Mangaluru: ಸುಲ್ತಾನ್ ಬತ್ತೇರಿ ಕೋಟೆಗೆ ಬೇಕಿದೆ ಕಾಯಕಲ್ಪ
ಮೂಲ ವ್ಯವಸ್ಥೆಯ ಕೊರತೆ: ನಿರ್ವಹಣೆಯಿಲ್ಲದೇ ಸೊರಗಿದೆ ಪ್ರವಾಸಿತಾಣ
Team Udayavani, Sep 2, 2024, 7:37 PM IST
ಮಹಾನಗರ: ಹಿಂದೆ 1794ರಲ್ಲಿ ಟಿಪ್ಪು ಸುಲ್ತಾನನಿಂದ ನಿರ್ಮಿತಗೊಂಡು ಸದ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಸುಲ್ತಾನ್ ಬತ್ತೇರಿ ಕೋಟೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕಾಯಕಲ್ಪದ ಅಗತ್ಯವಿದೆ.
ಕೆಲವು ವರ್ಷಗಳ ಹಿಂದೆ ಕೋಟೆಗೆ ಬಣ್ಣ ಬಳಿದು ಸುತ್ತಮುತ್ತಲು ಸ್ವತ್ಛಗೊಳಿಸ ಲಾಗಿತ್ತು. ಆದರೆ ಸದ್ಯ ನಿರ್ವಹಣೆಯಿಲ್ಲದ ಕಾರಣ ಕೋಟೆ ಮತ್ತು ಕೋಟೆಯ ಸುತ್ತಮುತ್ತಲಿನ ಪ್ರದೇಶ ಸೊರಗಿಕೊಂಡಿದೆ. ಮಂಗಳೂರಿನ ತಣ್ಣೀರುಬಾವಿ ಬೀಚ್ ವೀಕ್ಷಣೆಗೆ ಆಗಮಿಸುವ ಹೆಚ್ಚಿನ ಮಂದಿ ನಗರದ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಕೋಟೆಯ ವೀಕ್ಷಣೆಗೂ ಬರುತ್ತಿ ದ್ದಾರೆ. ಆದರೆ
ಇಲ್ಲಿ ಮೂಲ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದೆ.
ಸುಲ್ತಾನ್ ಬತ್ತೇರಿ ಕೋಟೆಯನ್ನು ಪ್ರವೇಶಿಸಬೇಕಾದರೆ ಯಾವುದೇ ತಪಾಸಣೆ ಯಿಲ್ಲ. ಕೋಟೆಗೆ ಈ ಹಿಂದೆ ಭದ್ರತ ಸಿಬಂದಿ ನಿಯೋಜಿಸಲಾಗಿತ್ತು. ಆದರೆ ಸದ್ಯ ಆ ವ್ಯವಸ್ಥೆಯೂ ಇಲ್ಲ. ಕೋಟೆಯ ಪ್ರವೇಶದ್ವಾರ ತೆರೆದುಕೊಂಡಿದ್ದು, ಯಾರ ಅನುಮತಿಯೂ ಇಲ್ಲದೆ, ಸರಾಗವಾಗಿ ಕೋಟೆ ಹತ್ತಬಹುದು. ಕೋಟೆಯ ಗೋಡೆಯಲ್ಲಿ ಅಶ್ಲೀಲ ಶಬ್ದಗಳಿಂದ ಗೀಚಿದ್ದು, ಪ್ಲಾಸ್ಟಿಕ್ ಬಾಟಲ್, ಗುಟ್ಕಾ ಪ್ಯಾಕೇಟ್, ಚೀಲಗಳು, ಚಾಕೋಲೆಟ್ ರ್ಯಾಪರ್‌ಗಳು ಅಲ್ಲಲ್ಲಿ ಬಿದ್ದಿವೆ. ಅಲ್ಲದೆ, ಕೋಟೆಯೊಳಗೆ ಕುಳಿತುಕೊಳ್ಳಲೆಂದು ಈ ಹಿಂದೆ ಕಲ್ಲಿನ ಬೆಂಚುಗಳು ಇತ್ತು. ಸದ್ಯ ಅದನ್ನು ತೆಗೆಯಲಾಗಿದೆ.
