Mangaluru: ಹುಲಿಗಳ ಅಬ್ಬರಕ್ಕೆ ತಾಸೆ ಪೆಟ್ಟೇ ಆಧಾರ!

ಹುಲಿಯನ್ನು ಕುಣಿಸುವ ಜತೆಗೆ ಜನರನ್ನೂ ನಲಿಸುವ ತಾಸೆಯವರು | ಹಿಂದೆ ತಂಡಕ್ಕೆ 2 ತಾಸೆ ಸಾಕಿತ್ತು, ಈಗ 8-10 ಇದ್ದರೂ ಸಾಕಾಗುವುದಿಲ್ಲ

Team Udayavani, Oct 12, 2024, 12:30 PM IST

13

ಹುಲಿಗಳನ್ನು ಕುಣಿಸುವ ತಾಸೆಯವರು.

ಮಹಾನಗರ: ದೈವಾ ರಾಧನೆಯಲ್ಲಿ ಬಳಸುವ ‘ತಾಸೆ’ಗೆ ಕರಾವಳಿಯಲ್ಲಿ ಅತ್ಯಂತ ಪವಿತ್ರ ಸ್ಥಾನ. ಬಹಳಷ್ಟು ಶ್ರದ್ಧೆ ಹಾಗೂ ಅಚ್ಚುಕಟ್ಟಾಗಿ ತಾಸೆ ಬಡಿಯುವ ಕಾರ್ಯದಲ್ಲಿ ನಿರತ ರಾದ ನೂರಾರು ಮಂದಿ ಕರಾವಳಿ ಭಾಗದಲ್ಲಿದ್ದಾರೆ. ವಿಶೇಷವೆಂದರೆ, ಇವರ ಪೈಕಿ ಹಲವಾರು ಜನರು ಹುಲಿ ವೇಷದ ತಂಡಗಳಿಗೆ ಆಧಾರ ಶಕ್ತಿ!

ಹುಲಿ ವೇಷಧಾರಿ ಅಬ್ಬರಿಸಿ ಕುಣಿದಾಡ ಬೇಕಾದರೆ ‘ತಾಸೆ’ಯ ಶಬ್ದವೇ ಆಧಾರ. ತಾಸೆಯ ಪೆಟ್ಟಿನಿಂದ ಹೊರಬರುವ ಶಬ್ದದ ಸ್ವರ ಮತ್ತು ರಾಗಬದ್ಧವಾಗಿದ್ದರಷ್ಟೇ ಹುಲಿ ವೇಷಧಾರಿಗೆ ಅಬ್ಬರದ ಕುಣಿತ ಸಾಧ್ಯವಾಗುವುದು, ಹೀಗಾಗಿ ತಾಸೆಯ ಶಬ್ದವಿಲ್ಲದಿದ್ದರೆ ಹುಲಿ ವೇಷ ಪೂರ್ಣತ್ವ ಕಂಡುಕೊಳ್ಳುವುದಿಲ್ಲ. ಹುಲಿ ವೇಷಧಾರಿಗೆ ಮಾತ್ರವಲ್ಲ, ನೋಡುಗರ ಮನದಲ್ಲೂ ರೋಮಾಂಚನ ಮೂಡಲು, ನಿಂತಲ್ಲೇ ಕಾಲು ಕುಣಿಯಲು ತಾಸೆಯೇ ಬೇಕು!

ಹಿಂದೆ ಒಂದು ಹುಲಿ ವೇಷದ ತಂಡಕ್ಕೆ ಎರಡು ತಾಸೆ, ಒಂದು ಡೋಲು ಮಾತ್ರ ಬೇಕಾಗುತ್ತಿತ್ತು. ಆದರೆ, ಈಗ ಒಂದು ತಂಡದಲ್ಲಿ 8-10 ತಾಸೆ ಬಳಕೆಯಲ್ಲಿದೆ. ಮೂರು ಡೋಲು, ವಾದ್ಯದವರು ಬೇಕಾಗುತ್ತಾರೆ. ಹುಲಿ ವೇಷದ ತಂಡದ ಡಿಮ್ಯಾಂಡ್‌ ಮೇಲೆ ಈ ಸಿದ್ಧತೆ ಆಗುತ್ತದೆ. ಸ್ಪರ್ಧೆಗೆ ಹೋಗುವ ಹುಲಿ ವೇಷದ ತಂಡಕ್ಕೆ ತಾಸೆಯವರ ಜತೆಗೆ ತರಬೇತಿ ಕೂಡ ಇರುತ್ತದೆ. ತಾಸೆ ಬಡಿಯಲು ಮೊದಲು ನಾಗರ ಬೆತ್ತದ ಕೋಲು ಬಳಕೆಯಲ್ಲಿತ್ತು. ಈಗ ಫೈಬರ್‌ ಕೋಲು.

