Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
ಡಿವೈಡರ್ ಕ್ರಾಸಿಂಗ್ ತಪ್ಪಿಸಲು ಅಡ್ಡದಾರಿ | ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, Oct 18, 2024, 3:24 PM IST
ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು.
ಮಹಾನಗರ: ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುವ ಪರಿಪಾಠ ಹೆಚ್ಚಿನ ಕಡೆಗಳಲ್ಲಿ ಕಂಡು ಬರುತ್ತಿದ್ದು, ಅಡ್ಯಾರ್, ಕಣ್ಣೂರು ಭಾಗದಲ್ಲಿಯೂ ಇದು ಸಾಮಾನ್ಯವಾಗಿದೆ. ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯಲ್ಲೂ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ.
ಒಳ ರಸ್ತೆಗಳಿಂದ ಬರುವ ವಾಹನಗಳು ನಿಗದಿತ ಸ್ಥಳಗಳಿಗೆ ತಲುಪಲು ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುತ್ತವೆ. ಕಣ್ಣೂರು ಹಳೆ ಚೆಕ್‌ಪೋಸ್ಟ್ ಬಿಟ್ಟರೆ ಅಡ್ಯಾರ್‌ಕಟ್ಟೆ, ಅಲ್ಲಿಂದ ಮುಂದಕ್ಕೆ ಸಹ್ಯಾದ್ರಿ ಕಾಲೇಜು ಹೀಗೆ ಹೆದ್ದಾರಿಯಲ್ಲಿ ಡಿವೈಡರ್‌ಗಳು ಸಾಕಷ್ಟು ಅಂತರದಲ್ಲಿ ಇವೆ. ಆದ್ದರಿಂದ ವಾಹನ ಸವಾರರು ಡಿವೈಡರ್‌ಗಳನ್ನು ಬಳಸಿ ಸಾಗುವ ಬದಲು ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುತ್ತಾರೆ.
ದ್ವಿಚಕ್ರ ವಾಹನಗಳು, ಆಟೋಗಳು, ಕಾರು ಹೀಗೆ ಬಹುತೇಕ ಲಘು ವಾಹನಗಳನ್ನು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ದ್ವಿಚಕ್ರ ವಾಹನಗಳಂತೂ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಸಾಮಾನ್ಯ ಎನ್ನುವಂತಾಗಿದೆ. ಕೆಲವರು ಹೆಲ್ಮೆಟ್ ಧರಿಸದೆ, ರಾತ್ರಿ ವೇಳೆಯಲ್ಲಿ ಪ್ರಖರ ಹೆಡ್‌ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಾರೆ. ಇದರಿಂದ ಸರಿಯಾದ ಪಥದಲ್ಲಿ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು, ಅಡ್ಯಾರ್, ಪಡೀಲ್ ಪ್ರದೇಶಗಳು ಈಗಾಗಲೇ ಅಪಘಾತ ವಲಯಗಳಾಗಿ ಮಾರ್ಪಾಡಾಗಿದೆ. ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಕೂಡ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಈ ರೀತಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು, ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Siddaramaiah: ಕರಾವಳಿಗೆ ಎರಡು ಸರಕಾರಿ ಮೆಡಿಕಲ್ ಕಾಲೇಜು
CM Siddaramaiah: ಜಾತಿಗಣತಿ ವರದಿ ಮುಂದಿನ ಸಂಪುಟ ಸಭೆಯಲ್ಲಿ ಮಂಡನೆ
Mangaluru: ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳಿಗೆ ಕೃಪಾಂಕ ನೀಡಲು ತೀರ್ಮಾನ : ಸಿಎಂ
Fraud: ಆನ್‌ಲೈನ್ ಟ್ರೇಡಿಂಗ್: ಮಹಿಳೆಗೆ 15.27 ಲಕ್ಷ ರೂ. ವಂಚನೆ
Mangaluru: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.