇದ್ದು, ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣ ನಿರ್ಮಾಣದ ಬಳಿಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿರುವ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ಕ್ರೀಡೆಗಳನ್ನು ಆಯೋಜನೆ ಮಾಡಬಹುದಾಗಿದೆ.

ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಎರಡು ಮಹಡಿ ಕ್ರೀಡೆಗೆ ಮೀಸಲಿಡಲಾಗಿದೆ. ಕೆಳ ಭಾಗದಲ್ಲಿ ಶಟಲ್‌ ಬ್ಯಾಡ್ಮಿಂಟನ್‌ ಮತ್ತು ಕಬಡ್ಡಿ ಅಂಕಣವಿದೆ. ವುಡನ್‌ ಪ್ಲೋರ್‌ನ ಮೇಲೆ 6 ಶಟಲ್‌ ಕೋರ್ಟ್‌ ಮತ್ತು ಮ್ಯಾಟ್‌ ಅಳವಡಿಸಿ 3 ಕಬಡ್ಡಿ ಕೋರ್ಟ್‌ ನಿರ್ಮಾಣ ಆಗುತ್ತಿದೆ. ಗ್ಯಾಲರಿಯಲ್ಲಿ ಸುಮಾರು 350 ಮಂದಿ ಕುಳಿತುಕೊಂಡು ಕ್ರೀಡೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಎಲ್ಲ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ, ಶೌಚಾಲಯ, ಡೈನಿಂಗ್‌, ಲಾಕರ್‌ ವ್ಯವಸ್ಥೆ ಇದೆ. ಮೂರನೇ ಲೆವೆಲ್‌ನಲ್ಲಿ 12.50 ಮೀ. ಎತ್ತರದ ಆಟದ ಪ್ರದೇಶ ಇದ್ದು, ಇದ್ದು, ಇದಕ್ಕೆ ಶೀಟ್‌ ರೂಫಿಂಗ್‌ ಮಾಡಲಾಗಿದ್ದು, ಒಟ್ಟು ವ್ಯವಸ್ಥೆ ಸೌಂಡ್‌ ಹಾಗೂ ಟೆಂಪರೇಚರ್‌ ಪ್ರೂಫ್‌ ಆಗಿದೆ. ಸಾರ್ವಜನಿಕರಿಗೆ ಕ್ರೀಡಾ ಸಂಕೀರ್ಣಕ್ಕೆ ಆಗಮಿಸಲು ಮೂರು ಕಡೆಯಿಂದ ರಸ್ತೆಯ ವ್ಯವಸ್ಥೆ ಇದೆ. ಅಲ್ಲಿಯೂ ಮೂಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಲ್ಲಿನ ವಾಣಿಜ್ಯ ಕಟ್ಟಡದ ಬಾಡಿಗೆಯಿಂದಲೇ ಕ್ರೀಡಾಸಂಕೀರ್ಣದ ನಿರ್ವಹಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಬಾಸ್ಕೆಟ್‌ಬಾಲ್‌ಗೆ ಮೀಸಲು
ರಾಜ್ಯ ಯುವಜನ ಕ್ರೀಡಾ ಇಲಾಖೆ ವತಿಯಿಂದಲೂ ಒಳಾಂಗಣ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಲಾಲ್‌ಬಾಗ್‌ ಬಳಿಯ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಟೇಬಲ್‌ ಟೆನ್ನಿಸ್‌ ಆಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವರ್ಷ ಪೂರ್ತಿ ಮುಂಗಡವೇ ಇಲ್ಲಿ ಬುಕ್ಕಿಂಗ್‌ ಆಗಿರುತ್ತದೆ. ಕೆಲವೊಂದು ಬಾರಿ ಶಾಲಾ-ಕಾಲೇಜು ಕ್ರೀಡಾಕೂಟಕ್ಕೂ ನೀಡಲಾಗುತ್ತದೆ. ಇದೇ ಕಾರಣಕ್ಕೆ ಆಗಾಗ್ಗೆ ಬರುವ ಕ್ರೀಡಾಪಟುಗಳಿಗೆ ಉಪಯೋಗ ಆಗುತ್ತಿಲ್ಲ. ಉರ್ವ ಮಾರುಕಟ್ಟೆ ಬಳಿ ನಿರ್ಮಾಣ ಆಗುತ್ತಿರುವ ಕ್ರೀಡಾ ಸಂಕೀರ್ಣ ಪೂರ್ಣವಾದ ಬಳಿಕ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಕೇವಲ ಬಾಸ್ಕೆಟ್‌ಬಾಲ್‌ಗೆ ಮೀಸಲಿಡಲು ಚಿಂತನೆ ನಡೆಯುತ್ತಿದೆ.

ಮಂಗಳೂರಿನ ಉರ್ವ ಮಾರುಕಟ್ಟೆ ಬಳಿ ಅತ್ಯಾಧು ನಿಕ ಕ್ರೀಡಾ ಸಂಕೀರ್ಣ ನಿರ್ಮಾಣ ವಾಗುತ್ತಿದೆ. ಪ್ರೊ ಕಬಡ್ಡಿ, ಶಟಲ್‌- ಬ್ಯಾಡ್ಮಿಂಟನ್‌ನಂತಹ ರಾಷ್ಟ್ರ ಮಟ್ಟದ ಕ್ರೀಡಾಕೂಟಳಲ್ಲಿ ಇನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿ ಸಬಹುದು. ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ.
– ರಾಜು ಕೆ., ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

6 ನಕ್ಸಲರ ಶರಣಾಗತಿ ಹಿಂದೆ ದನಾಗಾಯಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Pranavananda Swamiji demands grants for backward class corporations in the budget

ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Jammu Kashmir: Prime Minister Modi inaugurated the Z-Morh tunnel in Sonmargl

Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ಪ್ರೇಯಸಿಯ ಪತಿಯನ್ನು ಹತ್ಯೆಗೈಯಲು ಕರೆದಿದ್ದ ಬಾಡಿಗೆ ಹಂತಕರು ಕೊಂಡಿದ್ದು ರಿಕ್ಷಾ ಚಾಲಕನನ್ನು

ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು

ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2

Sanju Weds Geetha 2: ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Eddelu Manjunatha 2 movie releasing soon

Eddelu Manjunatha 2: ತೆರೆಯತ್ತ ʼಮಠʼ ಗುರುಪ್ರಸಾದ್‌ ಕೊನೆಯ ಕನಸು

6 ನಕ್ಸಲರ ಶರಣಾಗತಿ ಹಿಂದೆ ದನಾಗಾಯಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

7(1

Kundapura: ಸಂಕ್ರಾಂತಿಗೆ ನಿರೀಕ್ಷೆಯಷ್ಟು ಅರಳದ ಹೆಮ್ಮಾಡಿ ಸೇವಂತಿಗೆ

Aranthodu: A woman from Alletti village goes missing with two children

Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ

6

Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್‌ ಬಳಸುವಂತಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.