ವಿಶೇಷವೆಂದರೆ ದ.ಕ. ವಾದ್ಯ ಕಲಾವಿದರ ಸಂಘದ ವತಿಯಿಂದ ಕಳೆದ ವರ್ಷ ನವರಾತ್ರಿಗೆ 2 ದಿನ ಪದವಿನಂಗಡಿ ಸಮೀಪ ಬಾಂದೊಟ್ಟುವಿನಲ್ಲಿ ಹುಲಿವೇಷ ಕುಣಿತ ನಡೆದಿತ್ತು.

ತಾಸೆಗೆ ಬೇರೆ ಬೇರೆ ಸ್ವರ ಇರುತ್ತದೆ
ತಾಸೆ ಬಡಿಯುವುದು ಮನೆಯಲ್ಲಿ ಅಭ್ಯಾಸ ಮಾಡಿ ಕಲಿಯುವ ಪಾಠ. ಇದಕ್ಕೆ ಕೈ ಚಳಕ ಹಾಗೂ ಯುಕ್ತಿಯೇ ಆಧಾರ. ಕಳೆದ 40 ವರ್ಷದಿಂದ ತಾಸೆ ಬಡಿಯುವ ಸೇವೆಯಲ್ಲಿರುವ ರಮೇಶ್‌ ಮಿತ್ತನಡ್ಕ ಅವರ ಪ್ರಕಾರ, ಹುಲಿ ವೇಷ ಕುಣಿತಕ್ಕೆ ತಾಸೆಯ ಸದ್ದು ಬಹುಮುಖ್ಯ. ಹುಲಿ ವೇಷದ ಸಂದರ್ಭ ಹಿಂದೆ ಬಡಿಯುವ ಕ್ರಮ ಮತ್ತು ಈಗಿನ ಕ್ರಮದಲ್ಲಿ ಬದಲಾವಣೆ ಇದೆ.

ಹುಲಿ ಕುಣಿತಕ್ಕೆ ತಾಸೆಯ ಪೆಟ್ಟು ಬೇರೆ ಬೇರೆ ರೀತಿಯದ್ದಿದೆ. ಹುಲಿ ವೇಷ ಹೊರಡುವಾಗ, ಕುಣಿಯುವಾಗ, ಮಂಡೆ ಹಾಕುವಾಗ, ತೆಗೆಯುವಾಗ, ಹೊರಡುವಾಗ ಹೀಗೆ ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಪ್ರತ್ಯೇಕ ತಾಸೆಯ ಸ್ವರಗಳಿರುತ್ತವೆ ಎನ್ನುತ್ತಾರೆ ರಮೇಶ್‌ ಮಿತ್ತನಡ್ಕ.

ಹುಲಿ ಕುಣಿದಷ್ಟೂ ಖುಷಿ
ಹುಲಿ ವೇಷಧಾರಿ ಎಷ್ಟು ಆಸಕ್ತಿ ಹಾಗೂ ಶ್ರಮವಹಿಸಿ ಕುಣಿಯುತ್ತಾನೆಯೋ ಅಷ್ಟೇ ಆಸಕ್ತಿ ಶ್ರಮದಿಂದ ತಾಸೆಯವರು ಸಹಕಾರ ನೀಡುತ್ತಾರೆ. ಹುಲಿ ವೇಷ ಹಾಕಿದವರು ಉತ್ಸಾಹದಿಂದಿದ್ದರೆ ಆ ತಂಡವು ಹೆಚ್ಚು ಉತ್ಸಾಹದಲ್ಲಿರುತ್ತದೆ ಎನ್ನುತ್ತಾರೆ ಹುಲಿ ವೇಷದ ಐದಾರು ತಂಡಕ್ಕೆ ಕಳೆದ 10 ವರ್ಷದಿಂದ ತಾಸೆಯ ಕೆಲಸ ಮಾಡುವ ಪೃಥ್ವಿರಾಜ್‌ ಕಂಕನಾಡಿ.