ಸ್ಮಾರಕದ ರಕ್ಷಣೆಗೆ ಮುಂದಾಗಿ
ಸುಲ್ತಾನ್ ಬತ್ತೇರಿ ಸ್ಮಾರಕದ ಪ್ರವೇಶ ದ್ವಾರದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸೂಚನೆ ಪಾಲನೆ ಮಾಡಲು ತಿಳಿಸಲಾಗಿದೆ. ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 2010 ರ ಪ್ರಕಾರ ಯಾರಾದರೂ ಸ್ಮಾರಕವನ್ನು ನಾಶ ಮಾಡಿದರೆ,
ಸ್ಥಳಾಂತರಗೊಳಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದ್ದಲ್ಲಿ, ವಿಕೃತಗೊಳಿಸಿದರೆ, ದುರುಪಯೋಗಗೊಳಿಸಿದರೆ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ದಂಡ ವಿಧಿಸಬಹುದಾಗಿದೆ. ಎಂದು ಬರೆಯಲಾಗಿದೆ. ಆದರೆ ಇಲ್ಲಿನ ಸ್ಮಾರಕದ ರಕ್ಷಣೆಗೆ ಯಾರೂ ಮುಂದೆ ಬಾರದೇ ಇರುವುದು ವಿಪರ್ಯಾಸ.
ಕೋಟೆಯ ಎದುರು, ರಸ್ತೆ ಹೊಂಡ ಗುಂಡಿ
ನಗರದಿಂದ ಸುಲ್ತಾನ್ ಬತ್ತೇರಿಗೆ ಬರಲು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ತಿರುವು ಪಡೆದು ಉರ್ವ ಮಾರುಕಟ್ಟೆ ರಸ್ತೆಯ ಮೂಲಕ ತೆರಳಬೇಕು. ಸುಲ್ತಾನ್ ಬತ್ತೇರಿಗೆ ಪ್ರವೇಶ ಪಡೆಯುವ ಉರ್ವ ಮಾರುಕಟ್ಟೆ ತುಸು ದೂರದಿಂದ ಸುಮಾರು 300 ಮೀ.ನಷ್ಟು ಡಾಮರು ರಸ್ತೆಯಿದೆ. ಇದರ ಆರಂಭದಲ್ಲೇ ಹೊಂಡ-ಗುಂಡಿ ಸೃಷ್ಟಿಯಾಗಿದ್ದು, ವಾಹನ ಸಂಚಾರ ತ್ರಾಸದಾಯಕವಾಗಿದೆ. ಜೋರು ಮಳೆ ಸುರಿದರೆ ಗುಂಡಿ ತುಂಬಾ ನೀರು ನಿಂತು ಗುಂಡಿ ಯಾವುದು? ರಸ್ತೆ ಯಾವುದೆಂದು ತಿಳಿಯುವುದು ಕಷ್ಟ. ಅದೇ ರೀತಿಯ ಕೋಟೆಯ ಎದುರು ಭಾಗದಲ್ಲಿ ವಿಶಾಲ ಪ್ರದೇಶವಿದ್ದು, ಹೊಂಡ-ಗುಂಡಿಯಿಂದ ಆವೃತವಾಗಿದೆ. ಮಳೆಗಾಲದಲ್ಲಂತೂ ಇದರಲ್ಲಿ ನೀರು ನಿಂತು ವಾಹನಗಳು ಸ್ಕಿಡ್ ಆಗುವ, ಅಪಾಯ ತಂದೊಡ್ಡುವ ಸಾಧ್ಯತೆಯೇ ಹೆಚ್ಚು, ಸಂಬಂಧಪಟ್ಟ ಇಲಾಖೆ ತತ್‌ಕ್ಷಣವೇ ಎಚ್ಚೆತ್ತು ಈ ಕೋಟೆಯ ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.
ಬ್ರಿಟಿಷರ ಕಾಲದ ಕೋಟೆ
ಬ್ರಿಟಿಷರ ಯುದ್ಧದ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ಟಿಪ್ಪು ಸುಲ್ತಾನ್ ಈ ಕೋಟೆ ನಿರ್ಮಿಸಿದ. ಹೀಗಾಗಿ ಇದು ಯುದ್ಧ ಸಂಬಂಧಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು ಎಂದು ಹೇಳಲಾಗುತ್ತದೆ. ಈ ಗೋಪುರದ ಕೆಳಗೆ ನೆಲಮಾಳಿಗೆ ಇದ್ದು, ಇದನ್ನು ಗನ್ ಪೌಡರ್ ಶೇಖರಿಸಿ ಇಡಲು ಅಂದು ಬಳಸಲಾಗುತ್ತಿತ್ತು. ಇಲ್ಲಿ ಪ್ರಮುಖ ವಸ್ತುಗಳು, ಅಗತ್ಯ ಸಾಮಗ್ರಿಯನ್ನು ಗುಪ್ತವಾಗಿ ಇರಿಸುವ ಕಾರ್ಯ ಆಡಳಿತ ನಡೆಸುವ ರಾಜರಿಂದ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ.
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.