ಹುಲಿಗಳಿಗೆ ಪ್ರತ್ಯೇಕ ಸ್ಟೆಪ್‌ ಇದೆ
1980ರಿಂದ ತಾಸೆ ಕೆಲಸದಲ್ಲಿರುವ ಬಾಲಕೃಷ್ಣ ಮುಲ್ಲಕಾಡು ಅವರ ಪ್ರಕಾರ, “ಹಿಂದೆ ಹುಲಿ ವೇಷದ ಕುಣಿತ ವ್ಯಾಯಾಮ ಶಾಲೆಯ ತಾಲೀಮನ್ನು ಒಳಗೊಂಡಿತ್ತು. ಹುಲಿ ವೇಷಧಾರಿಯ ಕಾಲಿನ ಚಲನವಲನ ನೋಡಿ ಅದರಂತೆ ತಾಸೆಯಲ್ಲಿ ನಾವು ಕೈಚಳಕ ಮಾಡುತ್ತಿದ್ದೆವು. ಆಗ ಅದೊಂದು ಶಿಸ್ತು. ಆದರೆ, ಈಗ ಹುಲಿ ಕುಣಿತಕ್ಕೆ ಪ್ರತ್ಯೇಕ ಸ್ಟೆಪ್‌ ಜಾರಿಗೆ ಬಂದಿದೆ. 10ಕ್ಕೂ ಅಧಿಕ ಸ್ಟೆಪ್‌ ಹಾಕುವವರು ಇದ್ದಾರೆ. ನಾವೆಲ್ಲ ಕಷ್ಟಪಟ್ಟು ತಾಸೆ ಕಲಿತವರು. ಈಗ ಅದರ ಬಗ್ಗೆ ಏನೂ ತಿಳಿಯದ ಮಂದಿ ಕಮೆಂಟ್‌ ಮಾಡುವುದು ಬೇಸರ ತರಿಸುತ್ತದೆ” ಎನ್ನುತ್ತಾರೆ ಬಾಲಕೃಷ್ಣ.

ಸಣ್ಣ ಗಾತ್ರದ ಚಿಮಿಣಿ ತಾಸೆ!
ಹಿಂದೆ ಚರ್ಮದ ತಾಸೆಯನ್ನೇ ಬಳಕೆ ಮಾಡುತ್ತಿದ್ದೆವು. ಚರ್ಮ ತಂದು ಅದನ್ನು ತಾಸೆಯ ಸ್ವರೂಪಕ್ಕೆ ತರಲು 5ರಿಂದ 8 ದಿನ ಬೇಕು. ಆದರೆ, ಈಗ ಅಷ್ಟು ಸಮಯ ಇಲ್ಲ. ಅದಕ್ಕಾಗಿ ಫೈಬರ್‌ ತಾಸೆ ಬಂದಿದೆ. ಇದನ್ನು ಸಿದ್ದಪಡಿಸಲು 2 ದಿನ ಸಾಕು. ಮೊದಲು 12 ಇಂಚಿನವರೆಗಿನ ತಾಸೆ ಇತ್ತು. ಈಗ ಸಣ್ಣ ಆಗಿ 8 ಇಂಚಿನ ‘ಚಿಮಿಣಿ ತಾಸೆ’ಯೂ ಬಂದಿದೆ. ಹಿಂದೆ ತಾಸೆಯ ಶಬ್ದ 1 ಮೈಲ್‌ ದೂರದವರೆಗೆ ಕೇಳುತ್ತಿತ್ತು. ಆದರೆ ಈಗಿನ ಶಬ್ದ ಹುಲಿ ವೇಷ ಕುಣಿಯುವ ವ್ಯಾಪ್ತಿಗೆ ಮಾತ್ರ ಕೇಳುತ್ತದೆ ಎನ್ನುತ್ತಾರೆ ರಮೇಶ್‌ ಮಿತ್ತನಡ್ಕ.

ದಿನೇಶ್‌ ಇರಾ

ಟಾಪ್ ನ್ಯೂಸ್

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

1-mag-1

Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.